ಹೊಸನಗರ ; 110 ವರ್ಷಗಳ ಇತಿಹಾಸವಿರುವ ಹೊಸನಗರ-ಸಾಗರ ಶಿವಮೊಗ್ಗದಲ್ಲಿ ಬ್ಯಾಂಕ್ ಶಾಖೆ ಹೊಂದಿ ಜನಸ್ನೇಹಿಯಾಗಿ ಸೇವೆ ಸಲ್ಲಿಸುತ್ತಿರುವ ಗಣಪತಿ ಬ್ಯಾಂಕ್ 2024-25ನೇ ಸಾಲಿನಲ್ಲಿ ಮೂರು ಶಾಖೆ ಸೇರಿ ಒಟ್ಟು 3,61,36,258 ರೂ. ಲಾಭ ಗಳಿಸಿದೆ ಎಂದು ಮೂರು ಶಾಖೆಯ ಮುಖ್ಯ ಕಾರ್ಯನಿರ್ವಣಾಧಿಕಾರಿ ಲಲಿತಾಂಬಿಕೆ ಹೇಳಿದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಮುದಾಯಭವನದಲ್ಲಿ ಗ್ರಾಹಕರ ಸಭೆಯನ್ನು ಏರ್ಪಡಿಸಲಾಗಿದ್ದು ಈ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು 110 ವರ್ಷಗಳಿಂದ ಗ್ರಾಹಕರಿಗೆ ಅನುಕೂಲಕರವಾಗಿ ಸೇವೆ ಮಾಡುತ್ತಾ ಬರುತ್ತಿದ್ದು ಇಲ್ಲಿಯವರೆಗೆ ಒಂದು ಕಪ್ಪುಚುಕ್ಕೆಯು ಇಲ್ಲದಂತೆ ಸೇವೆ ಸಲ್ಲಿಸಿದ್ದೇವೆ. ನಾವು ಜನರೊಂದಿಗೆ ಹಾಗೂ ಗ್ರಾಹಕರೊಂದಿಗೆ ಜನಸೇಹಿಯಾಗಿ ಸೇವೆ ಸಲ್ಲಿಸುವುದರ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ಗಳಿಗೂ ಕಮ್ಮಿಯಿಲ್ಲದಂತೆ ಸೇವೆ ಸಲ್ಲಿಸಿದ ಹೆಮ್ಮೆ ನಮಗಿದೆ. ಹೊಸನಗರ ಗಣಪತಿ ಶಾಖೆಯು 22 ವರ್ಷಗಳಿಂದ ಹೊಸನಗರದಲ್ಲಿ ಸೇವೆ ಸಲ್ಲಿಸುತ್ತಿದ್ದು ಇಲ್ಲಿನ ಸಿಬ್ಬಂದಿಗಳು ಗ್ರಾಹಕರಿಗೆ ಅನುಕೂಲಕರವಾಗಿ ತ್ವರಿತವಾಗಿ ಸೇವೆ ಸಲ್ಲಿಸಿದ್ದು ಹೊಸನಗರದ ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಾನು ಮುಂದಿನ ದಿನದಲ್ಲಿ ನಮ್ಮ ಬೈಲವನ್ನು ತಿದ್ದುಪಡಿ ಮಾಡಿಕೊಂಡು ಗ್ರಾಹಕರಿಗೆ ಅನುಕೂಲಕರವಾಗಿ ಇನ್ನೂ ಉತ್ತಮ ಸೇವೆ ಮಾಡುವ ಯೋಜನೆಯನ್ನು ರೂಪಿಸಿಕೊಳ್ಳಲಾಗಿದೆ ಎಂದು ಗ್ರಾಹಕರ ಒತ್ತಾಯದ ಮೇರೆಗೆ ಷೇರುದಾರರ ಕುಟುಂಬಕ್ಕೆ ಅಪಘಾತ ವಿಮೆ 1 ಲಕ್ಷ ಷೇರುದಾರರ ಕುಟುಂಬದ ಶಿಕ್ಷಣ ಕ್ಷೇತ್ರಕ್ಕೆ ಹಣ ಮೀಸಡುವುದು ಷೇರುದಾರರ ಕುಟುಂಬಕ್ಕೆ ಕ್ಷೇಮನಿಧಿ ಯೋಜನೆ ಹಾಗೂ ಷೇರುದಾರರ ಮೃತರ ಕುಟುಂಬಕ್ಕೆ ಅಂತ್ಯಸಂಸ್ಕಾರಕ್ಕೆ 6 ಸಾವಿರ ರೂ. ನೀಡುವಂತೆ ಗ್ರಾಹಕರು ಬೇಡಿಕೆ ಇಟ್ಟಿದ್ದು ಪರಿಶೀಲಸಿ ಮುಂದಿನ ದಿನದಲ್ಲಿ ಜಾರಿಗೊಳಿಸುವ ಯತ್ನ ಮಾಡುತ್ತೇವೆ ಎಂದರು.
ಗಣಪತಿ ಬ್ಯಾಂಕ್ಗೆ ಸ್ವಂತ ಕಟ್ಟಡ ಇಲ್ಲಾ ಹೊಸನಗರ ಶಾಖೆಯು 22 ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ತಮ್ಮ ಕೆಲಸ ನಿರ್ವಹಿಸುತ್ತಿದ್ದು ಸ್ವಂತ ಕಟ್ಟಡ ಹೊಂದಬೇಕು ಜೊತೆಗೆ ಎಟಿಎಂ, ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಒದಗಿಸಬೇಕೆಂದು ಗ್ರಾಹಕರು ಒತ್ತಾಯಿಸಿದಾಗ ಶೀಘ್ರದಲ್ಲಿ ಸ್ವಂತ ಕಟ್ಟಡ ಹಾಗೂ ಎಟಿಎಂ ಸೌಲಭ್ಯ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯವನ್ನು ಗ್ರಾಹಕರಿಗೆ ನೀಡುವುದಾಗಿ ಭರವಸೆ ನೀಡಿದರು.
ಗಣಪತಿ ಬ್ಯಾಂಕ್ ರಾಜ್ಯ ವ್ಯಾಪಿ ವಿಸ್ತಾರ ;
ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೂರು ಶಾಖೆಯನ್ನು ತೆರೆದಿರುವ ಗಣಪತಿ ಬ್ಯಾಂಕ್ 110 ವರ್ಷಗಳ ಇತಿಹಾಸವಿದೆ. ಮುಂದಿನ ದಿನದಲ್ಲಿ ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ತೆರೆಯುವುದಾಗಿ ಗ್ರಾಹಕರಿಗೆ ಉತ್ತಮ ಸೇವೆ ಒದಾಗಿಸುವುದಾಗಿ ಭರವಸೆ ನೀಡಿದರು.
ಈ ಕಾರ್ಯಕ್ರಮವನ್ನು ಗಣಪತಿ ಬ್ಯಾಂಕ್ ಅಧ್ಯಕ್ಷ ಆರ್. ಶ್ರೀನಿವಾಸ್ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಹೊಸನಗರ ಶಾಖೆಯ ವ್ಯವಸ್ಥಾಪಕ ಎಂ.ಜಿ.ರಾಘವೇಂದ್ರ, ಬಿ ಉಪಾಧ್ಯಕ್ಷ ಶಂಕರ್, ಸಹಾಯಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾ ಕೆ.ವಿ ನಿರ್ದೇಶಕರುಗಳಾದ ಕೃಷ್ಣಮೂರ್ತಿ ಭಂಡಾರಿ, ಗಜಾನನ ಜೋಯ್ಸ್, ರಮೇಶ್ ಎಸ್.ಎಂ, ಬಸಲಿಂಗಪ್ಪ, ಮಧು ಮಾಲತಿ, ಸರಸ್ವತಿ ನಾಗರಾಜ್ ಬ್ಯಾಂಕ್ ಸಿಬ್ಬಂದಿಗಳು ಪಿಗ್ಮಿ ಸಂಗ್ರಾಹಕರು ಹಾಗೂ ಬ್ಯಾಂಕ್ನ ಗ್ರಾಹಕರು ಉಪಸ್ಥಿತರಿದ್ದರು.
ಕಟ್ಟೆಹಕ್ಕಲು ಶಾಲೆಯ ವಿದ್ಯಾರ್ಥಿನಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
ತೀರ್ಥಹಳ್ಳಿ ; ಸರ್ಕಾರಿ ಪ್ರೌಢಶಾಲೆ ಮೇಳಿಗೆಯಲ್ಲಿ ನಡೆದ ತಾಲ್ಲೂಕು ಮಟ್ಟದ U-17 ಯೋಗಾಸನ ಸ್ಪರ್ಧೆಯಲ್ಲಿ ಸರ್ಕಾರಿ ಪ್ರೌಢಶಾಲೆ ಕಟ್ಟೆಹಕ್ಕಲು ಇಲ್ಲಿನ 10ನೇ ತರಗತಿ ವಿದ್ಯಾರ್ಥಿನಿ ಅಮೃತ ಹೆಚ್.ಡಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ.

ಇವಳ ಈ ಸಾಧನೆಗೆ ಮತ್ತು ಸಹಕರಿಸಿದ ಪೋಷಕರಿಗೆ, ತರಬೇತಿ ನೀಡಿದ ದೈಹಿಕ ಶಿಕ್ಷಕರಿಗೆ ಶಾಲಾ ಎಸ್.ಡಿ.ಎಂ.ಸಿ, ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿ, ಜಿಲ್ಲಾ ಮಟ್ಟದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.