ಹಿರಿಯ ನಾಗರೀಕರೆ ನಮ್ಮ ಆಸ್ತಿ ; ವಕೀಲ ಚಂದ್ರಪ್ಪ

Written by Mahesha Hindlemane

Published on:

ಹೊಸನಗರ ; ಹಿರಿಯ ನಾಗರೀಕರಿಗೆ ಮಕ್ಕಳು ಗೌರವದಿಂದ ಕಾಣಬೇಕು ಹಿರಿಯರಿಗೆ ಹಿಂಸೆ ಅಥವಾ ಇತರೆ ತೊಂದರೆಗಳನ್ನು ಕೊಡುವುದು ಮಾಡಿದರೆ ಕಾನೂನಿನಲ್ಲಿ ಶಿಕ್ಷೆ ಇದೆ. ಅದು ಅಲ್ಲದೆ ಹಿರಿಯ ನಾಗರೀಕರು ಮಕ್ಕಳಿಗೆ ಹಾಗೂ ದೇಶಕ್ಕೆ ದೊಡ್ಡ ಆಸ್ತಿ ಇದ್ದಂತೆ ಎಂದು ಹೊಸನಗರ ವಕೀಲರ ಸಂಘದ ಅಧ್ಯಕ್ಷ ಚಂದ್ರಪ್ಪ ಹೇಲಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಸಾಮಾಜಿಕ ನ್ಯಾಯ ಸಬಲೀಕರಣ ಮಂತ್ರಾಲಯ, ಕರ್ನಾಟಕ ಸರ್ಕಾರ, ವಿಕಲಚೇತನ, ಹಿರಿಯ ನಾಗರೀಕ ಸಬಲೀಕರಣ ಇಲಾಖೆ ಶಿವಮೊಗ್ಗ, ರಾಜ್ಯ ಸರ್ಕಾರದ ಹಿರಿಯ ನಿವೃತ್ತ ನೌಕರರ ಸಂಘದ ಆಶ್ರಯದಲ್ಲಿ ಹೊಸನಗರ ನ್ಯಾಯಾಂಗ ಇಲಾಖೆಯ ವತಿಯಿಂದ ಹಿರಿಯ ನಾಗರೀಕರಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಈ ಸಂದರ್ಭದಲ್ಲಿ ಮಾತನಾಡಿದರು.

ಹಿಂದೆ ಮಕ್ಕಳು ತಂದೆ-ತಾಯಿಗಳನ್ನು ದೇವರಂತೆ ಕಾಣುತ್ತಿದ್ದರು ಅಪಾರವಾದ ಗೌರವ ನೀಡುತ್ತಿದ್ದರು. ಕಾಲ ಬದಲಾದಂತೆ ಮಕ್ಕಳೆ ತಂದೆ-ತಾಯಿಯವರನ್ನು ಅನಾಥಶ್ರಮಕ್ಕೆ ಸೇರಿಸುವ ಕಾಲ ಬಂದಿದೆ. ಹಿರಿಯ ನಾಗರೀಕರಿಗೆ ಕಾನೂನಿನಲ್ಲಿ ತಮ್ಮ ಜವಾಬ್ದಾರಿಯನ್ನು ಮಕ್ಕಳು ಹೊರದಿದ್ದರೆ ಕುಟುಂಬದ ಆಸ್ತಿ ಕೇಳುವಂತಿಲ್ಲ ಹಾಗೂ ದೂರು ದಾಖಲಿಸಿದರೆ ಕಾನೂನಿನಲ್ಲಿ ಶಿಕ್ಷೆ ಇದೆ ಎಂದರು.

ವಿಕಲ ಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಆಗಮಿಸಿದರ ವಿಜೇಂದ್ರ ಮಾತನಾಡಿ, ಹಿರಿಯ ನಾಗರೀಕರಿಗೆ ಆಪ್ತ ಸಹಾಯವಾಣಿ ಸಂಖ್ಯೆ 1090 ಕಾನೂನಿನಲ್ಲಿ 15100 ಕ್ಕೆ ಉಚಿತವಾಗಿ ಕರೆ ಮಾಡಲು ಉಚಿತವಾಗಿ ವಕೀಲರನ್ನು ಪಡೆಯುವ ಬಗ್ಗೆ ಹಾಗೂ ಬಸ್‌ನಲ್ಲಿ, ರೈಲ್ವೆ, ವಿಮಾನಗಳಲ್ಲಿ ಆಸ್ಪತ್ರೆಗಳಲ್ಲಿ ರಿಯಾಯ್ತಿ ಸೌಲಭ್ಯ ಸಿಗುವ ಬಗ್ಗೆ ವಿವರಿಸಿದರು.

ಈ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ನಿವೃತ್ತ ನೌಕರರ ಸಂಘದ ಹೊಸನಗರ ತಾಲ್ಲೂಕು ಅಧ್ಯಕ್ಷ ಬಿ.ಎನ್ ದಿನಮಣಿ ಮಾತನಾಡಿ, 1997-98ರಲ್ಲಿ ಹೊಸನಗರ ತಾಲ್ಲೂಕು ನಿವೃತ್ತ ನೌಕರರ ಸಂಘವನ್ನು ಉದ್ಘಾಟಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೆ ನಮ್ಮ ಸಂಘದ ಸದಸ್ಯರಿಗೆ ಎಲ್ಲ ರೀತಿಯಲ್ಲಿಯೂ ಸೌಲಭ್ಯಗಳನ್ನು ಸಂಘ ಒದಾಗಿಸುತ್ತಾ ಬಂದಿದೆ ಅದು ಅಲ್ಲದೇ ಸ್ವಂತ ಕಟ್ಟಡವನ್ನು ಹೊಂದಿದೆ ಮುಂದಿನ ದಿನಗಳಲ್ಲಿ ಎಲ್ಲ ನಿವೃತ್ತ ನೌಕರರ ಏಳಿಗೆಗಾಗಿ ಶ್ರಮಿಸುತ್ತೇವೆಂದರು.

ಈ ಕಾರ್ಯಕ್ರಮದಲ್ಲಿ ಎಪಿಡಿ ಸಂಸ್ಥೆಯ ಮಂಗಳೂರು ಶಾಖೆಯ ಶ್ರೀಧರ ಮಹಾಬಲಗೌಡ, ಸುಬ್ರಹ್ಮಣ್ಯ, ಪದ್ಮನಾಭ, ಎನ್ ರಂಗನಾಥ್, ಶ್ರೀಕಾಂತ, ರವಿ, ತಾಲ್ಲೂಕಿನ ಎಲ್ಲ ಯು.ಆರ್.ಡ್ಲ್ಯೂ ಕಾರ್ಯಕರ್ತರು ಆಗಮಿಸಿದ್ದರು.

Leave a Comment