ದ್ವಿತೀಯ ಪಿಯುಸಿ ಪರೀಕ್ಷೆ -1 ಫಲಿತಾಂಶ ಪ್ರಕಟ ; ಶಿವಮೊಗ್ಗ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ ಮಹಿನ್ ಖಾನಮ್ ಅಫ್ರಿದಿ

Written by Mahesha Hindlemane

Published on:

ಶಿವಮೊಗ್ಗ ; ಇಂದು ಮಧ್ಯಾಹ್ನ ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶ ಪ್ರಕಟವಾಗಿದ್ದು ಶಿವಮೊಗ್ಗ ತಾಲ್ಲೂಕಿನ ಆಯನೂರು ಗ್ರಾಮದ ವಿದ್ಯಾರ್ಥಿನಿ ಮಹಿನ್ ಖಾನಮ್ ಅಫ್ರಿದಿ ಅವರು 600ಕ್ಕೆ 596 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ರ‍್ಯಾಂಕ್ ಗಳಿಸಿ ಹಾಗೂ ರಾಜ್ಯಕ್ಕೆ 3ನೇ ಟಾಪರ್ ಆಗಿ ಹೆಮ್ಮೆಯ ಸಾಧನೆ ಮಾಡಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಪ್ರಸ್ತುತ ಅವರು ಶಿವಮೊಗ್ಗ ನಗರದ ಪೇಸ್ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರ ತಂದೆ ಜಬೀರ್ ಮತ್ತು ತಾಯಿ ಆಯುಷಾ.

“ನಾನು ದಿನನಿತ್ಯದ ಪಾಠಗಳನ್ನು ಅದೇ ದಿನ ಓದಿ ಮುಗಿಸುವ ಅಭ್ಯಾಸ ಮಾಡಿಕೊಂಡಿದ್ದೆ. ಯಾವುದೇ ಟ್ಯೂಷನ್‌ಗೆ ಹೋಗದೆ ಶ್ರದ್ದೆಯಿಂದ ಓದಿದ್ದೇನೆ. ವೈದ್ಯೆಯಾಗುವುದು ನನ್ನ ಕನಸು, ಅದಕ್ಕಾಗಿ ಅಗತ್ಯವಾದ ಎಲ್ಲಾ ತಯಾರಿಯನ್ನು ಮಾಡಿಕೊಂಡಿದ್ದೇನೆ.”
– ಮಹಿನ್ ಖಾನಮ್ ಅಫ್ರಿದಿ, ವಿದ್ಯಾರ್ಥಿನಿ

ಮಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ ತಂದೆ ಜಬೀರ್, “ತುಂಬಾ ಸಂತೋಷವಾಗಿದೆ. ಅವಳು ಬಹಳ ಪರಿಶ್ರಮ ಪಟ್ಟಿದ್ದಾಳೆ. ವೈದ್ಯೆಯಾಗುವ ಕನಸು ಕಂಡಿದ್ದು, ಅದಕ್ಕೆ ನಾವು ಸಂಪೂರ್ಣ ಪ್ರೋತ್ಸಾಹ ನೀಡುತ್ತಿದ್ದೇವೆ. ಓದಿನ ಮೇಲೆ ಅವಳ ಶ್ರದ್ದೆ ಈ ಸಾಧನೆಗೆ ಕಾರಣವಾಗಿದೆ.”
– ಜಬೀರ್, ವಿದ್ಯಾರ್ಥಿನಿ ತಂದೆ

ವಿಷಯವಾರು ಅಂಕಗಳು :

  • ಇಂಗ್ಲಿಷ್ – 98
  • ಹಿಂದಿ – 100
  • ಫಿಜಿಕ್ಸ್ – 100
  • ಕೆಮಿಸ್ಟ್ರಿ – 99
  • ಗಣಿತ – 100
  • ಜೀವಶಾಸ್ತ್ರ – 99

Leave a Comment