ಹೊಸನಗರ ; ಇದೇ ನವೆಂಬರ್ 13 ರಂದು ಅನಾರೋಗ್ಯದ ಹಿನ್ನಲೆಯಲ್ಲಿ ತಾಲೂಕಿನ ಬಾಳೆಕೊಪ್ಪ ವಾಸಿ ರತ್ನ ನಿಧನರಾಗಿದ್ದು, ಅವರು ಸ್ಥಳೀಯ SBI ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದು, ಅವರು ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಅಡಿಯಲ್ಲಿ 436 ರೂ. ಮೊತ್ತ ಪಾವತಿಸಿ ಸಾಮಾಜಿಕ ಭದ್ರತೆಯ ವಿಮಾ ನೋಂದಣಿ ಹೊಂದಿದ್ದರು.
ಮೃತರ ಪತಿ ಬಾಬು ಗೋಪಾಲ್ ಹಾಂಡ ಡಿಸೆಂಬರ್ 23 ರಂದು ಬ್ಯಾಂಕ್ ಸಂಪರ್ಕಿಸಿದ್ದು, ಕೂಡಲೇ ಬ್ಯಾಂಕ್‌ನ ಸಿಬ್ಬಂದಿಗಳು ಯೋಜನೆಯ ಒಟ್ಟು ಮೊತ್ತ 2 ಲಕ್ಷ ರೂ. ಹಣವನ್ನು ಡಿಸೆಂಬರ್ 27 ರೊಳಗೆ ನಾಮಿನಿ ಖಾತೆಗೆ ಜಮಾ ಮಾಡಿದ್ದಾರೆ.

ಈ ವೇಳೆ ಬ್ಯಾಂಕ್‌ನ ವ್ಯವಸ್ಥಾಪಕ ಮಾಧವ್, ಅಧಿಕಾರಿ ಸರ್ವೇಶ್, ಗಣೇಶ್ ಮಧುಕರ್, ಮಧು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಈ ಸಾಮಾಜಿಕ ಭದ್ರತಾ ವಿಮಾ ಯೋಜನೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳುವಂತೆ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ಮಾಧವ್ ಮನವಿ ಮಾಡಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





