Hosanagara | ಶಿವಮೊಗ್ಗ (Shivamogga) ಜಿಲ್ಲಾದ್ಯಂತ ಇಂದು ಬೆಳಗ್ಗೆಯಿಂದ ಬಿರುಗಾಳಿ ಸಹಿತ ಧಾರಾಕಾರ ಮಳೆ (Heavy Rain) ಸುರಿಯುತ್ತಿದ್ದು ಪರಿಣಾಮ ಮನೆಯೊಂದರ ಮೇಲೆ ಮರ (Tree) ಬಿದ್ದು ಹಾನಿಯಾಗಿರುವ ಘಟನೆ ನಡೆದಿದೆ.
ಹೊಸನಗರ ತಾಲ್ಲೂಕಿನ ಹರತಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಂಬೆಕೊಪ್ಪ ಗ್ರಾಮದ ಮಣಿ ಎಂಬುವರ ಮನೆ ಮೇಲೆ ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಬುಡ ಸಮೇತ ಹಲಸಿನ ಮರ ಬಿದ್ದು ಭಾಗಶಃ ಮನೆ ಜಖಂಗೊಂಡಿದೆ.
ಆರ್ಥಿಕವಾಗಿ ಅತ್ಯಂತ ಹಿಂದುಳಿದ ಮಣಿ ಕುಟುಂಬ ಈ ಮಳೆಗಾಲದ ಆರಂಭದಲ್ಲೇ ಮನೆ ಕಳೆದುಕೊಂಡು ಬೀದಿಗೆ ಬೀಳುವಂತಾಗಿದೆ.
ಜೂನ್ 13ರವರೆಗೂ ರಾಜ್ಯದ ಹಲವೆಡೆ ಗುಡುಗು ಸಹಿತ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು, ಚಿಕ್ಕಬಳ್ಳಾಪುರ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಗದಗ, ಯಾದಗಿರಿ, ಕಲಬುರಗಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕೆಲವು ಕಡೆ ಭಾರಿ ಮಳೆ ಸಾಧ್ಯತೆ ಇದ್ದು, ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
Read More :ಕಾಲುಸಂಕ ನಿರ್ಮಾಣವಾದರೂ ಇಲ್ಲಿ ಹಳ್ಳ ದಾಟಲು ಮರದ ದಿಮ್ಮಿಯೇ ಗತಿ !