ಕೇಸರಿ ಅಗ್ನಿಯ ಸಂಕೇತ ; ಶ್ರೀಗಳು

Written by Mahesha Hindlemane

Published on:

ರಿಪ್ಪನ್‌ಪೇಟೆ ; ಸನ್ಯಾಸಿಗಳಿಗೆ ದೀಕ್ಷೆಯ ಸಂದರ್ಭದಲ್ಲಿ ವಸ್ತ್ರವನ್ನು ನೀಡುವ ಮೂಲಕ ತಮ್ಮಳಗಿನ ದುಷ್ಟಶಕ್ತಿಯ ನಿಗ್ರಹಿಸುವ ಸಲುವಾಗಿ ಕಾವಿ ಧಾರಣೆ ಮಾಡಲಾಗುವುದು.ಅದೇ ರೀತಿಯಲ್ಲಿ ಮಾತೆಯವರು ಹಣೆಯ ತಿಲಕವು ಗೌರವದ ಸಂಕೇತವಾಗಿದ್ದು ಅದನ್ನು ಇಟ್ಟುಕೊಂಡ ಮಹಿಳೆ ಸುಮಂಗಳೆಯ ಸಂಕೇತವೆಂದು ಶಿವಮೊಗ್ಗ ಆದಿಚುಂಚನಗಿರಿ ಶಾಖಾ ಮಠದ ಶ್ರೀ ನಾದಮಯಾನಂದನಾಥ ಸ್ವಾಮೀಜಿ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಬಾಳೂರು ಗ್ರಾಮ ಪಂಚಾಯಿತ್ ವ್ಯಾಪ್ತಿಯ ಶ್ರೀ ರಾಮ ದೇವಸ್ಥಾನ ಸೇವಾ ಸಮಿತಿಯವರು ಮಾದ್ಲಾರದಿಂಬದಲ್ಲಿ ನೂತನವಾಗಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಶ್ರೀಕೋದಂಡರಾಮ ದೇವರ ಪುನರ್ ಪ್ರತಿಷ್ಟಾಪನೆ ಕಟ್ಟಡದ ಲೋಕಾರ್ಪಣೆ ಹಾಗೂ ಧಾರ್ಮಿಕ ಸಮಾರಂಭದ ದಿವ್ಯಸಾನಿದ್ಯವನ್ನು ವಹಿಸಿ ಆಶಿರ್ವಚನ ನೀಡಿ, ಜೀವನದ ಸಾರ್ಥಕತೆಗೆ ಮಠಮಂದಿರಗಳು ಅಗತ್ಯವಾಗಿವೆ. ನಮ್ಮ ಮೂಲ ಆಚಾರ-ವಿಚಾರಗಳನ್ನು ಅರಿತು ಪರಿಪಾಲನೆ ಮಾಡಬೇಕು. ಸಿಂಧೂರ ಸುಮಂಗಲೆಯರಿಗೆ ಭಗವಂತ ಕೊಟ್ಟ ಪ್ರತೀಕದ ಸಂಕೇತ. ಭಾತರದ ಸನಾತನ ಭಾವನೆ ಅದರ ಪಾಲನೆಯಿಂದ ನಮಗೆ ಅಷ್ಟ ಐಶ್ವರ್ಯವನ್ನು ಲಭಿಸುವುದು. ಅಜ್ಞಾನದಿಂದ ಸುಜ್ಞಾನದತ್ತ ಸಾಗುವಂತೆ ಮಾಡುವುದೇ ನಮ್ಮ ಧರ್ಮ ಸಂಸ್ಕಾರವೆಂದ ಅವರು, ಶ್ರೀರಾಮನ ತತ್ವಾದರ್ಶಗಳು ಇಂದಿನ ಯುವಪೀಳಿಗೆ ತಮ್ಮ ಬದುಕಿನಲ್ಲಿ ಹೆಚ್ಚು ಅಳವಡಿಕೆಯಾಗಲಿ ಎಂದ ಅವರು ನಮ್ಮ ಪೂರ್ವಿಕರು ಮೈಲಿಕಲ್ಲು ಪೂಜಿಸುವ ಮೂಲಕ ದೇವರನ್ನು ಕಂಡವರು ಎಂದ ಹೇಳಿದರು.

ಶ್ರೀರಾಮದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಜಯಪ್ರಕಾಶನಾಯಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಕೊಡುಗೈದಾನಿ ಯಶೋಧಮ್ಮ, ಶ್ರೀರಾಮ ದೇವಸ್ಥಾನ ಸೇವಾ ಸಮಿತಿ ಗೌರವಾಧ್ಯಕ್ಷ ಹೆಚ್.ಎಸ್. ಕೃಷ್ಣಮೂರ್ತಿಗೌಡ, ಬಾಳೂರು ಗ್ರಾಮ ಪಂಚಾಯಿತ್ ಮಾಜಿ ಉಪಾಧ್ಯಕ್ಷೆ ವೇದಾವತಿ ಬಾಲಚಂದ್ರ, ಗ್ರಾಮ ಪಂಚಾಯಿತ್ ಮಾಜಿ ಸದಸ್ಯ ಹಾಗೂ ಶ್ರೀರಾಮ ದೇವಸ್ಥಾನ ಸೇವಾ ಸಮಿತಿ ಉಪಾಧ್ಯಕ್ಷ ಹೆಚ್.ಎಸ್.ರಾಜು, ಹೆಚ್.ಎಸ್.ರವಿಹಾಲುಗುಡ್ಡೆ, ಹೆಚ್.ಪಿ.ಪಾಲಾಕ್ಷ, ಚೂಡಾಮಣಿ ಹೆಚ್.ಎಸ್,ಪ್ರೀತಮ್ ಹಾಗೂ ಸಹಕಾರ ಸಂಘದ ಅಧ್ಯಕ್ಷ ಎಂ.ಎಂ.ಪರಮೇಶ್, ರಾಜ್ಯ ಒಕ್ಕಲಿಗ ಸಮಾಜದ ಮಹಿಳಾ ಮುಖಂಡೆ ಪ್ರತಿಮಾ ಶಿವಮೊಗ್ಗ ಇನ್ನಿತರರು ಊರುನ ಹಿರಿಯರು ಸಮಾಜದ ಮುಖಂಡರು ಹಾಜರಿದ್ದರು.

ಚಿಂತು ಸ್ವಾಗತಿಸಿದರು. ಅನನ್ಯ ಅನುಶ್ರೀ ನಿರೂಪಿಸಿದರು. ಹೆಚ್.ವಿ. ಹರೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

Leave a Comment