ರಿಪ್ಪನ್‌ಪೇಟೆಯಲ್ಲಿ ಅದ್ಧೂರಿ ಶೋಭಾಯಾತ್ರೆ ; ರಾರಾಜಿಸಿದ ಕೇಸರಿ ಧ್ವಜ, ವಿದ್ಯುತ್ ದೀಪಾಲಂಕಾರ ತಳಿರು-ತೋರಣಗಳಿಂದ ಶೃಂಗಾರ, ಜನಾಕರ್ಷಣೆಯ ಭವ್ಯ ಮೆರವಣಿಗೆ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಆರ್.ಎಸ್.ಎಸ್. ಶತಾಬ್ದಿ ವರ್ಷದ ಹಿನ್ನೆಲೆಯಲ್ಲಿ ರಿಪ್ಪನ್‌ಪೇಟೆಯಲ್ಲಿ ಸೋಮವಾರ ಸಂಜೆ ಅದ್ದೂರಿ ಶೋಭಾಯಾತ್ರೆಗೆ ಗೋಪೂಜೆಯೊಂದಿಗೆ ಚಾಲನೆ ನೀಡಲಾಯಿತು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಗೋಪೂಜೆಯೊಂದಿಗೆ ಹೊಸನಗರ ರಸ್ತೆಯ ಜಿ.ಎಸ್.ಬಿ. ಕಲ್ಯಾಣ ಮಂದಿರದಿಂದ ಚಂಡೆ ಮಕ್ಕಳ ವೇಷಭೂಷಣದ ಛದ್ಮ ವೇಷದಾರಿಗಳು ಹಾಗೂ ಛತ್ರಪತಿ ಶಿವಾಜಿಯ ಮೂರ್ತಿಯ ಮೆರವಣಿಗೆ ಹೊರಟು ವಿನಾಯಕ ವೃತ್ತದ ಮಾರ್ಗವಾಗಿ ತೀರ್ಥಹಳ್ಳಿ ಸಾಗರ ರಸ್ತೆಯ ಮೂಲಕ ಶಿವಮೊಗ್ಗ ರಸ್ತೆಯಲ್ಲಿರುವ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದ ವೇದಿಕೆಯಲ್ಲಿ ನಡೆಯುವ ಆವರಣಕ್ಕೆ ವಿವಿಧ ಜಾನಪದ ಕಲಾತಂಡಗಳ ಮೆರಗಿನೊಂದಿಗೆ ಮಹಿಳೆಯರ ಪೂರ್ಣ ಸ್ವಾಗತದೊಂದಿಗೆ ಪಟಾಕಿ ಸಿಡಿಸಿ ಜನಾಕರ್ಷಣೆಯ ಭವ್ಯ ಮೆರವಣಿಗೆ ಸಾಗಿತು.

ಸಾವಿರಾರು ಯುವಕರು ಹಾಗೂ ಮಹಿಳೆಯರು ಯುವತಿಯರು ಮೆರವಣಿಗೆಯ ಉದ್ದಕ್ಕೂ ನೃತ್ಯ ಮಾಡುತ್ತಾ ಭಾರತ ಮಾತೆಗೆ ಜೈಕಾರ ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಎಂಬ ಜಯಘೋಷಣೆ ಕೂಗುತ್ತಾ ಕೇಸರಿ ಧ್ವಜಗಳನ್ನು ಹಿಡಿದು ಶೋಭಾಯಾತ್ರೆಯಲ್ಲಿ ಸಾಗುತ್ತಿದ್ದ ದೃಶ್ಯ ಕಣ್ಮನ ಸೆಳೆಯಿತು.

ಹೊಸನಗರ ರಸ್ತೆಯ ಜಿ.ಎಸ್.ಬಿ. ಸಮಾಜದಿಂದ ಶಿವಮೊಗ್ಗ ರಸ್ತೆಯಲ್ಲಿರುವ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದವರೆಗೆ ಹಿಂದೂ ಕೇಸರಿ ಧ್ವಜ ಬಂಟಿಂಗ್ಸ್ ಹಾಗೂ ಹಿಂದೂ ಸಂಗಮೋತ್ಸವಕ್ಕೆ ಶುಭ ಕೋರುವ ಬ್ಯಾನರ್ ಗಳು ರಾರಾಜಿಸುತ್ತಿದ್ದವು.

ಶೋಭಾಯಾತ್ರೆಯಲ್ಲಿ ಹೊಸನಗರ ತಾಲ್ಲೂಕು ಹಿಂದೂ ಸಂಗಮೋತ್ಸವ ಸಮಿತಿ ಅಧ್ಯಕ್ಷ ವಿನಯ್‌ಶೆಟ್ಟಿ ಹೆಗ್ಗೆರೆ ಹಿಂದೂ ಜಾಗರಣ ವೇದಿಕೆಯ ಬೌದ್ದಿಕ್ ಹಾರಿಕ ಮಂಜುನಾಥ, ಕೃಷಿ ಸಾಧಕ ಅನಂತಮೂರ್ತಿ ಜವಳಿ ಇನ್ನಿತರರು ಪಾಲ್ಗೊಂಡಿದ್ದರು.

ಬಿಗಿ ಪೊಲೀಸ್ ಭದ್ರತೆ ;

ರಿಪ್ಪನ್‌ಪೇಟೆಯಲ್ಲಿ ಇಂದು ನಡೆದ ಹಿಂದೂ ಸಂಗಮೋತ್ಸವದ ಶೋಭಾಯಾತ್ರೆಗೆ ತೀರ್ಥಹಳ್ಳಿ ಡಿವೈಎಸ್‌ಪಿ ನೇತೃತ್ವದಲ್ಲಿ ಹೊಸನಗರ ವೃತ್ತ ನಿರೀಕ್ಷಕರು ರಿಪ್ಪನ್‌ಪೇಟೆ, ನಗರ, ಹೊಸನಗರ ಪಿಎಸ್‌ಐರವರ ಬಿಗಿ ಪೊಲೀಸ್ ಭದ್ರತೆಯನ್ನು ಮಾಡಲಾಗಿತ್ತು ‌

Leave a Comment