ಹೊಸನಗರ ; ತಾಲ್ಲೂಕಿನಲ್ಲಿ ಎಲೆಚುಕ್ಕಿ ರೋಗ ಅಧಿಕವಾಗಿದ್ದು ಸಮಗ್ರ ನಿರ್ವಹಣೆ ಮೂಲಕ ಪರಿಹರಿಸಬಹುದು ಎಂದು ತಾಲ್ಲೂಕು ಕೃಷಿ ಸಮಾಜದ ಅಧ್ಯಕ್ಷ ಎ.ವಿ. ಮಲ್ಲಿಕಾರ್ಜುನ ಹೇಳಿದರು.
ಜಿಲ್ಲಾಡಳಿತ, ತಾಲ್ಲೂಕು ಪಂಚಾಯಿತಿ, ತೋಟಗಾರಿಕ ಇಲಾಖೆ ಮತ್ತು ಇತರೇ ಎಲ್ಲ ಇಲಾಖೆಗಳ ಸಹಯೋಗದೊಂದಿಗೆ ತಾಲ್ಲೂಕು ಪಂಚಾಯತಿ ಆವರಣದಲ್ಲಿ ಎಲೆಚುಕ್ಕಿ ರೋಗದ ತಾಂತ್ರಿಕ ಕಾರ್ಯಗಾರ ಏರ್ಪಡಿಸಲಾಗಿದ್ದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಡಿಕೆ ಬೆಳೆ ಹೊಸನಗರ ತಾಲ್ಲೂಕಿನ ಪ್ರಮುಖ ಜೀವನಾಡಿ ಬೆಳೆಯಗಿದ್ದು ಮಣ್ಣು ಪರೀಕ್ಷೆ, ನೀರಿನ ನಿರ್ವಹಣೆ, ಕಳೆ ನಿರ್ವಹಣೆ, ಮಣ್ಣಿಗೆ ಸುಣ್ಣದ ಬಳಕೆ ಮೂಲಕ ಎಲೆಚುಕ್ಕಿ ರೋಗ ನಿಯಂತ್ರಣ ಮಾಡಬಹುದೆಂದು ಅಭಿಪ್ರಾಯಪಟ್ಟರು.
ತಳಮಟ್ಟದಲ್ಲಿ ಕೃಷಿ ಸಖಿ, ಪಶುಸಖಿ, ರಾಷ್ಟ್ರೀಯ ಜೀವನೋಪಾಯ ಮಿಷನ್ ಯೋಜನೆಯಲ್ಲಿನ ಕಾರ್ಮಿಕರನ್ನು ಒಗ್ಗೂಡಿಸಿ ತಾಂತ್ರಿಕ ಮಾಹಿತಿ ನೀಡಿದ್ದಲ್ಲಿ ರೋಗದ ನಿರ್ವಹಣೆಗೆ ಅನುಕೂಲಕರವಾಗಬಹುದು ಎಂದರು.
ಕಾರ್ಯಗಾರಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ತಾಲ್ಲೂಕು ಕೃಷಿ ಸಮಾಜದ ಜಿಲ್ಲಾ ಪ್ರತಿನಿಧಿ ವಾಟಗೋಡು ಸುರೇಶ್ ಸುಮಾರು ನಾಲ್ಕೈದು ವರ್ಷಗಳಿಂದ ತಾಲ್ಲೂಕಿನಲ್ಲಿ ಎಲೆಚುಕ್ಕಿ ರೋಗ ಕಾಣಿಸಿಕೊಂಡು ಅಡಿಕೆ ಬೆಳೆಯನ್ನು ನಾಶಪಡಿಸುತ್ತಿದೆ ಈ ರೋಗಕ್ಕೆ ತಡೆ ನೀಡುವ ಔಷಧಿಗಳನ್ನು ಕಂಡು ಹಿಡಿಯದಿದ್ದರೇ ಮುಂದಿನ ದಿನದಲ್ಲಿ ಅಡಿಕೆ ಬೆಳೆಗಾರರು ದಿವಾಳಿ ಅಂಚಿಗೆ ತಲುಪುತ್ತಾರೆ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿರುವುದರಿಂದ ರೋಗಗಳು ಉದ್ಬಣಗೊಳ್ಳುತ್ತಿದ್ದು ಹಿಂದೆ ರೈತರು ಬಳಸುತ್ತಿದ್ದ ಸಿಗಣಿ ಗೊಬ್ಬರ ಇತರೆಗೊಬ್ಬರಗಳನ್ನು ಬಳಸುವ ಪದ್ಧತಿ ಬಂದರೇ ರೋಗಗಳನ್ನು ನಿಯಂತ್ರಿಸಬಹುದೆಂದು ಹಾಗೂ ಸರ್ಕಾರ ತಕ್ಷಣ ಎಲೆ ಚುಕ್ಕಿ ರೋಗದ ಪರಿಹಾರ ನೀಡುವುದರ ಜೊತೆಗೆ ಎಲೆಚುಕ್ಕಿ ರೋಗಕ್ಕೆ ಔಷಧಿಯನ್ನು ಕಂಡು ಹಿಡಿಯಬೇಕೆಂದರು.

ಅಡಿಕೆ ಬೆಳೆಯ ವಿವಿಧ ರೋಗಗಳ ಮತ್ತು ಕೀಟಗಳ ನಿರ್ವಹಣೆ ಕುರಿತು ವಿಜ್ಞಾನಿ ಡಾ|| ಗಿರೀಶ್ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಚಿನ್ ಹೆಗ್ಗಡೆ, ವೀನುಗಾರಿಕ ಇಲಾಖೆಯ ಅಧಿಕಾರಿ ಬಸಮ್ಮ, ತೋಟಗಾರಿಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪುಟ್ಟನಾಯ್ಕ, ತಾಂತ್ರಿಕ ಕಾರ್ಯಗಾರದ ಅಧಿಕಾರಿಗಳು ವಿವಿಧ ಇಲಾಖೆಯ ಸಿಬ್ಬಂದಿಗಳಾದ ಕರಿಬಸವನಾಯ್ಕ್, ಚಂದ್ರಶೇಖರ್, ರಮೇಶ್ ಹೋಗಾರ್, ನಾಗವೇಣಿ ಇನ್ನು ಮುಂತಾದವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





