ರಿಪ್ಪನ್‌ಪೇಟೆ ; ಮಳೆಗಾಲಕ್ಕೂ ಮುನ್ನವೇ ಕಾಮಗಾರಿ ಪೂರ್ಣಕ್ಕೆ, ಭರದಿಂದ ಸಾಗಿದ ರಸ್ತೆ ವಿಸ್ತರಣೆ ಕಾಮಗಾರಿ

Written by Mahesha Hindlemane

Published on:

ರಿಪ್ಪನ್‌ಪೇಟೆ : ನಾಲ್ಕು ತಾಲ್ಲೂಕು, ಜಿಲ್ಲಾ ಕೇಂದ್ರಗಳನ್ನು ಸಂಪರ್ಕಿಸುವ ಹೃದಯ ಭಾಗವಾಗಿರುವ ರಿಪ್ಪನ್‌ಪೇಟೆಯ ವಿನಾಯಕ ವೃತ್ತದಿಂದ ತಲಾ ನಾಲ್ಕು ಸಂಪರ್ಕ ರಸ್ತೆಯ ಒಂದೊಂದು ಕಿ.ಮೀ. ರಸ್ತೆ ಅಗಲಿಕರಣ, ಬಾಕ್ಸ್ ಚರಂಡಿ, ಪಾದಚಾರಿಗಳಿಗೆ ಓಡಾಡಲು ರಸ್ತೆಗೆ ಇಂಟರ್ ಲಾಕ್ ಮತ್ತು ರಸ್ತೆಗೆ ವಿದ್ಯುತ್ ದೀಪ ಅಳವಡಿಕೆ ಹೀಗೆ ವಿನಾಯಕ ವೃತ್ತವನ್ನು ಸಿಂಗಾಪುರ ಮಾದರಿಯಲ್ಲಿ ಹೈಟೆಕ್ ವೃತ್ತವನ್ನಾಗಿ ಮಾಡುವ ಮಹಾದಾಸೆಯಿಂದಾಗಿ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ವಿಶೇಷ ಆಸಕ್ತಿ ವಹಿಸುವುದರೊಂದಿಗೆ ಸರ್ಕಾರದಿಂದ ಅನುದಾನವನ್ನು ಬಿಡುಗಡೆ ಮಾಡಿಸಿ ಮೇ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶದಿಂದ ಕಾಮಗಾರಿ ಭರದಿಂದ ಸಾಗಿದೆ ಎಂದು ಕಾಂಗ್ರೆಸ್ ಮುಖಂಡ ಹಾಗು ಗ್ರಾಮ ಪಂಚಾಯಿತ್ ನಿಕಟಪೂರ್ವ ಸದಸ್ಯ ಡಿ.ಈ.ಮಧುಸೂದನ್ ಹಾಗೂ ಎಪಿಎಂಸಿ.ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ ಹಾರೋಹಿತ್ತಲು ತಿಳಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಮುಂಗಾರು ಮಳೆಯೊಂದಿಗೆ ಜೂನ್ 10 ರಿಂದ ಆರಂಭವಾಗುವ ಮಳೆಗಾಲದ ಕಾರಣ ಇದೇ ಮೇ 31 ರೊಳಗೆ ರಸ್ತೆ ವಿಸ್ತರಣೆ ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಗುತ್ತಿಗೆದಾರನಿಗೆ ಮತ್ತು ಲೋಕೋಪಯೋಗಿ ಇಲಾಖೆಯವರಿಗೆ ಖಡಕ್ ಸೂಚನೆ ನೀಡಿದ್ದು ಕಾಮಗಾರಿ ಕಳೆದ ಹದಿನೈದು ದಿನಗಳಿಂದ ಭರದಿಂದ ಸಾಗಿದೆ. ಶಿವಮೊಗ್ಗ-ಹೊಸನಗರ ಸಂಪರ್ಕದ ರಸ್ತೆ ವಿಸ್ತರಣೆ ಕಾಮಗಾರಿ ಶಿವಮೊಗ್ಗ-ಹೊಸನಗರ ರಸ್ತೆಯ ಒಳಚರಂಡಿ ಹಾಗೂ ಮರಗಳ ತೆರವು ಕಾರ್ಯಾಚರಣೆ ಭರದಿಂದ ಸಾಗಿದ್ದು ಹಳೆಯ ರಸ್ತೆಯನ್ನು ಕಿತ್ತು ವಿಸ್ತರಣೆ ಮಾಡಲಾದ ರಸ್ತೆಗೆ ಜಲ್ಲಿ ಬಿಚಾವಣೆಯ ಕಾಮಗಾರಿ ಸಹ ಪ್ರಗತಿಯಲ್ಲಿ ಸಾಗಿದೆ. ಇನ್ನೂ ಡಾಂಬರೀಕರಣ ಕಾಮಗಾರಿಗೆ ಮಳೆ ಎಲ್ಲಿ ಅಡ್ಡಿಯಾಗುವುದೋ ಎಂಬ ಭಯದಲ್ಲಿ ಗುತ್ತಿಗೆದಾರರು ಕಾಮಗಾರಿಗೆ ಚುರುಕು ಮುಟ್ಟಿಸಿದ್ದಾರೆ. ಒಟ್ಟಾರೆಯಾಗಿ ಮಳೆಗಾಲಕ್ಕೂ ಮುನ್ನವೇ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಹಗಲು-ರಾತ್ರಿ ಎಲ್ಲದೆ ಗುತ್ತಿಗೆದಾರ ಕಾಮಗಾರಿಯನ್ನು ವೇಗದಿಂದ ನಿರ್ವಹಿಸುತ್ತಿದ್ದಾರೆಂದು ಕಾಂಗ್ರೆಸ್ ಮುಖಂಡ ಹಾಗು ಗ್ರಾಮ ಪಂಚಾಯಿತ್ ನಿಕಟಪೂರ್ವ ಸದಸ್ಯ ಡಿ.ಈ.ಮಧುಸೂದನ್, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ ಹಾರೋಹಿತ್ತಲು ತಿಳಿಸಿದರು.

ಈಗಾಗಲೇ ಸಾಗರ-ತೀರ್ಥಹಳ್ಳಿ ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಳಿಸಲಾಗಿದ್ದು ವಿನಾಯಕ ವೃತ್ತದ ಶಿವಮೊಗ್ಗ – ಹೊಸನಗರ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ವಿಸ್ತರಣೆ ಕಾರ್ಯ ಪೂರ್ಣಗೊಳ್ಳಬೇಕಾಗಿದೆ. ಅದರೊಂದಿಗೆ ವಿನಾಯಕ ವೃತ್ತದಲ್ಲಿ ಹೈಟೆಕ್ ಸೆಲ್ಟರ್ (ಪ್ರಯಾಣಿಕರ ತಂಗುದಾಣ) ಮತ್ತು ವಿದ್ಯುತ್ ದೀಪ ಅಳವಡಿಕೆಗೆ ಡಿವೈಡರ್ ಕಾಮಗಾರಿ ಭರದಿಂದ ಸಾಗಿದೆ. ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟ ಇದೆ. ನಯ ಪೈಸೆ ಅನುದಾನ ಬಿಡುಗಡೆಯಾಗಿಲ್ಲ ಎಂದು ವಿರೋಧ ಪಕ್ಷದವರು ಬಹಿರಂಗವಾಗಿ ಶಾಸಕರ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ರಿಪ್ಪನ್‌ಪೇಟೆಯಲ್ಲಿ ಭರದಿಂದ ಸಾಗಿರುವ ರಸ್ತೆ ವಿಸ್ತರಣೆ ಕಾಮಗಾರಿ ಕಣ್ಣಿಗೆ ಕಾಣಿಸುತ್ತಿಲ್ಲವೆ? ಎಂದು ಈ ಸಂದರ್ಭದಲ್ಲಿ ಪ್ರಶ್ನಿಸಿದರು.

Leave a Comment