ಹೊಸನಗರ ; ಗುರುವಾರ ಮಧ್ಯಾಹ್ನ ಸುಮಾರು 12 ಗಂಟೆಯ ಸಮಯದಲ್ಲಿ ಹೊಸನಗರದಿಂದ ಬಾಣಿಗಕ್ಕೆ ಬೈಕಿನಲ್ಲಿ ಗಿರಿಜಾಂಬಾ ಬಸ್ ಮಾಲೀಕ (ಎಸ್.ಡಿ.ಪಿ) ಕೆ.ವಿ. ರವಿ ಹಾಗೂ ಅವರ ಪತ್ನಿ ಅಂಗನವಾಡಿ ಕಾರ್ಯಕರ್ತೆ ಗೀತಾ ರವಿ ಪ್ರಯಾಣಿಸುತ್ತಿದ್ದಾಗ ಬ್ರಹ್ಮೇಶ್ವರ ಬಳಿ ಕಲ್ಲುಕೋರೆ ಕಡೆಯಿಂದ ಬಂದ ಅಪರಿಚಿತ ಬೈಕ್ ಗುದ್ದಿ ಗಂಭೀರ ಗಾಯವಾದ ಘಟನೆ ನಡೆದಿದೆ.
ಗಂಭೀರ ಗಾಯವಾದ ಬಸ್ ಮಾಲೀಕ ರವಿ, ಸ್ಥಳೀಯರ ಸಹಕಾರದಿಂದ ಹೊಸನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು ತಲೆ, ಕೈ-ಕಾಲು ಹಾಗೂ ಹೊಟ್ಟೆಯ ಕಿಬ್ಬೆಲುಬಿಗೆ ಗಾಯವಾಗಿದೆ.
ಬೈಕ್ ಸವಾರ ನಾಪತ್ತೆ !
ಬ್ರಹ್ಮೇಶ್ವರ ಕಲ್ಲುಕೋರೆಯ ಬಳಿ ಬೈಕ್ ಡಿಕ್ಕಿಯಾಗಿ ರವಿ ಹಾಗೂ ಗೀತಾ ಕೆಳಗೆ ಬಿದ್ದಿದ್ದರೂ ಅವರನ್ನು ಎತ್ತುವ ಕೆಲಸಕ್ಕೆ ಮುಂದಾಗದೇ ಬೈಕ್ ಸವಾರ ಬೈಕ್ ಸಹಿತ ಪರಾರಿಯಾಗಿದ್ದಾನೆ. ಹೊಸನಗರದ ಪೊಲೀಸ್ ಠಾಣೆಯಲ್ಲಿ ಹಿಟ್ ಅಂಡ್ ರನ್ ಪ್ರಕರಣ ದಾಖಲಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





