ಹಾರೋಹಿತ್ತಲು ಬಳಿ ಚಿರತೆ ಪ್ರತ್ಯಕ್ಷ, ಗ್ರಾಮಸ್ಥರಲ್ಲಿ ಆತಂಕ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಮಲೆನಾಡು ಶಿವಮೊಗ್ಗದಲ್ಲಿ ವನ್ಞಮೃಗಗಳ ಹಾವಳಿ ಮುಂದುವರಿದಿದ್ದು, ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಾರೋಹಿತ್ತಲು, ಕೊಳವಂಕ ಮತ್ತು ಕುಂಭತ್ಮನೆ ಬಳಿ ಚಿರತೆ ಓಡಾಟ ಕಂಡುಬಂದಿದ್ದು ಗ್ರಾಮಸ್ಥರನ್ನು ಭಯಭೀತರನ್ನಾಗಿಸಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/1KSD3sGiiH/

ಭಾನುವಾರ ಬೆಳಗಿನಜಾವ ಸುಮಾರು 3.45ರ ಸಮಯದಲ್ಲಿ ಹಾರೋಹಿತ್ತಲು ಗ್ರಾಮದ ಕಂಭತ್ಮನೆ ವಾಸುದೇವ ಎಂಬುವರ ಮನೆಯ ಬಳಿಯಲ್ಲಿನ ಅಂಗಳದಲ್ಲಿ ಓಡಾಡಿ ನಾಯಿಯ ಮೇಲೆ ದಾಳಿ ನಡೆಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಅದೃಷ್ಟವಶಾತ್ ನಾಯಿ ತಪ್ಪಿಸಿಕೊಂಡಿದೆ ಎಂದು ಹೇಳಲಾಗಿದೆ.

ಬೆಳಗ್ಗೆ ನಾಯಿಯ ಸ್ಥಿತಿಯನ್ನು ಗಮನಿಸಿ ಅನುಮಾನಗೊಂಡ ಮನೆಯ ಮಾಲೀಕರು ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಚಿರತೆ ಓಡಾಟ ನಡೆಸಿರುವ ದೃಶ್ಯ ಕಂಡು ತಕ್ಷಣ ಅರಣ್ಯ ಇಲಾಖೆಯವರಿಗೆ ತಿಳಿಸಿರುವುದಾಗಿ ತಿಳಿಸಿದ್ದಾರೆ.

ಒಟ್ಟಾರೆಯಾಗಿ ಮಲೆನಾಡಿನ ವ್ಯಾಪ್ತಿಯಲ್ಲಿ ಕಾಡಾನೆ, ಕಾಡುಕೋಣ ಈಗ ಚಿರತೆಯ ದಾಳಿಯಿಂದಾಗಿ ಜನ ಭಯದಿಂದ ಜೀವನ ಸಾಗಿಸುವಂತಾಗಿದ್ದು ಜೀವಹಾನಿಯಾಗುವ ಮುನ್ನ ಚರಿತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Leave a Comment