ಅಭಿವೃದ್ಧಿಯ ಭರವಸೆಯನ್ನು ಸಂಪೂರ್ಣಗೊಳಿಸುತ್ತೇನೆ ; ಶಾಸಕ ಬೇಳೂರು ಗೋಪಾಲಕೃಷ್ಣ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಶ್ರೀಸಾಮಾನ್ಯ ವರ್ಗ ಗಟ್ಟಿಯಾಗಿ ನಿಲ್ಲುವಂತೆ ಮಾಡುವಲ್ಲಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಯ ಮೂಲಕ ಬಡಕುಟುಂಬಕ್ಕೆ ಆಧಾರ ಸ್ತಂಭವಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಕೆಂಚನಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆಂಚನಾಲದಲ್ಲಿ ಆಯೋಜಿಸಲಾದ ಸುಮಾರು 1.20 ಕೋಟಿ ಅಂದಾಜು ವೆಚ್ಚದ 2.00 ಕಿ.ಮೀ.ನ ಸಿದ್ದಪ್ಪನಗುಡಿಯಿಂದ ಆಚಾಪುರ ಜಿಲ್ಲಾ ಮುಖ್ಯರಸ್ತೆಯಿಂದ ಸಂಪರ್ಕ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸಾಮಾನ್ಯ ಜನರ ಅಭಿವೃದ್ದಿ ಹೊಂದಬೇಕು ರಸ್ತೆ ಅಭಿವೃದ್ದಿ ಮಾಡುವುದು ಕೆಂಚನಾಲ ಒಂದೇ ಆಲ್ಲ ನನ್ನ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯಿತ್ ವ್ಯಾಪ್ತಿಯಲ್ಲಿ ಬರುವೆ ಸಂಪರ್ಕ ರಸ್ತೆಗಳಿಗೆ ಅನುದಾನವನ್ನು ಬಿಡುಗಡೆಗೊಳಿಸುವುದರೊಂದಿಗೆ ಸುಸಜ್ಜಿತ ಸಂಪರ್ಕ ರಸ್ತೆ ಅಭಿವೃದ್ದಿಪಡಿಸಲಾಗುತ್ತಿದೆ ಎಂದು ಹೇಳಿದ ಆವರು, ರಾಜ್ಯ ಸರ್ಕಾರ ಸಾಗರ ಕ್ಷೇತ್ರಕ್ಕೆ 232 ಕಾಲಸಂಕ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಹೆಚ್ಚಿನ ಆದ್ಯತೆ ನೀಡಿದ್ದು ಇತಿಹಾಸದಲ್ಲಿಯೇ ಯಾರು ಇಷ್ಟು ಕಾಲಸಂಕಕ್ಕೆ ಅನುದಾನ ತಂದಿಲ್ಲ ಎಂದರು.

ಸರ್ಕಾರದ ಶಕ್ತಿಯೋಜನೆಯಡಿ ಗ್ರಾಮೀಣ ಪ್ರದೇಶಕ್ಕೆ ಎರಡ್ಮೂರು ಬಸ್ ಸೌಲಭ್ಯವನ್ನು ಕಲ್ಪಿಸುವ ಬಗ್ಗೆ ಚಿಂತನೆ ನಡೆಸಿರುವುದಾಗಿ ಹೇಳಿದ ಅವರು, ಗ್ಯಾರಂಟಿ ಯೋಜನೆಯಿಂದ ಪ್ರತಿಯೊಂದು ಬಡಕುಟುಂಬಗಳು ಆರ್ಥಿಕವಾಗಿ ಮೇಲೆ ಬರುವಂತೆ ಮಾಡಿದೆ ಇದರಿಂದಾಗಿ ಬಡವರು ಹಿಂದುಳಿದವರು ಬಡವರು ಹಿಂದೂಳಿದವರ ಆಶೋತ್ತರವನ್ನು ಪರಿಹರಿಸಲು ಸಹಕಾರಿಯಾಗಿದೆ. ಉಳಿದಂತೆ ಕೆಂಚನಾಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ 8 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಅನುದಾನ ನೀಡಿರುವುದಾಗಿ ತಿಳಿಸಿ ವರ್ಷದಲ್ಲಿ ಎರಡು ಬಾರಿ ಆಚರಿಸಲಾಗುವ ಕೆಂಚನಾಲ ಮಾರಿಕಾಂಬ ದೇವಸ್ಥಾನ ಬಳಿ ಸಭಾಭವನ ನಿರ್ಮಾಣಕ್ಕೆ ಹಾಗೂ ಮಹಾದ್ವಾರ ಸೇರಿದಂತೆ ಚರಂಡಿ ಸರ್ಕಲ್ ಅಗಲೀಕರಣಕ್ಕೆ ಸಾರ್ವಜನಿಕರು ತಮ್ಮ ಮನೆಯ ಮುಂಭಾಗ ಜಾಗ ತೆರವುಗೊಳಿಸುವುಂತೆ ಸೂಚಿಸಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗೆ ವರ್ಷಕ್ಕೆ 54 ಸಾವಿರ ಕೋಟಿ ಖರ್ಚು ಮಾಡುತ್ತಿದ್ದು ಈ ಸೌಲಭ್ಯಗಳು ಸಮರ್ಪಕವಾಗಿ ಫಲಾನುಭವಿಗಳನ್ನು ತಲುಪುವಂತಾಗಿದೆ ಎಂದರು.

ಕೆಂಚನಾಲ ಗ್ರಾಮ ಪಂಚಾಯಿತ್ ಅಧ್ಯಕ್ಷ ಮಹಮದ್ ಶರೀಫ್ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷೆ ಲಕ್ಷ್ಮಮ್ಮ, ಗ್ರಾಮ ಪಂಚಾಯಿತ್ ಸದಸ್ಯರಾದ ಪರಮೇಶ, ರಮ್ಯ, ಗೌರಮ್ಮ, ಪುಟ್ಟಮ್ಮ, ಉಷಾ, ಉಬೇದುಲಾ ಷರೀಫ್, ಮಂಜುನಾಥ, ಕೃಷ್ಣೋಜಿರಾವ್, ಲೋಕೋಪಯೋಗಿ ಇಲಾಖೆಯ ಎಇಇ ಸಂತೋಷ, ಜೆಇ ಸಿಂಧು, ಪಂಚಾಯಿತ್ ಅಭಿವೃದ್ದಿ ಅಧಿಕಾರಿಗಳು ಸಿಬ್ಬಂದಿವರ್ಗ ಹಾಜರಿದ್ದರು.

ಉಬೇದುಲಾ ಷರೀಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಸ್ವಾಗತಿಸಿ ನಿರೂಪಿಸಿದರು. ಕೃಷ್ಣೋಜಿರಾವ್ ವಂದಿಸಿದರು.

Leave a Comment