ಶಿವಮೊಗ್ಗ: ಚಿನ್ನದ ನಾಣ್ಯ ನೀಡುತ್ತೇವೆ ಎಂಬ ನಂಬಿಕೆಯ ಮೇಲೆ ಮಂಗಳೂರಿನ ವ್ಯಕ್ತಿಯೊಬ್ಬರು ₹2 ಲಕ್ಷ ರೂ. ವಂಚನೆಗೊಳಗಾದ ಘಟನೆ ವರದಿಯಾಗಿದೆ. ಈ ಕುರಿತು ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೂಡಯ್ಯ ಆಚಾರ್ಯ (67) ಎಂಬ ಮಂಗಳೂರಿನ ವ್ಯಕ್ತಿಗೆ ಅನಾಮಧೇಯ ವ್ಯಕ್ತಿಯೊಬ್ಬರು ಕರೆ ಮಾಡಿ,“ನೆಲದಲ್ಲಿ ಚಿನ್ನದ ನಾಣ್ಯ ಸಿಕ್ಕಿವೆ, ಅವು ಮಾರಾಟಕ್ಕೆ ಇವೆ” ಎಂದು ನಂಬಿಸಿದ್ದಾನೆ.ಇದನ್ನ ನಂಬಿದ ಆಚಾರ್ಯ, ವಂಚಕರ ಸೂಚನೆಯಂತೆ ಜುಲೈ 30, 2025 ರಂದು ಬೆಳಗ್ಗೆ 6:30 ಗಂಟೆಗೆ ಶಿವಮೊಗ್ಗದ ಹೊರವಲಯ ಈಶ್ವರ ವನದ ಬಳಿ ಹೋಗಿದ್ದಾರೆ.
ವಂಚಕನು ತನ್ನೊಂದಿಗೆ ಮಹಿಳೆಯೊಬ್ಬರನ್ನು ಕರೆದುಕೊಂಡು ಬಂದು, ಚೀಲವೊಂದರಲ್ಲಿ ನಾಣ್ಯವಿಟ್ಟು, ಆಚಾರ್ಯರಿಂದ ₹2 ಲಕ್ಷ ಪಡೆದುಕೊಂಡಿದ್ದಾನೆ.ಅದಾದ ನಂತರ:ಇನ್ನೊಬ್ಬ ಬೈಕ್ ನವನು ಸ್ಥಳಕ್ಕೆ ಬಂದು ಬ್ಯಾಗ್ ಚೆಕ್ ಮಾಡಬೇಕೆಂದು ಬೆದರಿಕೆ ನೀಡಿದ್ದಾನೆ ಬಳಿಕ ವಂಚಕರು ಎಲ್ಲರೂ ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಎಲ್ಲ ಮಾಹಿತಿ ಚೂಡಯ್ಯ ಆಚಾರ್ಯ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತನಿಖೆ ಪ್ರಗತಿಯಲ್ಲಿದೆ:
ವಿನೋಬನಗರ ಪೊಲೀಸರು ಪ್ರಕರಣ ದಾಖಲಿಸಿ, ವಂಚಕರ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ, ಕರೆ ದಾಖಲಾತಿ ಸೇರಿದಂತೆ ತಾಂತ್ರಿಕ ಆಧಾರಗಳನ್ನೂ ಬಳಸಲಾಗುತ್ತಿದೆ.
ಸಾರ್ವಜನಿಕರಿಗೆ ಎಚ್ಚರಿಕೆ:
ಈ ರೀತಿಯ ವಂಚನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ:
“ಅನಾಮಧೇಯ ವ್ಯಕ್ತಿಗಳ ಕರೆಗಳ ಮೇಲೆ ನಂಬಿಕೆ ಇಡುವದನ್ನು ತಪ್ಪಿಸಿ. ಚಿನ್ನ, ಹಣ, ಆಸ್ತಿ ಸಂಬಂಧಿತ ವ್ಯವಹಾರಗಳನ್ನು ನೇರವಾಗಿ ನಿರ್ವಹಿಸದಿರಿ.”