ಗರ್ತಿಕರೆ-ಕಮ್ಮಚ್ಚಿ ರಸ್ತೆಯ ಅವ್ಯವಸ್ಥೆ ; ಜನಪ್ರತಿನಿಧಿಗಳೇ ಎಲ್ಲಿದ್ದೀರಾ? ನಮ್ಮೂರಿನ ರಸ್ತೆ ನೋಡಿ ಸ್ವಾಮಿ ಹೇಗಿದೆ, ದಲಿತರ ಅಳಲು ಕೇಳುವರ‍್ಯಾರು ಇಲ್ಲವಾ ?

Written by Mahesha Hindlemane

Published on:

ರಿಪ್ಪನ್‌ಪೇಟೆ ; ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗರ್ತಿಕೆರೆ-ಕಮ್ಮಚ್ಚಿ ಸಂಪರ್ಕದ ಹಾಳಾಗಿ ಹೋಗಿರುವ ರಸ್ತೆಯ ದುರಸ್ಥಿಗಾಗಿ ಕಳೆದ 35 ವರ್ಷಗಳಿಂದಲೂ ಇಲ್ಲಿನ ಪರಿಶಿಷ್ಟ ಜಾತಿ ಜನಾಂಗದವರು ಜಾತಕ ಪಕ್ಷಿಯಂತೆ ದಿನ ನೋಡುವಂತಾಗಿದ್ದು ಇವರ ಗೋಳು ಕೇಳೋರಿಲ್ಲದಂತಾಗಿ ಅವ್ಯವಸ್ಥೆಯ ಆಗರವಾಗಿ ಈ ಸಂಪರ್ಕದ ಗ್ರಾಮಗಳ ಸಾರ್ವಜನಿಕರು ಹಿಡಿಶಾಪ ಹಾಕಿಕೊಂಡು ಓಡಾಡುವಂತಾಗಿದೆ ಎಂದು ಇಲ್ಲಿನ ನಿವಾಸಿಗಳು ತಮ್ಮ ಆಕ್ರೋಶವನ್ನು ಮಾಧ್ಯಮದವರ ಮುಂದೆ ತೋಡಿಕೊಂಡಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಈ ಸಂಪರ್ಕದ ರಸ್ತೆಯು 18 ಊರುಗಳ 2-3 ಸಾವಿರಕ್ಕೂ ಹೆಚ್ಚು ಕುಟುಂಬಗಳನ್ನು ಹೊಂದಿರುವ 12 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಾಲ್ಕೈದು ಪ್ರಾಥಮಿಕ ಶಾಲೆಗಳನ್ನು ಎರಡು ಗ್ರಾಮ ಪಂಚಾಯಿತಿಗಳಿಗೆ ಸೇರಿದ ಹರಿಜನ ಕೇರಿಯನ್ನು ಹೊಂದಿರುವ 600 ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಓಡಾಡುವ ಮತ್ತು ಅಮೃತ ಗ್ರಾಮ ಪಂಚಾಯ್ತಿ ಪಕ್ಕದಲ್ಲಿ ಹಾದು ಹೋಗುವ ಈ ರಸ್ತೆಯ ಅಭಿವೃದ್ದಿಯಾಗದೇ ಕಳೆದ 35 ವರ್ಷಗಳಿಂದ ಡಾಂಬರೀಕರಣ ಸಹ ಕಾಣದ ಮಾಯವಾದ ಚರಂಡಿ ಈ ಸಂಪರ್ಕ ರಸ್ತೆ ಅಭಿವೃದ್ದಿಪಡಿಸುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಗಮಹರಿಸದೇ ಇರುವುದರ ಬಗ್ಗೆ ಸಂಪರ್ಕ ರಸ್ತೆಯ ಗ್ರಾಮಸ್ಥರು ತಮ್ಮ ಅಸಮದಾನವನ್ನು ಮಾಧ್ಯಮದವರ ಮುಂದೆ ‘ಸ್ಥಳೀಯ ಸಣ್ಣತನದ ರಾಜಕಾರಣಿಗಳ, ದೊಡ್ಡ ಹೆಸರು ಇಟ್ಟುಕೊಂಡಿರುವ ಕೈಲಾಗದ ಸ್ಥಳೀಯ ಮುಖಂಡರ, ರಸ್ತೆ ಹೀಗಿದ್ದರೂ ಪ್ರತಿಭಟಿಸದೆ ಗುಬ್ಬಚ್ಚಿಯಂತೆ ಗೂಡು ಸೇರಿರುವ ಜಂಜಿಗಳು ಕಂಡುಕಾಣದೆ ಕುಳಿತಿರುವ ಅಯೋಗ್ಯ ಅಧಿಕಾರಿಗಳ ವಿರುದ್ದ ಬರೀ ಶಾಪಹಾಕಿದ ಫಲಶೃತಿಯ ಈ ರಸ್ತೆಯಲ್ಲಿ ಸಂಚಾರ ಮಾಡುವವರಿಗೆ ನಮ್ಮ ದಿಕ್ಕಾರ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನಾದರೂ ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನಹರಿಸಿ ಕಿತ್ತು ಹೋದ ಹೊಂಡ-ಗುಂಡಿ ಬಿದ್ದಿರುವ ರಸ್ತೆಯ ಅಭಿವೃದ್ದಿಗೆ ಶ್ರಮಿಸುವರೇ ಕಾದುನೋಡಬೇಕಾಗಿದೆ.

Leave a Comment