ರಿಪ್ಪನ್ಪೇಟೆ ; ಧರ್ಮಪಾಲನೆ ಸರ್ವರ ಕರ್ತವ್ಯ. ಧರ್ಮ ರಹಿತ ಸಮಾಜ ಎಂದಿಗೂ ಕಲ್ಯಾಣವಾಗಲಾರದು. ಭಾರತೀಯ ಧರ್ಮ ಸಂಸ್ಕೃತಿಯನ್ನು ವಿದೇಶಗರು ಹೆಚ್ಚು ಆಕರ್ಷಸುವ ಉದ್ದೇಶವೇ ಈ ಭಾರತೀಯ ಮಣ್ಣಿನಲ್ಲಿ ಕಣಕಣದಲ್ಲಿ ಧರ್ಮರಕ್ಷಣೆ, ಸಂಸ್ಕೃತಿ, ಸಂಸ್ಕಾರ ಇದೆ ಎಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮ ಅಭಿನವ ಚನ್ನಬಸವ ಮಹಾಸ್ವಾಮೀಜಿ ಹೇಳಿದರು.
ಇಲ್ಲಿನ ಶ್ರೀಸಿದ್ದಿವಿನಾಯಕ ದೇವಸ್ಥಾನದಲ್ಲಿ ವಾರ್ಷಿಕ ಶ್ರೀಮನ್ಮಹಾರಥೋತ್ಸವ ಧಾರ್ಮಿಕ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಭಗವಂತ ಮಠಮಂದಿರದಲ್ಲಿರುವುದಿಲ್ಲ ನಿತ್ಯ ಸ್ಮರಣೀಯರ ಹೃದಯದಲ್ಲಿರುತ್ತಾನೆ. ದೇವಸ್ಥಾನಕ್ಕೆ ಹೋದ ಕಾಯಿ ಪ್ರಸಾದವಾದಂತೆ ಧರ್ಮಮಾರ್ಗಿ ಸಂಸ್ಕಾರಯುತನಾಗುತ್ತಾನೆ. ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್ ಸಂತ ರಾಮದಾಸ, ಕ್ರಾಂತಿಯೋಗಿ ತರುಣ ಸಾಗರ ಮುನಿಗಳ ಬೋಧನೆಗಳನ್ನು ಅರಿತು ಅದರ ಸಂದೇಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಸುಸಂಸ್ಕೃತ ಸಮಾಜ ನಿರ್ಮಾಣವಾಗಲು ಸಾಧ್ಯವೆಂದ ಅವರು, ಮಕ್ಕಳಿಗೆ ಧರ್ಮ ಸಂಸ್ಕಾರದೊಂದಿಗೆ ಉತ್ತಮ ಶಿಕ್ಷಣವನ್ನು ಕೂಡಿ ಎಂದರು.
ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ದಿವಿನಾಯಕ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆರ್.ಈ.ಈಶ್ವರಶೆಟ್ಟಿ ವಹಿಸಿದ್ದರು.
ಸಿದ್ದಿವಿನಾಯಕ ಸೇವಾ ಸಮಿತಿಯ ಅಧ್ಯಕ್ಷ ಎನ್.ಸತೀಶ್, ವ್ಯವಸ್ಥಾಪನಾ ಸಮಿತಿಯ ನಿರ್ದೇಶಕಿ ಎಂ.ಡಿ. ಇಂದ್ರಮ್ಮ ಭೀಮರಾಜ್ಗೌಡ, ನಾಡಕಛೇರಿ ಉಪತಹಸಿಲ್ದಾರ್ ಗೌತಮ್, ಇನ್ನಿತರರು ಹಾಜರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





