ಏ. 5 ರಂದು ರಿಪ್ಪನ್‌ಪೇಟೆಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಓಂಶ್ರೀ ಮಾತೃಶ್ರೀ ಸೇವಾ ಸಮಿತಿ (ಎನ್.ಜಿ.ಓ) ಉದ್ಘಾಟನಾ ಸಮಾರಂಭ ಹಾಗೂ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಸಮಾರಂಭವನ್ನು ಏಪ್ರಿಲ್ 5 ರಂದು ಇಲ್ಲಿನ ತೀರ್ಥಹಳ್ಳಿ ರಸ್ತೆಯಲ್ಲಿರುವ ಮೇರಿಮಾತಾ ಶಿಕ್ಷಣ ಸಂಸ್ಥೆಯ ಅವರಣದಲ್ಲಿ ಗಾಂಧಿ ಸೇವಾ ಆಶ್ರಮ ಗೌರಿಗದ್ದೆಯ ಅವಧೂತ ಸದ್ಗುರು ವಿನಯ್‌ಗುರೂಜಿ ಇವರ ದಿವ್ಯಸಾನ್ನಿಧ್ಯದಲ್ಲಿ ಆಯೋಜಿಸಲಾಗಿದೆ ಎಂದು ಉಡುಪಿ ಆದರ್ಶ ಆಸ್ಪತ್ರೆಯ ಸಾರ್ವಜನಿಕ ಅಧಿಕಾರಿ ಸಂತೋಷ ಶೆಟ್ಟಿ ಮತ್ತು ಓಂ ಶ್ರೀಮಾತೃಶ್ರೀ ಸೇವಾ ಸಮಿತಿ ಅಧ್ಯಕ್ಷೆ ಲೇಖನ ಜಿ ನಾಯ್ಕ್ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಿಟ್ಟೂರು ಶ್ರೀನಾರಾಯಣಗುರು ಮಹಾಸಂಸ್ಥಾನಮಠದ ರೇಣುಕಾನಂದ ಸ್ವಾಮಿಜಿ, ಶ್ರೀಕ್ಷೇತ್ರ ಕಾರ್ತಿಕೇಯ ಪೀಠ ಸಾರಗನಜಡ್ಡು ಅವಧೂತ ಯೋಗೇಂದ್ರ ಗುರೂಜಿ ಮತ್ತು ರಿಪ್ಪನ್‌ಪೇಟೆ ಗುಡ್‌ಶಫರ್ಡ್ ಚರ್ಚ್ ಧರ್ಮಗುರು ರೆ.ಪಾ. ಬಿನೋಯ್ ಮ್ಯಾಥ್ಯೂಸ್ ಹಾಗೂ ಜುಮ್ಮಾ ಮಸೀದಿಯ ಧರ್ಮಗುರು ಮುನೀರ್ ಸಖಾಫಿ ಗೌರವ ಉಪಸ್ಥಿತಿಯಲ್ಲಿ ನಡೆಯುವ ಈ ಸಮಾರಂಭದ ಅಧ್ಯಕ್ಷತೆಯನ್ನು ಓಂ ಶ್ರೀಮಾತೃಶ್ರೀ ಸೇವಾ ಸಮಿತಿ ಅಧ್ಯಕ್ಷೆ ಲೇಖನ ಜಿ ನಾಯ್ಕ್ ವಹಿಸುವರು.

ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ.ರಾಘವೇಂದ್ರ, ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು, ಶಾಸಕ ಆರಗ ಜ್ಞಾನೇಂದ್ರ, ಎಂ.ಎ.ಡಿ.ಬಿ. ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಮಾಜಿ ಸಚಿವ ಹರತಾಳು ಹಾಲಪ್ಪ, ಶಿಮುಲ್ ಅಧ್ಯಕ್ಷ ವಿದ್ಯಾಧರ್, ಕೆ.ಪಿ.ಸಿ.ಸಿ. ರಾಜ್ಯ ಸಂಚಾಲಕ ಮಂಜುನಾಥ ಎಸ್, ಉಡುಪಿ ಆದರ್ಶ ಆಸ್ಪತ್ರೆಯ ಮುಖ್ಯಸ್ಥ ಡಾ. ಜಿ.ಎಸ್. ಚಂದ್ರಶೇಖರ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಧರ್ಮೇಶ್‌ಗೌಡ, ಬಿಜೆಪಿ ಮುಖಂಡ ಕೆ.ಎಸ್.ಪ್ರಶಾಂತ್, ಉದ್ಯಮಿ ವಿನಾಯಕ ಭಾಗವಹಿಸುವರು.

ಇದರೊಂದಿಗೆ ಈ ಉಚಿತ ಆರೋಗ್ಯ ತಪಾಸಣೆಯಲ್ಲಿ ರಕ್ತದಲ್ಲಿ ಸಕ್ಕರೆ ಅಂಶದ ಪರೀಕ್ಷೆ, ಇ.ಸಿ.ಜಿ, ಕೊಬ್ಬಿನಾಂಶ, ಎಕೋ, ಕಣ್ಣಿನ ತಪಾಸಣೆಗೆ ಆಗಮಿಸುವ ತಜ್ಞ ವೈದ್ಯಾಧಿಕಾರಿಗಳಾದ ಡಾ.ಚಂದ್ರಶೇಖರ್, ಡಾ.ಉದಯಕುಮಾರ ಪ್ರಭು, ಡಾ.ಸುದೀಪಶೆಟ್ಟಿ, ಮೂಳೆ ಮತ್ತು ಕೀಲು ರೋಗ ವಿಭಾಗ ಡಾ.ಮೋಹನ್ ದಾಸ್ ಶೇಟ್ಟಿ, ಶಸ್ತ್ರ ಚಿಕಿತ್ಸಾ ವಿಭಾಗ ಡಾ.ಪ್ರಶಾಂತ್ ಶೆಟ್ಟಿ, ಇಎನ್.ಟಿ. ವಿಭಾಗ ಡಾ.ಭಾಸ್ಕರ್ ಎಂ.ಎನ್, ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗ ಡಾ.ದಮಯಂತಿ, ಚರ್ಮರೋಗ ವಿಭಾಗ ಡಾ. ಅರುಣ್‌ಶೆಟ್ಟಿ ಕೆ. ನರರೋಗ ಶಸ್ತ್ರ ಚಿಕಿತ್ಸಾ ವಿಭಾಗ ಡಾ. ರಾಜೇಶ್ ನಾಯರ್, ಹೃದ್ರೋಗ ವಿಭಾಗ ಡಾ.ಸುಹಾಸ್ ಜಿ.ಸಿ. ತೆರೆದ ಹೃದಯ ಮತ್ತು ರಕ್ತನಾಳ ಶಸ್ತ್ರ ಚಿಕಿತ್ಸಾ ವಿಭಾಗ ಡಾ.ಗುರುಪ್ರಸಾದ್ ಡಿ ರೈ, ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ವಿಭಾಗ ಡಾ.ಅನಂತ ಎಸ್, ನವಜಾತ ಶಿಶು ಮತ್ತು ಮಕ್ಕಳ ವಿಭಾಗ ಡಾ.ಗುರುಪ್ರಸಾದ್‌ಶೆಟ್ಟಿ ಮಕ್ಕಳ ಶಸ್ತ್ರ ಚಿಕಿತ್ಸಾ ವಿಭಾಗ ಡಾ.ಹರ್ಷ ಆಚಾರ್ಯ ಇವರು ಭಾಗವಹಿಸಿ ತಪಾತಣೆ ನಡೆಸುವರು.

ಸುತ್ತಮುತ್ತಲಿನ ನಾಗರೀಕರು, ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಸೌಲಭ್ಯದ ಸದುಪಯೋಗ ಪಡೆಯುವಂತೆ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಓಂಶ್ರೀಮಾತೃಶ್ರೀ ಸೇವಾ ಸಮಿತಿ (ಎನ್.ಜಿ.ಓ) ಪದಾಧಿಕಾರಿಗಳು ಹಾಜರಿದ್ದರು.

Leave a Comment