Hosanagara | ಕಾಗೋಡು ತಿಮ್ಮಪ್ಪನವರ ಕನಸಿನ ಕೂಸಾಗಿದ್ದ ಪಟ್ಟಣದಲ್ಲಿ 100 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆ (Hospital)ಯನ್ನು ಅಂದಾಜು ಸುಮಾರು 100 ಕೋಟಿ ರೂ. ನಷ್ಟು ವೆಚ್ಚದಲ್ಲಿ ಕಟ್ಟಲಾಗಿತ್ತು. ಒಳ ಹಾಗೂ ಹೊರಗೆ ಹೋಗಿ ಸಾಕಷ್ಟು ಹಣ ವ್ಯಯ ಮಾಡುವುದು ಬೇಡ ಎಲ್ಲವೂ ಹೊಸನಗರ ಸರ್ಕಾರಿ ಆಸ್ಪತ್ರೆಯಲ್ಲಿಯೇ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ಈ ಸಾರ್ವಜನಿಕ ಆಸ್ವತ್ರೆಯ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಆದರೆ ಕಾಗೋಡು ತಿಮ್ಮಪ್ಪ (Kagodu Thimmappa) ನವರ ಕನಸಿಗೆ ತಣ್ಣೀರೆರಚಿದ ಈ ಆಸ್ಪತ್ರೆ ಸ್ಥಿತಿ-ಗತಿಯನ್ನು ನೋಡಿದರೇ ಸ್ವತಃ ಕಾಗೋಡು ತಿಮ್ಮಪ್ಪನವರೇ ದುಃಖಿಸುವ ಹಾಗಾಗಿದೆ.
ಊಟವಿಲ್ಲದೆ ರೋಗಿಗಳ ಪರದಾಟ !
ರಾಜ್ಯದ ಎಲ್ಲ ತಾಲ್ಲೂಕು ಸಾರ್ವಜನಿಕ ತಾಲ್ಲೂಕು ಆಸ್ಪತ್ರೆಗಳಲ್ಲಿ ಒಳ ರೋಗಿಗಳಿಗಾಗಿ ಊಟದ ವ್ಯವಸ್ಥೆ ಮಾಡಲಾಗಿದೆ. ಆದರೆ ಹೊಸನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಈವರೆಗೂ ಊಟ ನೀಡದೇ ರೋಗಿಗಳು ಹೋಟೆಲ್‌ಗಳಿಗೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ.
ರಾತ್ರಿ ವೇಳೆಯಲ್ಲಿ ಹೊಸನಗರದಲ್ಲಿ 9 ಗಂಟೆಯ ನಂತರ ಎಲ್ಲಾ ಹೋಟೆಲ್‌ಗಳು ಬಾಗಿಲು ಹಾಕಿರುತ್ತದೆ. ಇದರಿಂದ ಒಳ ರೋಗಿಗಳು ಊಟಕ್ಕಾಗಿ ಪರದಾಟ ನಡೆಸುತ್ತಿದ್ದಾರೆ. ಆಸ್ವತ್ರೆಯಲ್ಲಿ ಊಟದ ವ್ಯವಸ್ಥೆ ಯಾಗಾಗ ಮಾಡುತ್ತೀರಿ ? ಎಂದು ರೋಗಿಗಳು ತಾಲ್ಲೂಕು ವೈದ್ಯಾಧಿಕಾರಿಗಳನ್ನು ಕೇಳುತ್ತಿದ್ದಾರೆ.
ಡಿ ದರ್ಜೆ ನೌಕರರಿಗೆ ಕೊಠಡಿ ನೀಡಿ :
ಹೊಸನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು 24 ಜನರು ಡಿ ದರ್ಜೆ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದರಲ್ಲಿ ಸುಮಾರು 15 ಜನರು ಮಹಿಳಾ ನೌಕರರಿದ್ದಾರೆ. 100 ಹಾಸಿಗೆಗಳ ಆಸ್ಪತ್ರೆಗಳಾಗಿದ್ದರೂ ಆಸ್ಪತ್ರೆ ಮಹಿಳಾ ಸಿಬ್ಬಂದಿಗಳಿಗೆ ಬಟ್ಟೆ ಬದಲಾಯಿಸಿಕೊಳ್ಳಲು ಕೊಠಡಿಯಿಲ್ಲದೆ ಪರದಾಟ ನಡೆಸುತ್ತಿದ್ದಾರೆ. ಅವರಿವರ ಡಾಕ್ಟರ್ ಕೊಠಡಿಯಲ್ಲಿ ಬಟ್ಟೆ ಬದಲಾಯಿಸಿಕೊಳ್ಳುವ ವ್ಯವಸ್ಥೆ ನಿರ್ಮಾಣವಾಗಿದೆ. ತಕ್ಷಣ ಡಿ ದರ್ಜೆ ನೌಕರರಿಗೆ ಬಟ್ಟೆ ಬದಲಾಯಿಸಿಕೊಳ್ಳುವ ಸಲುವಾಗಿ ಒಂದು ಕೊಠಡಿಯನ್ನು ತಾಲ್ಲೂಕು ವೈದ್ಯಾಧಿಕಾರಿಗಳು ಮಾಡಬೇಕಾಗಿದೆ.
ಆಸ್ಪತ್ರೆಯಲ್ಲಿ ಹತ್ತರೂ ಸಮಸ್ಯೆಗಳಿದ್ದರೂ ಇದರ ಬಗ್ಗೆ ಯಾರು ತಲೆ ಕೆಡಿಸಿಕೊಳುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದು ಹೊರ ತಾಲ್ಲೂಕು, ಹೊರ ಜಿಲ್ಲೆಯಿಂದ ಬರುವ ಕೆಲವು ಡಾಕ್ಟರ್‌ಗಳು ವಾರಕ್ಕೊಮ್ಮೆ ಕೆಲವರು ಮೂರು ದಿನಕ್ಕೊಮ್ಮೆ ಬರುತ್ತಿದ್ದಾರೆ.
ಆಸ್ಪತ್ರೆಯ ರಕ್ಷಾ ಕವಚ ಎಲ್ಲಿ ?
ಹೊಸನಗರದಲ್ಲಿ ನೂತನ ಶಾಸಕರಾದ ಬೇಳೂರು ಗೋಪಾಲಕೃಷ್ಣ ಶಾಸಕರಾದ ಮೇಲೆ ಆಸ್ಪತ್ರೆಯ ರಕ್ಷಾ ಕವಚ ಸಮಿತಿ ರಚಿಸಲಾಗಿತ್ತು. ಆದರೆ ರಕ್ಷಾ ಕವಚ ಸಮಿತಿಯ ಸದಸ್ಯರಿಗೆ ಆಸ್ಪತ್ರೆಯಲ್ಲಿ ನಡೆಯುವ ಸಮಸ್ಯೆಗಳು ಯಾವುದು ಅವರಿಗೆ ಗೊತ್ತಿಲ್ಲದಂತೆ ಕಾಣುತ್ತಿದೆ. ರಕ್ಷಾ ಕವಚ ಸಮಿತಿಯ ಸದಸ್ಯರೇ ಇನ್ನಾದರೂ ಎಚ್ಚರಗೊಳ್ಳಿ ಎಂದು ಹೊಸನಗರದ ಜನರು ಕೇಳಿಕೊಳ್ಳುತ್ತಿದ್ದಾರೆ.
Read More:
Dengue | ಡೆಂಗ್ಯೂಗೆ ಆರೋಗ್ಯ ಇಲಾಖೆ ಸಿಬ್ಬಂದಿ ಬಲಿ !
Karnataka Rain | ಇನ್ನೂ ಮೂರು ದಿನ ಮಳೆ ಮುಂದುವರಿಕೆ, ಆರೆಂಜ್, ಯೆಲ್ಲೋ ಅಲರ್ಟ್ ಘೋಷಣೆ