ಕೋಡೂರು ; ಜನಪ್ರಿಯತೆ ಪಡೆದ ಮಕ್ಕಳ ಸಂತೆ, ಪೋಷಕರಿಂದ ಖರೀದಿ ಭರಾಟೆ ಜೋರು

Written by Mahesha Hindlemane

Published on:

ರಿಪ್ಪನ್‌ಪೇಟೆ ; ಸ್ಲೇಟು, ಬಳಪ, ಪೆನ್ನು, ಪೆನ್ಸಿಲ್ ಹಿಡಿಯುವ ಕೈಗಳು ಇಂದು ತಕ್ಕಡಿ ಹಿಡಿಯುವ ಮೂಲಕ ದಿನಸಿ ತರಕಾರಿ, ಐಸ್‌ಕ್ರೀಮ್ ಆರೋಗ್ಯಕರ ಪಾನೀಯ, ರಾಗಿ, ಹಾಲು, ರುಚಿಕರ ಪಾನಿಪೂರಿ, ಸಮೋಸ ಫ್ರೂಟ್‌ಸಲಾಡ್, ಬಜ್ಜಿ, ಬಟ್ಟೆ ಅಂಗಡಿಯನ್ನು ನಡೆಸುವುದರೊಂದಿಗೆ ಮಕ್ಕಳ ಸಂತೆ ಜನಪ್ರಿಯತೆಗೊಳಿಸುವುದರೊಂದಿಗೆ ಖರೀದಿಯಲ್ಲಿ ಸಹ ಪೋಷಕವರ್ಗ ತಮ್ಮ ಮಕ್ಕಳ ಸಂತೆಯಲ್ಲಿ ಜಮಾಯಿಸಿ ಗಮನಸೆಳೆದ ದೃಶ್ಯ ಕಾಣುವಂತಾಯಿತು. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಮಕ್ಕಳು ಕಬ್ಬಿನ ಆಲೆಮನೆಯನ್ನು ನಡೆಸುವುದರೊಂದಿಗೆ ಎಲ್ಲರ ಗಮನ ಸೆಳೆದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಕೋಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾದ `ಮಕ್ಕಳ ಸಂತೆ’ಯಲ್ಲಿ ವಿದ್ಯಾರ್ಥಿಗಳು ಉತ್ಸುಕತೆಯಿಂದ ವಿನೂತನ ಹೆಸರಿನಲ್ಲಿ ಆಂಗಡಿಗಳನ್ನು ತೆರೆದು ತಾಜಾ ತರಕಾರಿ, ಮೊಳಕೆ ಕಟ್ಟಿದ ಹೆಸರುಕಾಳು, ಪೋಷಕಾಂಶದ ಸೊಪ್ಪು ಇನ್ನಿತರ ದಿನಸಿ ಸಾಮಾನುಗಳನ್ನು ಮಾರಾಟ ಮಾಡಿದರು.

ಶಾಲಾ ಮಕ್ಕಳ ಸಂತೆಯ ಕಾರ್ಯಕ್ರಮವನ್ನು ಕೋಡೂರು ಗ್ರಾಮ ಪಂಚಾಯಿತ್ ನಿಕಟಪೂರ್ವ ಅಧ್ಯಕ್ಷ ಜಯಪ್ರಕಾಶಶೆಟ್ಟಿ ತರಕಾರಿಯನ್ನು ಖರೀದಿಸುವ ಮೂಲಕ ಉದ್ಘಾಟಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ ವೈ, ಪಂಚಾಯಿತ್ ಪಿಡಿಒ ನಾಗರಾಜ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ, ಶಿಕ್ಷಕಿ ಲಕ್ಷ್ಮಿದೇವಿ, ನಾಗರತ್ನ, ಅಂಬಿಕಾ, ರುಹಿನಾತಾಜ್, ಸುಧಾ, ಮಾನಸ, ಪ್ರದೀಪ್ ಇನ್ನಿತರರು ಪಾಲ್ಗೊಂಡಿದ್ದರು.

Leave a Comment