ರಿಪ್ಪನ್‌ಪೇಟೆ ; ಗುರುವಂದನಾ ಸ್ನೇಹಮಿಲನ ಕಾರ್ಯಕ್ರಮ

Written by Mahesha Hindlemane

Published on:

ರಿಪ್ಪನ್‌ಪೇಟೆ ; ತಾಯಿ-ಗುರುಗಳ ಋಣ ತೀರಿಸಲಾಗದು .ಶಿಕ್ಷಕರಾದವರಲ್ಲಿ ತಾಳ್ಮೆ ಸಹನೆ ಮುಖ್ಯವಾಗಿದೆ. ವಿದ್ಯಾರ್ಥಿಗಳು ಪಾಠಪ್ರವಚನದಲ್ಲಿ ಶ್ರದ್ದೆಯಿಂದ ಕಲಿತರೆ ಮುಂದೆ ಜೀವನದಲ್ಲಿ ಸಾಧನೆ ಮಾಡಿದರೆ ಅದೇ ಗುರುಗಳಿಗೆ ಕೊಡುವ ಗೌರವ ಎಂದು ನಿವೃತ್ತ ಶಿಕ್ಷಕಿ ತ್ರಿವೇಣಿ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ರಿಪ್ಪನ್‌ಪೇಟೆಯ ಬರುವೆ ಗ್ರಾಮದ ಶ್ರೀರಾಷ್ಟ್ರೋತ್ಥಾನ ಶಿಶು ಮಂದಿರದಲ್ಲಿ 1984-85ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಆಯೋಜಿಸಲಾದ ಗುರುವಂದನಾ ಮತ್ತು ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿ, ಸಮಾಜದಲ್ಲಿ ಗುರು-ಹಿರಿಯರಿಗೆ ಸಲ್ಲಿಸಿದರೆ ಅದೇ ಗುರುಗಳಿಗೆ ನೀಡುವ ಗುರುಕಾಣಿಕೆಯಾಗಿದೆ. ವಿದ್ಯಾರ್ಥಿ ಜೀವನದಲ್ಲಿ ತಪ್ಪುಗಳಾಗಿರಬಹುದು. ಆದರೆ ಅದನ್ನು ತಮ್ಮ ಜೀವನದಲ್ಲಿ ಮರೆತು ಎಲ್ಲರೂ ಸ್ನೇಹದಿಂದ ಇದ್ದಾಗ ಮಾತ್ರ ಪಾಠ ಕಲಿಸಿದ ಗುರುಗಳಿಗೆ ಸಾರ್ಥಕವಾಗಿದೆ ಎನ್ನಲು ಸಾಧ್ಯವೆಂದರು.

1984-85ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಗುರುವಂದನಾ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಉಮೇಶ ಆರ್, ಹುಟ್ಟಿ ಬೆಳೆದ ನಮ್ಮೂರಿನಲ್ಲಿ ಕಲಿತು ಸರ್ಕಾರಿ ಉದ್ಯೋಗ ಪಡೆಯುವುದರೊಂದಿಗೆ ನಿವೃತ್ತಿಯ ಜೀವನ ನಡೆಸುತ್ತಿರುವ ನನಗೆ ನಿತ್ಯ ಕಾಣಸಿಗುವ ನಾನು ಕಲಿಸಿದ ವಿದ್ಯಾರ್ಥಿಗಳಲ್ಲಿನ ಗುರುಭಕ್ತಿ ಅವರು ಕೊಡುವ ಗೌರವ ನನಗೆ ಸಂತೃಪ್ತಿ ತಂದಿದೆ ಎಂದರು. ನಿಮ್ಮ ಈ ಗುರುವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅತಿಥಿ ಸತ್ಕಾರ ನನ್ನ ಮನಸ್ಸಿಗೆ ತುಂಬ ಸಂತಸ ತಂದಿದೆ ಎಂದು ಹೇಳಿ ಪ್ರಶಂಸೆ ವ್ಯಕ್ತಪಡಿಸಿದರು.

ನಿವೃತ್ತಿ ಜೀವನ ನಡೆಸುತ್ತಿರುವ ಗಣಿತ ಶಿಕ್ಷಕ ಎ.ಎಸ್.ಭೋಜರಾಜ್‌ರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ 1984-85ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Comment