ಶಿವಮೊಗ್ಗ – ಒಡ್ಡಿನಕೊಪ್ಪದ ಸಮೀಪದ ಪುಟ್ಟಪ್ಪ ಕ್ಯಾಂಪ್ ಬಡಾವಣೆಯಲ್ಲಿ ಶನಿವಾರ ರಾತ್ರಿ ಸುಮಾರು 1 ಗಂಟೆ ಸುಮಾರಿಗೆ ಆರು ದುಷ್ಕರ್ಮಿಗಳು ಶಸ್ತ್ರಾಸ್ತ್ರ ಹಿಡಿದು ರಸ್ತೆಗಳಲ್ಲಿ ಸಂಚರಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಸ್ಥಳೀಯರಲ್ಲಿ ಭೀತಿಯನ್ನು ಮೂಡಿಸಿದ್ದು, ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸಿಸಿಟಿವಿಯಲ್ಲಿ ಸೆರೆಯಾದ ಚಿತ್ರಣ:
- ಶಸ್ತ್ರಾಸ್ತ್ರಗಳನ್ನು ಸೊಂಟದಲ್ಲಿ ಇಟ್ಟುಕೊಂಡು, ಬಟ್ಟೆಗಳಿಂದ ಮುಖ ಮುಚ್ಚಿಕೊಂಡು ನಡೆದುಕೊಂಡು ಹೋಗುತ್ತಿರುವ ಆರು ಮಂದಿ
- ಜೀನ್ಸ್ ಪ್ಯಾಂಟ್, ಬನಿಯನ್ ಧರಿಸಿದ ಸ್ಥಿತಿಯಲ್ಲಿ ದುಷ್ಕರ್ಮಿಗಳು ರಸ್ತೆಗಳಲ್ಲಿ ಅಡವಿ ಮಾಡಿದ್ದಾರೆ
- ಕೈಯಲ್ಲಿ ಟಾರ್ಚ್, ಬ್ಯಾಗ್, ಮತ್ತು ಒಬ್ಬನ ಕೈಗೆ ಗ್ಲೌಸ್ ಧರಿಸಿದ್ದ ದೃಶ್ಯಗಳು
- ಸಿಸಿಟಿವಿ ದೃಶ್ಯಾವಳಿಯು ಸುಮಾರು 2.5 ನಿಮಿಷಗಳಷ್ಟು ಉದ್ದವಿದ್ದು, ಹಲವು ರಸ್ತೆಗಳಲ್ಲಿ ಅವರು ಸಂಚರಿಸಿದ ದೃಶ್ಯವಿದೆ
ಪೊಲೀಸ್ ಕಾರ್ಯಾಚರಣೆ:
ಘಟನೆಯ ಮಾಹಿತಿ ಪಡೆದ ಸ್ಥಳೀಯರು ತಕ್ಷಣವೇ ತುಂಗಾ ನಗರ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ಗುರುತು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿದೆ.
ಸಾರ್ವಜನಿಕರ ಪ್ರತಿಕ್ರಿಯೆ:
“ರಾತ್ರಿ ಒಂದು ಗಂಟೆಗೆ ಹೀಗೆ ದುಷ್ಕರ್ಮಿಗಳು ಬೀದಿಯಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಓಡಾಡೋದು ಭಯಗೊಳಿಸಿದೆ . ನಮ್ಮ ಮಕ್ಕಳ ರಕ್ಷಣೆ ಬಗ್ಗೆ ಆತಂಕವಾಗಿದೆ” ಎಂದು ಒಬ್ಬ ಸ್ಥಳೀಯ ನಿವಾಸಿ ತಿಳಿಸಿದ್ದಾರೆ.
ಸಾಗರ-ಹೊಸನಗರ ತಾಲ್ಲೂಕಿಗೆ ₹ 50 ಕೋಟಿ ಬಂಪರ್ ಅನುದಾನ !
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.