ಸಿಗಂದೂರು ಸೇತುವೆಗೆ ಬಿ.ಎಸ್.ಯಡಿಯೂರಪ್ಪ ಹೆಸರಿಡುವಂತೆ ಒತ್ತಾಯ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಇದೇ 14 ರಂದು ಲೋಕಾರ್ಪಣೆಗೊಳ್ಳುತ್ತಿರುವ ಅಂಬಾರಗೊಡ್ಲು-ಕಳಸವಳ್ಳಿ
ಸಿಗಂದೂರು ಸೇತುವೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಹೆಸರಿಡುವಂತೆ ಹೊಸನಗರ ತಾಲ್ಲೂಕು ಆಖಿಲಭಾರತ ವೀರಶೈವ ಲಿಂಗಾಯಿತ ಮಹಾಸಭಾ ಸರ್ಕಾರವನ್ನು ಆಗ್ರಹಿಸಿ ನಾಡಕಛೇರಿಯ ಉಪತಹಶಿಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿರುವುದಾಗಿ ಹೊಸನಗರ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷ ಎಂ.ಎಸ್.ಉಮೇಶ ಮಾಣಿಕೆರೆ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now

ರಿಪ್ಪನ್‌ಪೇಟೆಯ ಶ್ರೀಬಸವೇಶ್ವರ ವೀರಶೈವ ಸಮಾಜದ `ಶಿವಮಂದಿರದಲ್ಲಿ” ಪತ್ರಿಕಾಗೋಷ್ಠಿ ನಡೆಸಿ, ಬಿ.ಎಸ್.ಯಡಿಯೂರಪ್ಪನವರು ಕರ್ನಾಟಕ ರಾಜ್ಯಕ್ಕೆ ವಿಶೇಷವಾಗಿ ಶಿವಮೊಗ್ಗ ಜಿಲ್ಲೆಗೆ ಅಭಿವೃದ್ದಿಯ ಹೊಸ ದಾಖಲೆಯನ್ನು ಸೃಷ್ಠಿಸಿದ್ದಾರೆ. ಜಿಲ್ಲೆಯಲ್ಲಿ ಅನೇಕ ವಿಶ್ವ ಭೂಪಟದಲ್ಲಿ ಗುರುತಿಸುವಂತಹ ಆಭಿವೃದ್ದಿ ಕಾಮಗಾರಿಗಳನ್ನು ಮಾಡಿದ್ದು ಇವರು ಒಂದು ಜಾತಿಗೆ ಸೀಮಿತವಾಗದೆ ಸರ್ವ ಜನಾಂಗದವರ ಜನನಾಯಕರಾಗಿ ತಮ್ಮ ಅಧಿಕಾರಾವಧಿಯಲ್ಲಿ ಸಮಾನತೆಯ ಪಾಲು ನೀಡಿದ್ದಾರೆ. ಇವರ ಪರಿಶ್ರಮದ ಫಲದಿಂದಾಗಿ ಇಂದು ಸಿಗಂದೂರು – ಅಂಬಾರಗೊಡ್ಲು – ಕಳಸವಳ್ಳಿ ಸೇತುವೆ ನಿರ್ಮಾಣವಾಗಿದೆ ಆ ಕಾರಣ ಅವರ ಈ ಪರಿಶ್ರಮದ ಕಾರಣ ಈ ಸೇತುವೆಗೆ ಬಿ.ಎಸ್.ಯಡಿಯೂರಪ್ಪನವರ ಹೆಸರಿಡಬೇಕು ರಾಜ್ಯ ಸರ್ಕಾರ ಈ ಕೂಡಲೇ ಅವರ ಹೆಸರನ್ನು ಪರಿಗಣಿಸಿ ಬಿ.ಎಸ್.ಯಡಿಯೂರಪ್ಪ ನವರು ಎಲ್ಲ ವರ್ಗದವರು ಒಪ್ಪುವಂತಹ ಪ್ರಶ್ನಾತೀತ ನಾಯಕರಾಗಿದ್ದು ಜಿಲ್ಲೆಗೆ ಅರವ ಕೊಡುಗೆ ಅಪಾರವಾಗಿದ್ದು ಇದನ್ನು ಪರಿಗಣಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಮನವಿ ಪತ್ರವನ್ನು ಕಳುಹಿಸಲಾಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಲೀಲಾ ಉಮಾಶಂಕರ್, ಡಿ.ಎಸ್.ಕರುಣೇಶ್ವರ, ಬಿ.ಎಲ್.ಲಿಂಗಪ್ಪಗೌಡ ಬೆನವಳ್ಳಿ, ವೇದಾಂತಪ್ಪಗೌಡ ಕೋಡೂರು, ತೀರ್ಥೇಶ್ ಬಟ್ಟೆಮಲ್ಲಪ್ಪ, ಯಶೋಧ ಮಲ್ಲಪ್ಪಗೌಡ ಅನೆಗದ್ದೆ, ಬಸವರಾಜ, ಗಿರೀಶ ಜಂಬಳ್ಳಿ, ವಸಂತ ಹೊಸನಗರ, ವಾಣಿ ವಿ.ಜಿ.ಶಿವಪ್ರಕಾಶ್, ಜೆ.ಜಿ.ಸದಾನಂದ ಜಂಬಳ್ಳಿ, ಕೆ.ಎನ್.ರಾಜಶೇಖರ ಕಮದೂರು, ಲೋಕೇಶ, ಪರಮೇಶ ಕಮದೂರು, ರಚನಾ, ಗಿರೀಶ ಆನೆಗದ್ದೆ ಇನ್ನಿತರರು, ಸಮಾಜದ ಮುಖಂಡರು ಹಾಜರಿದ್ದರು.

Leave a Comment