ಶಿವಮೊಗ್ಗ ಜಿಲ್ಲೆಯಲ್ಲಿ 700ಕ್ಕೂ ಹೆಚ್ಚು ಔಷಧಿ ಸಸ್ಯವರ್ಗ ಅಳಿವಿನ ಅಂಚಿನಲ್ಲಿ – ಆಯುರ್ವೇದ ಸಂಸ್ಥೆ ಸ್ಥಾಪನೆಗೆ ಮನವಿ

Written by Koushik G K

Published on:

ಶಿವಮೊಗ್ಗ: ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ಕೇಂದ್ರ ಆಯುಷ್ ಸಚಿವರಾದ ಪ್ರತಾಪ್ ರಾವ್ ಗಣಪತ ರಾವ್ ಜಾದವ್ ಅವರನ್ನು ನವದೆಹಲಿ‌ನಲ್ಲಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಅವರು,

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 700ಕ್ಕೂ ಹೆಚ್ಚು ಔಷಧಿ ಸಸ್ಯ ಪ್ರಜಾತಿಗಳು ಅಳಿವಿನ ಅಂಚಿನಲ್ಲಿ ಇರುವುದರಿಂದ, ಅವುಗಳನ್ನು ಸಂರಕ್ಷಿಸಿ ಪೋಷಿಸಲು ಹಾಗೂ ಆಯುರ್ವೇದ ಮತ್ತು ಪ್ರಾಕೃತಿಕ ಚಿಕಿತ್ಸಾ ಕ್ಷೇತ್ರವನ್ನು ಉತ್ತೇಜಿಸಲು ಅಖಿಲ ಭಾರತ ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಸ್ಥೆ (All India Institute of Ayurveda, Yoga & Naturopathy) ಸ್ಥಾಪನೆಯ ಅಗತ್ಯವಿದೆ ಎಂದು ಮನವಿ ಸಲ್ಲಿಸಿದರು.

ಈ ಸಂಸ್ಥೆ ಸ್ಥಾಪನೆಯಾದರೆ:

  • ಔಷಧಿ ಸಸ್ಯಗಳ ಸಂರಕ್ಷಣೆ ಸಾಧ್ಯವಾಗುತ್ತದೆ,
  • ಆಯುರ್ವೇದ ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗೆ ಅವಕಾಶ ಸಿಗುತ್ತದೆ,
  • ಜಿಲ್ಲೆಯ ಯುವಕರಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶಗಳು ಲಭಿಸುತ್ತವೆ ಎಂದು ಒತ್ತಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಪ್ರತಾಪ್ ರಾವ್ ಜಾದವ್ ಅವರು, ಈ ಪ್ರಸ್ತಾವವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

Leave a Comment