ಹೊಸನಗರ ; ವಿವಿಧ ಇಲಾಖೆಯ ಹುದ್ದೆಗಳು ಖಾಲಿ, ಭರ್ತಿಗೆ ಕ್ರಮ ಏನು ?

Written by Mahesha Hindlemane

Published on:

ಹೊಸನಗರ ; ಇಲ್ಲಿನ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಶಿಕ್ಷಣಾಧಿಕಾರಿಗಳು ವರ್ಗಾವಣೆಯಾಗಿ ಮೂರು ತಿಂಗಳಾದರೂ ಪ್ರಭಾರ ಶಿಕ್ಷಣಾಧಿಕಾರಿಯಾಗಿ ಆರ್.ಪಿ ಚೇತನಾ ಕೆಲಸ ನಿರ್ವಹಿಸುತ್ತಿದ್ದಾರೆ. ಅದರ ಜೊತೆಗೆ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ 21 ಹುದ್ದೆಗಳಿದ್ದು 15 ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು ಶಿಕ್ಷಣಾಧಿಕಾರಿ ಕಛೇರಿಯ ಎಲ್ಲ ಕೆಲಸವನ್ನು ನಿರ್ವಹಿಸಲಾಗದೇ ಬೇರೆ ಊರುಗಳಿಗೆ ವರ್ಗಾವಣೆ ಬಯಸಿದ್ದಾರೆ? ಎಂದು ಹೇಳಲಾಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಹೊಸನಗರ ತಾಲ್ಲೂಕಿನಲ್ಲಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳು ಒಟ್ಟು 207 ಶಾಲೆಗಳಿದ್ದು 466 ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದು 120 ಶಿಕ್ಷಕರ ಹುದ್ದೆ ಖಾಲಿ ಇದೆ. ಅದೇ ರೀತಿ ಹೊಸನಗರ ತಾಲ್ಲೂಕಿನಲ್ಲಿ 19 ಸರ್ಕಾರಿ ಹೈಸ್ಕೂಲ್‌ಗಳಿದ್ದು ಅದರಲ್ಲಿ 136 ಶಿಕ್ಷಕರ ಕೆಲಸ ನಿರ್ವಹಿಸುತ್ತಿದ್ದು 36 ಹುದ್ದೆಗಳು ಖಾಲಿ ಇದೆ. ಅದರ ಜೊತೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿಯೂ 6 ಹುದ್ದೆ ಖಾಲಿ ಇದೆ ಅದೇ ರೀತಿ ಶಿಕ್ಷಣ ಇಲಾಖೆಯಲ್ಲಿ ಬಿ.ಆರ್.ಸಿ 1 ಹಾಗೂ ಸಿ.ಆರ್.ಪಿ 5 ಹುದ್ದೆಗಳು ಖಾಲಿ ಇದೆ ಈ ರೀತಿಯಾದರೆ ಶಿಕ್ಷಣ ಇಲಾಖೆಯ ಮುಂದಿನ ಗತಿಯೇನು? ಎಂಬ ಚಿಂತೆ ಚರ್ಚೆಯಾಗುತ್ತಿದೆ.

ಸಚಿವರೇ, ಶಾಸಕರೇ ಇತ್ತ ಗಮನಹರಿಸಿ ;

ರಾಜ್ಯದ ಶಿಕ್ಷಣ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣನವರೆ ಹೊಸನಗರ ತಾಲ್ಲೂಕಿನಲ್ಲಿ ಪಟ್ಟಣ ಪಂಚಾಯತಿಯಲ್ಲಿ ಇಂಜಿನಿಯರ್ ಇಲ್ಲ, ತಾಲ್ಲೂಕು ಪಂಚಾಯತಿಯಲ್ಲಿ ಖಾಯಂ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಗಳಿಲ್ಲ, ಬಿಇಒ ಇಲ್ಲ, ಅದೇ ರೀತಿಯಲ್ಲಿ ವಿವಿಧ ಸರ್ಕಾರಿ ಕಛೇರಿಗಳಲ್ಲಿ ಹಲವು ಹುದ್ದೆಗಳು ಖಾಲಿಯಿದ್ದು ತಕ್ಷಣ ಅವುಗಳನ್ನು ಭರ್ತಿ ಮಾಡಿ ಸಾರ್ವಜನಿಕರಿಗೆ ಹಾಗೂ ಶಿಕ್ಷಕರಿಗೆ, ಶಿಕ್ಷಣ ಇಲಾಖೆಯ ಒಳಗೆ ಕೆಲಸ ನಿರ್ವಹಿಸುತ್ತಿರುವ ನೌಕರ ವರ್ಗದವರಿಗೆ ಹೊರೆ ಕಡಿಮೆ ಮಾಡಿ ಹೊಸನಗರದಲ್ಲಿರುವ ಎಲ್ಲ ಸರ್ಕಾರಿ ಕಛೇರಿಯಲ್ಲಿರುವ ಖಾಲಿ ಹುದ್ದೆ ಭರ್ತಿ ಮಾಡಿ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ಕೆಲ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಶೂ ಕೊಟ್ಟಿಲ್ಲ ;

ಹೊಸನಗರ ತಾಲ್ಲೂಕಿನಲ್ಲಿರುವ ಕೆಲವು ಶಾಲೆಗಳಲ್ಲಿ ಇನ್ನೂ ಶೂ ನೀಡಿಲ್ಲ. ಅರ್ಧ ವರ್ಷ ಕಳೆಯುತ್ತಾ ಬಂದಿದ್ದರೂ ಏಕೆ ಶೂ ನೀಡಿಲ್ಲ ಎಂದು ಶಿಕ್ಷಣ ಸಚಿವರ ವಿರುದ್ಧ ವಿದ್ಯಾರ್ಥಿಗಳ ಪೋಷಕರು ದೂರುತ್ತಿದ್ದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಯಾವ ಯಾವ ಶಾಲೆಗಳಲ್ಲಿ ಶೂ ನೀಡಿಲ್ಲ ಎಂದು ಪಟ್ಟಿ ಮಾಡಿ ತಕ್ಷಣ ವಿದ್ಯಾರ್ಥಿಗಳಿಗೆ ಶೂ ನೀಡಲಿ ವಿದ್ಯಾರ್ಥಿಗಳು ಪೋಷಕರು ಪ್ರತಿಭಟಿಸುವುದಕ್ಕಿಂತ ಮುಂಚೆ ಎಚ್ಚೆತ್ತುಕೊಳ್ಳುವುದು ಒಳ್ಳೆಯದು.

Leave a Comment