Hosanagara

ಹೊಸನಗರ : ನರೇಗಾದಲ್ಲಿ ಶೇ.20 ಅರಣ್ಯೀಕರಣಕ್ಕೆ ಅವಕಾಶವಿದೆ : ನರೇಂದ್ರ ಕುಮಾರ್ 

ಹೊಸನಗರ ; ಅರಣ್ಯೀಕರಣಕ್ಕೆ ನರೇಗಾದಲ್ಲಿ ಶೇ.20 ಅರಣ್ಯೀಕರಣಕ್ಕೆ ಅವಕಾಶವಿದೆ ಇಂತಹ ಯೋಜನೆ ಮೂಲಕ ಸಾಮಾಜಿಕ ಅರಣ್ಯ ಬೆಳೆಸಬಹುದು ಎಂದು ಕಾರ್ಯನಿರ್ವಹಣಾಧಿಕಾರಿ ನರೇಂದ್ರ ಕುಮಾರ್ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ತಾಲ್ಲೂಕಿನ ಬಟ್ಟೆಮಲ್ಲಪ್ಪ ಸಾರಾ ಸಂಸ್ಥೆಯಲ್ಲಿ ನಡೆದ ಸಾಮಾಜಿಕ ಅರಣ್ಯ ಸಂರಕ್ಷಣೆಯ ಸಮಾಲೋಚನಾ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು‌.

ವೃಕ್ಷಲಕ್ಷ ಆಂದೋಲನದ ಹನಿಯ ರವಿ ಮಾತನಾಡಿ, ಯಾವುದೇ ಕಾರಣಕ್ಕೂ ಸಾಮಾಜಿಕ ಅರಣ್ಯದಲ್ಲಿ ಅಕೇಶಿಯ ಕೂಡದು, ಮಿಶ್ರ ಸಹಜ ಅರಣ್ಯಕ್ಕೆ ಅವಕಾಶವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತಹೆಗಡೆ ಅಶಿಸರ ಮಾತನಾಡಿ, ಶರಾವತಿ ಉಪನದಿಗಳ ಉಗಮ ಪ್ರದೇಶಗಳಲ್ಲಿ ಈ ಹಿಂದೆ ಸಾಮಾಜಿಕ ವನ ನಿರ್ಮಾಣ ಮಾಡಿರುವುದರಿಂದ ಅಮ್ಮನಘಟ್ಟ ಸಂರಕ್ಷಣೆಯಾಗಿದೆ ಎಂದು ನೆನಪಿಸಿದರು.

ಕೇಶವಪುರದ ಟಿ.ಮಂಜುನಾಥ್ ಮಾತನಾಡಿ,
80ರ ದಶಕದಲ್ಲಿ ಎಂಪಿಎಂ ವಿರೋಧಿಸಿ ಸಾಮಾಜಿಕ ಅರಣ್ಯಕ್ಕೆ ಅನುವು ಮಾಡಿಕೊಟ್ಟ ಪರಿಣಾಮ ಪ್ರಸ್ತುತ ಸಹಜ ಅರಣ್ಯ ಬೆಳೆಯಲು ಅನುಕೂಲವಾಗಿದೆ ಎಂದು ನೆನಪಿಸಿಕೊಂಡರು.

ಆಂದೋಲನದ ಸಂಚಾಲಕ ಕೆ.ವೆಂಕಟೇಶ್ ಮಾತನಾಡಿ, ಪಹಣಿಯಲ್ಲಿ ಸಾಮಾಜಿಕ ಅರಣ್ಯ ನಮೂದಿಸಬೇಕು ಎಂದು ಸೂಚಿಸಿದರು.

ಕೆ.ಹುಣಸವಳ್ಳಿ ಸಾಮಾಜಿಕ ಅರಣ್ಯ ವೀಕ್ಷಣೆ, ವೃಕ್ಷಾರೋಪಣ, ಬೀಜದುಂಡೆ ಬಿತ್ತನೆ ನಡೆಯಿತು. ಹುಣಸವಳ್ಳಿ ವನದ ಸಹಜ ಸಮ್ಮಿಶ್ರ ಸಂವೃದ್ಧಿಗೆ ತಂಡ ಮೆಚ್ಚುಗೆ ಸೂಚಿಸಿತು.

ಎಸಿಎಫ್ ಪ್ರಭಾಕರ್, ವಲಯಾರಣ್ಯಾಧಿಕಾರಿ ರಾಘವೇಂದ್ರ, ಚಕ್ರವಾಕ ಸುಬ್ರಹ್ಮಣ್ಯ, ಕೆ.ಪಿ.ಕೃಷ್ಣಮೂರ್ತಿ, ಧನುಷ್ ಸಾರಾ, ಕುಮಾರಗೌಡ, ಶ್ರೀಪಾದ ಗದ್ದೆಮನೆ, ಶ್ರೀಪಾದಬಿಚ್ಚುಗತ್ತಿ, ಅರಣ್ಯ ಇಲಾಖೆ, ತಾಪಂ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>