ಬೆಂಕಿ ಅವಘಡಕ್ಕೆ ಮನೆ ಸಂಪೂರ್ಣ ಭಸ್ಮ ; ಸ್ಥಳಕ್ಕೆ ಶಾಸಕ ಆರಗ ಜ್ಞಾನೇಂದ್ರ ಭೇಟಿ, ವೈಯಕ್ತಿಕ ನೆರವು

Written by Mahesha Hindlemane

Published on:

ರಿಪ್ಪನ್‌ಪೇಟೆ ; ಹುಂಚ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಮಠದಜಡ್ಡು ಗ್ರಾಮದ ಸುವಿತ್ರಮ್ಮ ಎಂಬುವರ ವಾಸದ ಮನೆಗೆ ಭಾನುವಾರ ಸಂಜೆ ಆಕಸ್ಮಿಕವಾಗಿ ವಿದ್ಯುತ್ ಆವಘಡದಿಂದಾಗಿ ಬೆಂಕಿ ತಗುಲಿ ಮನೆ ಸಂರ್ಪೂಣ ಭಸ್ಮಗೊಂಡಿರುವ ಘಟನೆ ವಿಷಯ ತಿಳಿದ ಶಾಸಕ ಆರಗ ಜ್ಞಾನೇಂದ್ರ ದಿಢೀರ್ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬುವ ಮೂಲಕ ಗೃಹೋಪಯೋಗಿ ವಸ್ತುಗಳನ್ನು ಮತ್ತು ಒಂದು ತಿಂಗಳಿಗಾಗುವಷ್ಟು ದವಸ-ದಾನ್ಯವನ್ನು ನೀಡುವುದರೊಂದಿಗೆ ಸಾಂತ್ವನ ಹೇಳಿ ವೈಯಕ್ತಿಕ ಆರ್ಥಿಕ ನೆರವು ನೀಡಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ತೀವ್ರ ಆಘಾತಕ್ಕೊಳಗಾಗಿರುವ ಕುಟುಂಬದ ಸಾವಿತ್ರಮ್ಮನವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಬೇಗ ಗುಣಮುಖರಾಗುವಂತೆ ಭಗವಂತನಲ್ಲಿ ಪ್ರಾರ್ಥಿಸಿ ಮನೆ ಹಾನಿಗೊಳಗಾದ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಹೊಸನಗರ ಮೆಸ್ಕಾಂ ಇಲಾಖೆಯ ಎಇಇ ಚಂದ್ರಶೇಖರ್, ಕಂದಾಯ ಇಲಾಖೆಯ ಉಪತಹಶೀಲ್ದಾರ್, ರಿಪ್ಪನ್‌ಪೇಟೆ ಪಿಎಸ್‌ಐ ರಾಜುರೆಡ್ಡಿ, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಹುಂಚ ಗ್ರಾಮ ಪಂಚಾಯಿತ್ ಪಿಡಿಒ ಸಿಬ್ಬಂದಿವರ್ಗ ಹಾಜರಿದ್ದರು.

Leave a Comment