ಹುಂಚ ಹಿಂದೂ ಸಂಗಮೋತ್ಸವದಲ್ಲಿ ಶಾಸಕ ಆರಗ ಜ್ಞಾನೇಂದ್ರ ; ಜಾತ್ಯಾತೀತರ ಪರ ಎನ್ನುವ ಸರ್ಕಾರದಿಂದಲೇ ಹಿಂದೂಗಳಲ್ಲಿ ಒಡಕು ಸೃಷ್ಟಿ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಜಾತ್ಯಾತೀತರ ಪರ ಎಂದು ಹೇಳುತ್ತಿರುವ ಸರ್ಕಾರಗಳು ಜಾತಿಯ ಹೆಸರಿನಲ್ಲಿ ಹಿಂದೂಗಳ ಸಂಘಟನೆಯನ್ನು ಛಿದ್ರಗೊಳಿಸಲು ಹೊರಟಿದೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಹುಂಚ ಗ್ರಾಮದಲ್ಲಿ ಹೊಸನಗರ ತಾಲ್ಲೂಕು ಹಿಂದೂ ಸಂಗಮ ಆಯೋಜನಾ ಸಮಿತಿಯವರು ಆಯೋಜಿಸಲಾದ ಹಿಂದೂ ಸಂಗಮೋತ್ಸವ ಶೋಭಾಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಸಮಾಜದಲ್ಲಿ ಧರ್ಮ ಭಾವನೆ ಶಾಂತಿ ಮತ್ತು ಸಹಕಾರವನ್ನು ಬೆಳಸುತ್ತದೆ. ಪುರಾತನ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ತಲುಪಿಸಲು ಎಲ್ಲರೂ ಸಂಘಟಿತರಾಗಬೇಕು.ಎಲ್ಲ ವರ್ಗದವರನ್ನು ಒಂದೇ ವೇದಿಕೆಯಲ್ಲಿ ಸೇರಿಸುವುದರೊಂದಿಗೆ ಸಮಾಜದ ಹಿಂದೂ ಶಕ್ತಿ ಮತ್ತು ಗೌರವವನ್ನು ಹೆಚ್ಚಿಸುವಂತಾಗಲು ಶ್ರಮಿಸಬೇಕು ಎಂದ ಅವರು, ಈ ರಾಷ್ಟ್ರ ಸರಿಯಾಗಿ ನಡೆಯಬೇಕು ಎಂದರೆ ಈ ದೇಶದ ಈ ನೆಲದ ಸನಾತನ ಧರ್ಮ ಗಟ್ಟಿಯಾಗಿ ನಿಲ್ಲಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಲೋಹಿತಾಶ್ವ ಕೇದಿಗೆರೆ ದಿಕ್ಸೂಚಿ ಭಾಷಣ ಮಾಡಿ, ಹಿಂದೂ ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವುದು. ಇಂದಿನ ಯುವಜನಾಂಗದವರಲ್ಲಿ ನಮ್ಮ ಸಂಸ್ಕೃತಿ ಸಂಸದಕಾರವನ್ನು ಉಳಿಸಿ ಬೆಳಸುವಂತೆ ಮಾಡುವುದು. ಸನಾತನ ಧರ್ಮಮೌಲ್ಯಗಳನ್ನು ಪರಿಚಯಿಸುವುದು. ಸಮಾಜದಲ್ಲಿ ಶಾಂತಿ ಸೌಹಾರ್ದತೆ ಬೆಳಸುವುದು ಇಂದಿನ ಅಗತ್ಯವಾಗಿದೆ ಎಂದರು.

ಹುಂಚ ಶ್ರೀ ಜೋಡಿಗಣಪತಿ ದೇವಸ್ಥಾನದ ಬಳಿಯಲ್ಲಿ ಗೋಪೂಜೆಯೊಂದಿಗೆ ಹಿಂದೂ ಸಂಗಮೋತ್ಸವಕ್ಕೆ ಚಾಲನೆ ನೀಡುವುದರೊಂದಿಗೆ ರಾಜಬೀದಿ ಮೆರವಣಿಗೆಯೊಂದಿಗೆ ಕಾರ್ಯಕ್ರಮ ನಡೆಯುವ ಶ್ರೀ ಆಂಜನೇಯ ದೇವಸ್ಥಾನದ ಬಳಿಗೆ ತೆರಳಿತು.

Leave a Comment