ಹೊಸನಗರ ತಾಲೂಕು ಭೂ ನ್ಯಾಯ ಮಂಡಳಿಗೆ ಸದಸ್ಯರ ನೇಮಕ

Written by Koushik G K

Updated on:

ಹೊಸನಗರ: ತಾಲೂಕಿನ ಭೂ ನ್ಯಾಯ ಮಂಡಳಿ ನೂತನ ಸದಸ್ಯರಾಗಿ ಅಮೃತ ಗ್ರಾಮದ ಹೆಚ್.ಎಂ.ಬಷೀರ್ ಅಹಮದ್, ಪುರಪ್ಪೆಮನೆ ಗ್ರಾಮದ ಕಡೆಕಲ್ ನಾಗರಾಜ್, ಬಲಗೋಡಿ ಗ್ರಾಮದ ಬಿ.ಕೆ.ವೆಂಕಟೇಶ್ ಸಾಮಾನ್ಯ ವರ್ಗದ ಸದಸ್ಯರಾಗಿ ಹಾಗೂ ಕಚ್ಚಿಗೆಬೈಲು ವಾಸಿ ಕುಮಾರಿ ಕೆ.ವೈ. ನಾಗವೇಣಿ ಪರಿಶಿಷ್ಟ ಜಾತಿ ಸದಸ್ಯೆಯಾಗಿ ನೇಮಕಗೊಂಡಿದ್ದಾರೆ.

WhatsApp Group Join Now
Telegram Group Join Now
Instagram Group Join Now

ನೂತನ ಸದಸ್ಯರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ, ಕಾರ್ಯದರ್ಶಿ ಡಿ.ಎಂ.ಸದಾಶಿವ ಶ್ರೇಷ್ಠಿ ಸಹಿತ ಹಲವಾರು ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರು ಅಭಿನಂದಿಸಿದ್ದಾರೆ.

ಈ ವೇಳೆ ಪ್ರಮುಖರಾದ ಬಗರ್ ಹುಕುಂ ಸಮಿತಿ ಸದಸ್ಯ ನೆರಲೆ ಸ್ವಾಮಿ, ವೀರೇಶ್, ಹೆದ್ದಾರಿಪುರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಸಚಿನ್ ಗರ್ತಿಕೆರೆ, ಪ್ರವೀಣ್ ಬೇಕರಿ, ಜಯನಗರ ಗುರು, ಉಬೇದ್ ಸಾಬ್, ವಿಜಯ್ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಇಕ್ಬಲ್ ಉಪಸ್ಥಿತರಿದ್ದರು.

ತಾಳಗುಪ್ಪ – ಯಶವಂತಪುರ ನಡುವೆ ಮತ್ತೆ ಎರಡು ವಿಶೇಷ ರೈಲುಗಳು: ಆಗಸ್ಟ್ 1, 2, 8, 9ರಂದು ಸಂಚಾರ

Leave a Comment