ಶ್ರೀಕ್ಷೇತ್ರ ಹೊಂಬುಜದಲ್ಲಿ ಯಜ್ಞೋಪವೀತ ಧಾರಣೆ | ಯಜ್ಞೋಪವೀತ ಧಾರಣೆಯಿಂದ ಜೀವನಕ್ಕೆ ಶ್ರೀರಕ್ಷೆ ; ಶ್ರೀಗಳು

Written by Mahesha Hindlemane

Published on:

ರಿಪ್ಪನ್‌ಪೇಟೆ : ‘ಜೈನ ಧರ್ಮಿಯರು ಜೈನ ಸಿದ್ಧಾಂತಗಳನ್ನು ಅನೂಚಾನ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಸಮ್ಯಕ್ ದರ್ಶನ, ಜ್ಞಾನ, ಚಾರಿತ್ರ್ಯ ಆದರ್ಶಪ್ರಾಯವಾಗುತ್ತದೆ’ ಎಂದು ಅತಿಶಯ ಶ್ರೀಕ್ಷೇತ್ರ ಹೊಂಬುಜ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ನೂಲು ಹುಣ್ಣಿಮೆಯಂದು ತಿಳಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

‘ಯಜ್ಞೋಪವೀತ ಧಾರಣೆಯು ರತ್ನತ್ರಯಗಳ ಧಾರಣೆಯ ಸಂಕೇತವಾಗಿದ್ದು, ಜೀವನಕ್ಕೆ ಶ್ರೀರಕ್ಷೆ ಆಗಿದೆ’ ಎಂದು ಭಕ್ತರನ್ನು ಆಶೀರ್ವದಿಸಿ ಹರಸಿದರು.

ಪ್ರಾತಃಕಾಲ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಮತ್ತು ಅಭೀಷ್ಠವರಪ್ರದಾಯಿನಿ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಪೂರ್ವ ಪರಂಪರೆಯ ಜಿನಾಗಮೋಕ್ತ ಪೂಜಾ ವಿಧಿ-ವಿಧಾನಗಳು ಪೂಜ್ಯ ಸ್ವಸ್ತಿಶ್ರೀಗಳ ಸಾನಿಧ್ಯದಲ್ಲಿ ನೆರವೇರಿತು.

ಶ್ರೀ ಕುಂದಕುಂದ ವಿದ್ಯಾಪೀಠ ಗುರುಕುಲದ ವಿದ್ಯಾರ್ಥಿ ವೃಂದದವರು ಹಾಗೂ ಊರ ಪರವೂರ ಭಕ್ತಸಮುದಾಯದವರು ಶ್ರೀಗಳವರಿಂದ ಯಜ್ಞೋಪವೀತ ಪಡೆದು ಧನ್ಯರಾದರು.

Leave a Comment