Hosanagara

ಮಲೆನಾಡಿನ ನಡುಮನೆಯಲ್ಲಿ ಭಾರಿ ವರ್ಷಧಾರೆ ; ಧರೆಗುರುಳಿದ ನೂರಾರು ಮರಗಳು, ವಿದ್ಯುತ್ ಸಂಪರ್ಕ ಸ್ಥಗಿತ

ರಿಪ್ಪನ್‌ಪೇಟೆ : ಮಲೆನಾಡಿನ ನಡುಮನೆ ಎಂದೇ ಖ್ಯಾತಿ ಪಡೆದಿರುವ ಹೊಸನಗರ ತಾಲೂಕಿನಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಭಾರಿ ಗಾಳಿಯೊಂದಿಗೆ ಸುರಿಯುತ್ತಿರುವ ಮಳೆಗೆ ನೂರಾರು ವಿದ್ಯುತ್‌ ಕಂಬಗಳು, ಮರಗಳು ಧರೆಗುರುಳಿ ಅಪಾರ ಹಾನಿ ಸಂಭವಿಸಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಭಾರಿ ಗಾಳಿ ಮಳೆಯ ಪರಿಣಾಮ ರಿಪ್ಪನ್‌ಪೇಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಕ ಹಾನಿ ಸಂಭವಿಸಿದೆ. ಬಿರುಗಾಳಿಯ ಅಬ್ಬರಕ್ಕೆ ಮರಗಳು ನೆಲಕ್ಕುರುಳಿದ್ದು ನೂರಾರು ವಿದ್ಯುತ್ ಕಂಬಗಳು ತುಂಡಾಗಿ ಬಿದ್ದು ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ರಿಪ್ಪನ್‌ಪೇಟೆ, ಹೆದ್ದಾರಿಪುರ, ಚಿಕ್ಕಜೇನಿ, ಕೋಡೂರು, ಹುಂಚ, ಬೆಳ್ಳೂರು, ಅರಸಾಳು, ಬೆನವಳ್ಳಿ ಮಸರೂರು, ಬೆಳಂದೂರು, ಹಾಲುಗುಡ್ಡೆ, ಬಾಳೂರು, ಹರತಾಳು, ಕುಕ್ಕಳಲೇ, ಕೆರೆಹಳ್ಳಿ, ಬರುವೆ, ಗವಟೂರು, ಮಳವಳ್ಳಿ, ಮೂಗುಡ್ತಿ, ಕಣಬಂದೂರು, ಕೊಳವಳ್ಳಿ, ಕೋಟೆತಾರಿಗ, ಜಂಬಳ್ಳಿ, ಮಳಲಿಕೊಪ್ಪ, ಕರಿಗೆರಸು, ಹಿಂಡ್ಲೆಮನೆ, ಹುಗುಡಿ, ಅಮೃತ, ಶಿವಪುರ, ಹುಳಿಗದ್ದೆ, ಸಂಪಳ್ಳಿ, ಕಲ್ಲುಕೊಪ್ಪ, ಆನೆಗದ್ದೆ, ಹುಂಚದಕಟ್ಟೆ, ದೋಬೈಲು, ಬುಕ್ಕಿವರೆ, ಹುತ್ತಳ್ಳಿ, ತಳಲೆ, ಕಗ್ಗಚ್ಚಿ, ಕಲ್ಲೂರು, ಮುನಿಯೂರು, ಬಿದರಹಳ್ಳಿ, ನಾಗರಹಳ್ಳಿ, ಹಾರಂಬಳ್ಳಿ, ಬಸವಾಪುರ, ವಡಾಹೊಸಳ್ಳಿ, ಮುಡುಬ, ತಮ್ಮಡಿಕೊಪ್ಪ, ಇನ್ನಿತರ ಕಡೆಗಳಲ್ಲಿ ಗಾಳಿ-ಮಳೆಯ ಆರ್ಭಟಕ್ಕೆ ಮರಗಳು ವಿದ್ಯುತ್ ತಂತಿ ಮೇಲೆ ಬಿದ್ದು ವಿದ್ಯುತ್ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ.

ಮೈದುಂಬಿದ ಕುಮದ್ವತಿ ನದಿ

ಭಾರಿ ಮಳೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಿನ್ನೆ ಮತ್ತು ಇಂದು ಹೊಸನಗರ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ಮೈದುಂಬಿದ ಕುಮದ್ವತಿ ನದಿ !

ಕಲ್ಲೂರು ಗ್ರಾಮದ ಬಳಿ ಹರಿಯುವ ಕುಮದ್ವತಿ ನದಿ ನೀರು ಹರಿಯಲಾರಂಭಿಸಿದ್ದು ಮೀನು ಹಿಡಿಯಲು ಹಲವರು ನದಿಯಂಚಿನಲ್ಲಿ ಗಾಳ ಹಾಗೂ ಬಲೆ ಹಾಕುತ್ತಿದ್ದ ದೃಶ್ಯ ಕಂಡ ಬಂದಿತು.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>