ಮಲೆನಾಡಿನಲ್ಲಿ ಮತ್ತೆ ಆವರಿಸಿದ ಮಂಗನ ಕಾಯಿಲೆ ಭೀತಿ ; ಹೊಸನಗರದ ಮಹಿಳೆಯಲ್ಲಿ ಸೋಂಕು ಪತ್ತೆ !

Written by Mahesha Hindlemane

Published on:

ಹೊಸನಗರ ; ಮಲೆನಾಡಿನಲ್ಲಿ ಮಂಗನ ಕಾಯಿಲೆಯ (KFD) ಭೀತಿ ಮತ್ತೆ ಆವರಿಸಿದೆ. ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬೀಳುವ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಈ ಅವಧಿಯ ಮೊದಲ ಪ್ರಕರಣ ಪತ್ತೆಯಾಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ತಾಲೂಕಿನ ಬಿಳ್ಳೋಡಿ ಗ್ರಾಮದ 50 ವರ್ಷದ ಮಹಿಳೆಗೆ ಕೆಎಫ್‌ಡಿ ಪಾಸಿಟಿವ್‌ ಬಂದಿದೆ‌. ಡಿಸೆಂಬರ್‌, ಜನವರಿಗೆ ಹೊತ್ತಿಗೆ ಕಾಣಿಸಿಕೊಳ್ಳುತ್ತಿದ್ದ ವೈರಸ್‌ ಈ ಬಾರಿ ನವೆಂಬರ್‌ನಲ್ಲೇ ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ‌.

ಕಳೆದ ವರ್ಷ ಕೂಡ ಚಿಕ್ಕಮಗಳೂರು ಹಾಗೂ ಶಿವಮೊಗ್ಗದಲ್ಲಿ ಹೆಚ್ಚಿನ ಪ್ರಕರಣ ಕಂಡು ಬಂದಿತ್ತು. ಲಸಿಕೆ ಇಲ್ಲದ ಮೂರನೇ ಅವಧಿ ಇದಾಗಿದ್ದು ಆರೋಗ್ಯ ಇಲಾಖೆ ಜಾಗೃತಿ ಹೊರತಾಗಿಯೂ ಕಾಯಿಲೆ ಹರಡುವುದನ್ನು ನಿಯಂತ್ರಿಸಲು ಆಗುತ್ತಿಲ್ಲ.

Leave a Comment