ಶಿವಮೊಗ್ಗ : ರಿಪ್ಪನ್ಪೇಟೆಯ ಪೊಲೀಸ್ ಕ್ವಾಟ್ರಸ್ ಜಾಗಕ್ಕೆ ಹೋಗುವ ರಸ್ತೆಯನ್ನು ನಿರ್ಮಿಸಲು 10 ಲಕ್ಷ ರೂ.ಗಳು ಖರ್ಚಾಗಲಿದ್ದು, ತಾವು ಅದಕ್ಕೆ 1ಲಕ್ಷ ರೂ.ಗಳನ್ನು ನೀಡಿರುವುದಾಗಿ ಸಾಮಾಜಿಕ ಹೋರಾಟಗಾರ ರಿಪ್ಪನ್ಪೇಟೆ ಕೃಷ್ಣಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದೇನೆ. ಅನೇಕ ಹೋರಾಟಗಳಲ್ಲಿ ಯಶಸ್ಸನ್ನು ಪಡೆದಿದ್ದೇನೆ. ಪ್ರಮುಖವಾಗಿ ಡಿಗ್ರಿ ಕಾಲೇಜನ್ನು ರಿಪ್ಪನ್ಪೇಟೆಗೆ ಮಂಜೂರು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ಪೊಲೀಸ್ ಠಾಣೆಯನ್ನು ಇಲ್ಲಿನ ಗ್ರಾ.ಪಂ. ವಶಪಡಿಸಿಕೊಂಡಿತ್ತು. ಅದನ್ನು ಪುನಃ ಪೊಲೀಸ್ ಠಾಣೆಯನ್ನಾಗಿಯೇ ಉಳಿಸಿಕೊಂಡಿದ್ದೇನೆ. ನನ್ನ ಎಲ್ಲಾ ಹೋರಾಟಗಳಲ್ಲಿ ಜಿಲ್ಲಾಧಿಕಾರಿಗಳು, ಹಲವು ಅಧಿಕಾರಿಗಳು, ರಾಜಕಾರಣಿಗಳು ಬೆಂಬಲ ನೀಡಿ ಪ್ರೋತ್ಸಾಹಿಸಿದ್ದಾರೆ ಎಂದರು.
ಇದೀಗ ರಿಪ್ಪನ್ಪೇಟೆಯಲ್ಲಿ ಪೊಲೀಸ್ ಕ್ವಾಟ್ರಸ್ ಹೋಗುವ ಜಾಗಕ್ಕೆ ಒಂದು ಒಳ್ಳೆಯ ರಸ್ತೆಯ ಅವಶ್ಯಕತೆ ಇದೆ. ಈ ರಸ್ತೆ ನಿರ್ಮಿಸಲು ಬಹುಮುಖ್ಯವಾದ ಕಾರಣ ಎಂದರೆ ಆ ರಸ್ತೆಯಲ್ಲಿ ತಮ್ಮ ಬೈಕ್ ಮೇಲೆ ಸಂಚರಿಸುತ್ತಿದ್ದ ಪೊಲೀಸರು ಗುಂಡಿಗಳನ್ನು ತಡೆಯಲಾಗಿದೆ ಬಿದ್ದು ಗಾಯಮಾಡಿಕೊಂಡಿದ್ದರು. ಮೂರು ಜನ ಪೊಲೀಸರಿಗೂ ಈ ರೀತಿಯ ಅಪಘಾತವಾಗಿತ್ತು. ಚಿಕ್ಕಪುಟ್ಟ ಅಪಘಾತಗಳು ಇಲ್ಲಿ ಆಗುತ್ತಲೇ ಇರುತ್ತವೆ. ಸುಮಾರು ಅರ್ಧ ಕಿ.ಮೀ. ದೂರವಿರುವ ಈ ರಸ್ತೆಯನ್ನು ದುರಸ್ಥಿಗೊಳಿಸಲು ಹೋರಾಟವನ್ನೇ ಕೈಗೊಂಡಿದ್ದೇ, ವಿಧಾನಸೌಧದ ಮೆಟ್ಟಿಲನ್ನೇ ಹತ್ತಿದ್ದೆ. ಸುಮಾರು 20 ಲಕ್ಷ ರೂ. ಇದಕ್ಕೆ ಖರ್ಚಾಗಬಹುದು. ಹಾಗಾಗಿ 1 ಲಕ್ಷವನ್ನು ನಾನು ನೀಡುತ್ತೇನೆ ಎಂದರು.
ಉಳಿದ ಹಣವನ್ನು ದೇಣಿಗೆ ಎತ್ತಬೇಕಾಗುತ್ತದೆ ಮತ್ತು ಸರ್ಕಾರದ ಜೊತೆಗೆ ಹಣ ಬಿಡುಗಡೆಗೆ ಹೋರಾಟವನ್ನು ಮಾಡಬೇಕಾಗುತ್ತದೆ. ಒಟ್ಟಿನಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ಒಳ್ಳೆಯ ಕೆಲಸವಿದು. ಹಾಗಾಗಿ ರಸ್ತೆಯನ್ನು ಪೂರ್ಣಗೊಳಿಸಲೇಬೇಕಾಗಿದೆ ಎಂದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.