ಹೊಸನಗರ ; ಇಲ್ಲಿನ ಮಾವಿನಕೊಪ್ಪದಲ್ಲಿರುವ ಗಂಗಾಧರೇಶ್ವರ ಸ್ವಾಮಿ ನೂತನ ದೇವಸ್ಥಾನವನ್ನು ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿದ್ದು ಅದರ ಶಂಕುಸ್ಥಾಪನೆಯನ್ನು ನ. 14ರ ಶುಕ್ರವಾರ ಬೆಳಿಗ್ಗೆ ನೆರವೇರಿಸಲಾಗುವುದು ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಬೃಂದಾವನ ಪ್ರವೀಣ್ ತಿಳಿಸಿದ್ದಾರೆ.
ಅವರು ದೇವಸ್ಥಾನದ ಆವರಣದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ, ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿಯವರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದು ಬೆಂಗಳೂರು ಉದ್ಯಮಿ ಮಹೇಂದ್ರ ಎಂ, ನಿತಿನ್ ನಾರಾಯಣ ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಇದರ ಜೊತೆಗೆ ಗಂಗಾಧರೇಶ್ವರ ಹಾಗೂ ಪರಿಹಾರ ದೇವರುಗಳ ಶಿಲಾಮಯ ದೇವಸ್ಥಾನಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನೇರವೇರಿಸಲಾಗುವುದು ಎಂದರು.
ಸಂಜೆಯ ಕಾರ್ಯಕ್ರಮ :
ಸಂಜೆ 5 ಗಂಟೆಗೆ ದೇವಸ್ಥಾನದ ಆವರಣದಲ್ಲಿ ‘ಮಲೆನಾಡು ವಾಯ್ಸ್’ ಕನ್ನಡ ದಿನ ಪತ್ರಿಕೆಯ 18ನೇ ವರ್ಷ ಸಂಭ್ರಮಾಚರಣೆ ಪ್ರಯುಕ್ತ ಪಟ್ಲ ಸತೀಶ್ಶೆಟ್ಟಿ ಸಾರಥ್ಯದಲ್ಲಿ ದಶಾವತಾರ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.

16ರ ಭಾನುವಾರ ಸಂಜೆ 4ಗಂಟೆಗೆ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯಾನುಗ್ರಹದೊಂದಿಗೆ ಸ್ವರ್ಣ ಪಾದುಕೆ ಆಗಮಿಸಲಿದ್ದು ದೇವಸ್ಥಾನದ ಭಕ್ತಾದಿಗಳು ಹಾಗೂ ಹೊಸನಗರದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕೆಂದು ಕೇಳಿಕೊಂಡರು.
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಗಣೇಶ್ ಎನ್, ಗೌರವಾಧ್ಯಕ್ಷ ನಾಗರಾಜ್ ಕಾಮತ್, ಉಪಾಧ್ಯಕ್ಷ ರಾಘವೇಂದ್ರ ದೇವಾಡಿಗ, ರವೀಂದ್ರಭಟ್, ಪುರುಷೋತ್ತಮ ಅಡಿಗ, ಕೃಷ್ಣಮುರ್ತಿ, ಕೃಷ್ಣಮೂರ್ತಿಗೌಡ, ಮಹೇಂದ್ರ ಬಿ.ಎನ್, ಶಂಕರ ನಾರಾಯಣ ಅಡಿಗ, ಸತ್ಯನಾರಾಯಣ ಅಡಿಗ, ಶ್ರೀನಿವಾಸ್ ದೇವಾಡಿಗ, ಚೇತನ್ ಆರ್, ಗೌತಮ್ ಕುಮಾರಸ್ವಾಮಿ, ಕ್ಯಾಂಟಿನ್ ಶ್ರೀಧರ, ಉಮೇಶ್ ಶೆಣೈ ಮೋಹನ್ ಶೆಣೈ, ಸಮಿತಿಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





