ಆತ್ಮ ನಿರ್ಭರ ಯೋಜನೆಯಡಿ ಸ್ವದೇಶಿ ವಸ್ತುಗಳ ಬಳಕೆಗೆ ಆದ್ಯತೆ ನೀಡಲು ಕರೆ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಕೇಂದ್ರ ಸರ್ಕಾರ ಮೋದಿಜಿಯವರ ಪರಿಕಲ್ಪನೆಯಂತೆ ಆತ್ಮನಿರ್ಭರ ಯೋಜನೆಯಡಿ ಪ್ರತಿಯೊಬ್ಬ ಭಾರತೀಯರು ಸ್ವದೇಶಿ ವಸ್ತುಗಳನ್ನು ಬಳಕೆ ಮಾಡಿದಲ್ಲಿ ದೇಶ ಪ್ರಗತಿ ಪಥದತ್ತ ಸಾಗಲು ಸಾಧ್ಯವಾಗುವುದು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಮಹಾತ್ಮ ಗಾಂಧಿಜೀಯವರು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಘೋಷಣೆಯಡಿ ಅವರು ಧರಿಸುತ್ತಿದ್ದ ಬಟ್ಟೆಯನ್ನು ಸಹ ತ್ಯಜಿಸಿ ಚರಕದಿಂದ ಉತ್ಪಾದಿಸಿದ ನೂಲಿನಿಂದ ತಯಾರಾದ ಖಾದಿ ಬಟ್ಟೆಗಳನ್ನು ಬಳಸುವುದರೊಂದಿಗೆ ದೇಶಿಯ ಸಂಸ್ಕೃತಿಯನ್ನು ಉತ್ತುಂಗಕ್ಕೆ ಕೊಂಡೊಯ್ಯಬೇಕು ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.

ರಿಪ್ಪನ್‌ಪೇಟೆಯ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಹೆಗ್ಗೊಡು ವಸ್ತ್ರವಿನ್ಯಾಸದವರು ಆಯೋಜಿಸಲಾಗಿರುವ ಖಾದಿ ಬಟ್ಟೆಗಳ ಪ್ರದರ್ಶನ ಮಾರಾಟ ಮೇಳಕ್ಕೆ ಚಾಲನೆ ನೀಡಿ, ನಮ್ಮೂರಿನಲ್ಲಿ ಗ್ರಾಮೋದ್ಯೋಗ ಯೋಜನೆಯಿಂದ ಸ್ವಾವಲಂಬಿ ಜೀವನಕ್ಕೆ ಚರಕ ಸಹಕಾರಿಯಾಗಿದೆ ಇದರಿಂದ ತಯಾರಾಗುತ್ತಿರುವ ಖಾದಿ ಬಟ್ಟೆಗಳನ್ನು ಖರೀದಿಸುವ ಮೂಲಕ ಪ್ರೋತ್ಸಾಹಿಸಬೇಕು. ಸರ್ಕಾರ ಸಹ ಅಂಗನವಾಡಿ ಕಾರ್ಯಕರ್ತೆಯರಿಗೆ ಸೀರೆ ನೀಡುವ ಬಗ್ಗೆ ಚಿಂತನೆ ನಡೆಸಿರುವುದರ ಬಗ್ಗೆ ಪ್ರಸ್ತಾಪಿಸಿದ ಅವರು, ಅಂಗನವಾಡಿ ಕಾರ್ಯಕತೆಯರಿಗೆ ಸೀರೆ ನೀಡುವ ಯೋಜನೆಯಲ್ಲಿ ಚರಕದಿಂದ ತಯಾರಾಗಿರುವ ಸ್ವದೇಶಿ ಸೀರೆಗಳನ್ನು ಖರೀದಿಸಿ ವಿತರಣೆ ಮಾಡಬೇಕು ಇಲ್ಲವೇ ಆವರಿಗೆ ಖಾದಿ ಗ್ರಾಮೋದ್ಯೋಗದಲ್ಲಿನ ಖಾದಿಯ ಸೀರೆಗಳನ್ನು ಖರೀದಿಸುವಂತೆ ಆದೇಶಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ ಅವರು ಸ್ವದೇಶಿ ಉತ್ಪನ್ನಗಳನ್ನು ಖರೀದಿಸುವುದರೊಂದಿಗೆ ಸ್ವದೇಶಿ ಉತ್ಪನ್ನಗಳನ್ನು ಖರೀದಿಸಿ ದೇಶವನ್ನು ಉಳಿಸಿ ಎಂಬ ಜಯ ಘೋಷಣೆಯನ್ನು ಮೊಳಗಿಸಿದರು.

ತಾಲ್ಲೂಕು ಬಿಜೆಪಿ ಘಟಕದ ಆಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ, ಬಿಜೆಪಿ ಮುಖಂಡ ಆರ್.ಟಿ.ಗೋಪಾಲ, ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಎನ್. ಸತೀಶ್, ಬಿಜೆಪಿ ಮಂಡಲ ಸಾಮಾಜಿಕ ಮಾಧ್ಯಮ ಸಂಚಾಲಕ ಅಬ್ಬಿ ಕಿರಣ ಬಿ.ಇ., ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯೆ ಎ.ಟಿ.ನಾಗರತ್ನ, ತಾಲ್ಲೂಕು ಪಂಚಾಯಿತ್ ಮಾಜಿ ಅಧ್ಯಕ್ಷೆ ನಾಗರತ್ನ ದೇವರಾಜ್, ಪಕ್ಷದ ಮುಖಂಡರಾದ ಪದ್ಮಸುರೇಶ್, ರೇಖಾರವಿ, ಅಶ್ವಿನಿ ರವಿಶಂಕರ್, ದೀಪಾ ಸುಧೀರ್, ಮಂಜುಳಾ ಕೇತಾರ್ಜಿರಾವ್, ಆಶಾ ಬಸವರಾಜ್, ಶೈಲಾ ಆರ್.ಪ್ರಭು, ಗೀತಾ ಕರಿಬಸಪ್ಪ, ಮೆಣಸೆ ಆನಂದ, ನಾಗಾರ್ಜುನಸ್ವಾಮಿ, ಸುಧೀಂದ್ರ ಪೂಜಾರಿ, ಪಿ.ರಮೇಶ, ಜಿ.ಡಿ.ಮಲ್ಲಿಕಾರ್ಜುನ, ಸುಂದರೇಶ, ಪರಮೇಶ, ಯೋಗೇಂದ್ರಗೌಡ, ದೇವೇಂದ್ರಪ್ಪಗೌಡ ನೆವಟೂರು, ಬಿ.ರಾಮಚಂದ್ರ ಬಳೆಗಾರ್, ಮುರುಳಿಧರ ಕೆರೆಹಳ್ಳಿ, ದಾನಮ್ಮ, ಇನ್ನಿತರ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

Leave a Comment