ವಸ್ತು ನಿಷ್ಠ ವರದಿ ಸಲ್ಲಿಸಿ : ಅಧಿಕಾರಿಗಳಿಗೆ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಿದಂಬರ ತಾಕೀತು

Written by Koushik G K

Published on:

ಹೊಸನಗರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಂಚ ಗ್ಯಾರಂಟಿ ಅನುಷ್ಠಾನ ಸಭೆಗೆ ಅಧಿಕಾರಿಗಳು ಅಗತ್ಯ ವಸ್ತು ನಿಷ್ಠ ವರದಿಯೊಂದಿಗೆ ಹಾಜರಾಗಬೇಕು. ಅಲ್ಲದೇ ಶೇ 100 ರಷ್ಟು ಗ್ಯಾರಂಟಿ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಸಂಬಂಧಪಟ್ಟ ಇಲಾಖೆಯ ಸಿಬ್ಬಂದಿಗಳಿಗೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್. ಬಿ. ಚಿದಂಬರ ಕಿವಿಮಾತು ಹೇಳಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೋಂದಣಿಯಾದ 29,011 ಪಡಿತರ ಕಾರ್ಡ್ ಫಲಾನುಭವಿಗಳಲ್ಲಿ 26,336, ಫಲಾನುಭವಿಗೆ ಗೃಹಲಕ್ಷ್ಮೀ ಹಣ ಬ್ಯಾಂಕ್ ಖಾತೆಗೆ ಜಮೆಯಾಗಿದ್ದು, 666 ಫಲಾನುಭವಿಗಳು ಯೋಜನೆಗೆ ಈವರೆಗೂ ಅರ್ಜಿ ಸಲ್ಲಿಸಿಲ್ಲ ಎಂದು ಸಿಡಿಪಿಒ ಕಚೇರಿ ಸಿಬ್ಬಂದಿ ಎಂ.ವಿಜಯಾ ಸಭೆಯ ಗಮನಕ್ಕೆ ತಂದರು.


ಈ ವರೆಗೂ ಒಟ್ಟು 191 ಫಲಾನುಭವಿಗಳ ಮರಣ ಹೊಂದಿದ್ದು, ಇದರಲ್ಲಿ 72 ಮಂದಿ ಹೆಸರು ಬದಲಾವಣೆಯಾಗಿದೆ. ಬದಲಾವಣೆಯಾದ 66 ಕುಟುಂಬಗಳ ಯಜಮಾನಿಗೆ ಹಣ ಜಮಾ ಆಗಿದೆ ಎಂದರು.


ಗೃಹಜ್ಯೋತಿ ಯೋಜನೆ ಅಡಿಯಲ್ಲಿ ತಾಲೂಕಿನಲ್ಲಿ ಮೇ ಹಾಗೂ ಜೂನ್ ತಿಂಗಳ ಅಂತ್ಯಕ್ಕೆ ಒಟ್ಟು ರೂ. 25, 55, 02,538 ಮೊತ್ತ ಪಾವತಿ ಆಗಿದೆ ಎಂದು ಮೆಸ್ಕಾಂ ವಿಭಾಗದ ಸಹಾಯಕ ಲೆಕ್ಕಾಧಿಕಾರಿ ಲೋಕೇಶ್ ಮನವರಿಕೆ ಮಾಡಿದರು.

ಶಕ್ತಿ ಯೋಜನೆಯಲ್ಲಿ ಜೂನ್-25 ಮಾಹೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಾಗರ ಘಟಕದಲ್ಲಿ ಪ್ರಯಾಣ ಮಾಡಿದ ಮಹಿಳೆಯರ ಸರಾಸರಿ‌ ಸಂಖ್ಯೆ 15,968 ಆಗಿದ್ದು,‌ಸಂಸ್ಥೆಯು ರೂ. 8,48,979 ಲಾಭಗಳಿದೆ. ಅಲ್ಲದೆ, ಶಿವಮೊಗ್ಗ ವಿಭಾಗದಲ್ಲಿ ಜೂನ್ ಅಂತ್ಯಕ್ಕೆ 87,671 ಮಹಿಳೆಯರು ಉಚಿತ ಪ್ರಯಾಣ ನಾಡಿದ್ದು ಸಂಸ್ಥೆಗೆ ರೂ. 36,47,636 ನಿವ್ವಳ ಲಾಭಗಳಿಸಿದೆ ಎಂದು ಸಂಸ್ಥೆಯ ಅರುಣ್ ಬೈಲೂರು ಸಭೆ ಮಾಹಿತಿ ನೀಡಿದರು.

ಯುವನಿಧಿ ಯೋಜನೆಯಲ್ಲಿ ತಾಲೂಕಿನ ಅರ್ಹ ವಿದ್ಯಾರ್ಥಿಗಳಿಗೆ ಮೇ ತಿಂಗಳ ಅಂತ್ಯಕ್ಕೆ ನಾಲ್ಕು ಡಿಪ್ಲೋಮಾ, 603 ಪದವಿ ವಿದ್ಯಾರ್ಥಿಗಳಿಗೆ ಒಟ್ಟು 17,22,000 ಹಣ ಜಮೆ ಆಗಿದೆ ಎಂದು ತಿಳಿದು ಬಂತು.


ಶಕ್ತಿ ಯೋಜನೆ ಜಾರಿಗೊಂಡು ಎರಡು ವರ್ಷಗಳು ಸಂದಿದ್ದು ಫಲಾನುಭವಿಗಳ ಸಂಖ್ಯೆ ರಾಜ್ಯಾದ್ಯಂತ ಒಟ್ಟಾರೆ 500 ಕೋಟಿ‌ ದಾಟಿದ ಹಿನ್ನಲೆಯಲ್ಲಿ ರಾಜ್ಯ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ ಅವರ ಆದೇಶದ ಮೇರೆಗೆ ಇದೇ ಜುಲೈ 14 ರ ಸೋಮವಾರ ಬೆಳಗ್ಗೆ 11ಕ್ಕೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ಸಿಗೆ ಪೂಜೆ ಸಲ್ಲಿಸಿ ಸಹಿ ಹಂಚವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅಧ್ಯಕ್ಷ ಚಿದಂಬರ ಸಭೆಯ ಮೂಲಕ ಮಾಹಿತಿ ಹಂಚಿಕೊಂಡರು.


ಸಭೆಯಲ್ಲಿ ಕಾರ್ಯದರ್ಶಿ ಇಒ ನರೇಂದ್ರ ಕುಮಾರ್, ಜಿಲ್ಲಾ ಸಮಿತಿ ಸದಸ್ಯ ಅಮೀರ್ ಹಂಜಾ ರಿಪ್ಪನ್ ಪೇಟೆ, ಸದಸ್ಯರಾದ ಹುಲುಗಾರು ಕೃಷ್ಣಮೂರ್ತಿ, ಅನಿಲ್ ಕುಮಾರ್, ಸಂತೋಷ್ ಮಳವಳ್ಳಿ, ಸಿಂಥಿಯಾ ಶೆರಾವೋ, ಕರುಣಾಕರ್, ಸುಮಂಗಲ ದೇವರಾಜ್, ಸಿಂಥಿಯಾ ಡೇವಿಡ್ ಶೆರಾವೋ, ನರಸಿಂಹ ಪೂಜಾರ್, ಆಹಾರ ಇಲಾಖೆಯ ಬಾಲಚಂದ್ರ ಹಾಜರಿದ್ದರು.

Leave a Comment