ತೀರ್ಥಹಳ್ಳಿ ; ಅತಿಶಯ ಶ್ರೀಕ್ಷೇತ್ರ ಹೊಂಬುಜ ಮಹಾಸಂಸ್ಥಾನದ ಶಾಖಾ ಕೇಂದ್ರ, ಆಚಾರ್ಯ ಶ್ರೀ ಕುಂದಕುಂದರವರ ತಪೋಭೂಮಿ ಶ್ರೀ ಕುಂದಾದ್ರಿ ಕ್ಷೇತ್ರದಲ್ಲಿ ಮಕರ ಸಂಕ್ರಾತಿಯಂದು (ಜ.14) ಪೂರ್ವಪರಂಪರೆಯಂತೆ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಜಿನಾಗಮೋಕ್ತ ಪೂಜಾ ವಿಧಿ-ವಿಧಾನಗಳು ಹೊಂಬುಜ ಜೈನ ಶ್ರೀಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ಪಾವನ ಸಾನಿಧ್ಯ, ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ನೆರವೇರಲಿರುವುದು.

ಬೆಳಿಗ್ಗೆ 8 ರಿಂದ ಶ್ರೀ ಕಲಿಕುಂಡ ಯಂತ್ರಾರಾಧನೆ, 11 ಗಂಟೆಗೆ ಶ್ರೀ ಪಾರ್ಶ್ವನಾಥ ಸ್ವಾಮಿ ಅಭಿಷೇಕ ಪೂಜೆ, ಯಕ್ಷಿ ಶ್ರೀ ಪದ್ಮಾವತಿ ದೇವಿ ಅಮ್ಮನವರ ಷೋಡೋಪಚಾರ ಪೂಜೆ ಮತ್ತು ಆಚಾರ್ಯ ಶ್ರೀ ಕುಂದಕುಂದಾಚಾರ್ಯರ ಪಾದುಕಾ ಮಂದಿರದಲ್ಲಿ ಆಗಮೋಕ್ತ ಪೂಜೆ ಸಲ್ಲಿಸಲಾಗುವುದು.
ಪೂಜ್ಯ ಸ್ವಸ್ತಿಶ್ರೀಗಳವರು 12 ಗಂಟೆಗೆ ಅನುಗ್ರಹ ಪ್ರವಚನ ದಯಪಾಲಿಸಲಿರುವರು. ಭಕ್ತವೃಂದದವರು ಜಿನಭಜನೆಯಲ್ಲಿ ಪಾಲ್ಗೊಳ್ಳವರು. ರಾತ್ರಿ ದೀಪೋತ್ಸವವು ಜರುಗಲಿದೆ ಎಂದು ಹೊಂಬುಜ ಶ್ರೀಮಠದ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





