ಹೊಸನಗರ : ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಎಜೆಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಜೆಸಿಎಂ ರಸ್ತೆಯಲ್ಲಿರುವ ಪ್ರದೀಪ್‌ರ ಒಡೆತನದ ಈ ಹಿಂದೆ ಇದ್ದ ಶ್ರೀನಿವಾಸ ಚಿತ್ರಮಂದಿರದ ಕಟ್ಟಡದ ಗೋಡೆ ಕುಸಿತವಾಗಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಸುಮಾರು 30 ವರ್ಷಗಳ ಹಿಂದೆ ಈ ಕಟ್ಟಡ ಶ್ರೀನಿವಾಸ ಚಿತ್ರಮಂದಿರವಾಗಿ ಇಲ್ಲಿನ ಜನರಿಗೆ ಮನರಂಜನೆ ನೀಡುತ್ತಿತ್ತು. ನಂತರ ಚಿತ್ರ ಮಂದಿರವನ್ನು ಮುಚ್ಚಿ ಗ್ಯಾರೇಜ್ ಮಾಡಲು ಅನುವು ಮಾಡಿಕೊಡಲಾಗಿತ್ತು. ಇಂದು ಭಾನುವಾರವಾಗಿರುವುದರಿಂದ ಗ್ಯಾರೇಜಿನಲ್ಲಿ ಯಾರು ಇರಲಿಲ್ಲ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಒಂದು ಬದಿಯ ಗೋಡೆ ಕುಸಿತ ಕಂಡಿದೆ. ಈ ಘಟನೆಯಲ್ಲಿ ಕಟ್ಟಡದ ತಗಡು ಹಾಗೂ ಸಿನಿಮಾ ಪ್ರಾಜೆಕ್ಟರ್‌ಗೆ ಹಾನಿಯಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.