ಕುಂದು-ಕೊರತೆ ; ಆಧಾರ್ ಅಪ್ಡೇಟ್ ನಂತಹ ಮೂಲಭೂತ ಸೌಕರ್ಯ ಇಲ್ಲದ ಊರು ಹೊಸನಗರ !

Written by Mahesha Hindlemane

Published on:

ಹೊಸನಗರ : ಕಳೆದೊಂದು ವರ್ಷದಿಂದ ಹೊಸನಗರ ಅಂಚೆ ಕಚೇರಿಯಲ್ಲಿರುವ ಆಧಾರ್ ಕೇಂದ್ರದಲ್ಲಿ ಒಬ್ಬ ಉದ್ಯೋಗಿ ಇಲ್ಲದೆ, ಒಂದು ಅರ್ಜಿ ಫಾರಂ ಕೊಡುವವರು ಗತಿ ಇಲ್ಲದಾಗಿದೆ. ಪೋಸ್ಟ್ ಆಫೀಸ್ ನೌಕರರೊಬ್ಬರು, ಬೆಳಿಗ್ಗೆ 9.30ಕ್ಕೆ ಬನ್ನಿ, ಮೊದಲ 10 ಜನರಿಗೆ ಅರ್ಜಿ ಫಾರಂ ಕೊಡುತ್ತೇವೆ ಅನ್ನುತ್ತಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಹೊಸನಗರ ತಾಲ್ಲೂಕಿನ ದೂರದ ಅರಸಾಳು, ಪುರಪ್ಪೆಮನೆ, ಹುಂಚ, ಮಾಸ್ತಿಕಟ್ಟೆ, ಯಡೂರು, ನಿಟ್ಟೂರು, ನಗರದಂತಹ ಸ್ಥಳಗಳಿಂದ ಬರುವವರು ದಿನಾ ಬಂದು ಲಕ್ ಪ್ರಯೋಗಿಸುವುದಕ್ಕೆ ಸಾಧ್ಯವೇ?. ಪೋಸ್ಟ್ ಆಫೀಸ್ ನೌಕರರು ಅವರ ಕೆಲಸದ ಮಧ್ಯೆ ಬಿಡುವು ಮಾಡಿಕೊಳ್ಳಲಾಗದೆ ಹೀಗೆ ನಿಭಾಯಿಸುತ್ತಿದ್ದಾರೆ.

ಹೊಸನಗರ ತಾಲ್ಲೂಕು ವಿಧಾನಸಭಾ ಕ್ಷೇತ್ರ ಆಗಬೇಕೆಂದು ಹೋರಾಟ ನಡೆಸುವವರಿಗೆ, ಆಧಾರ್ ಅಪ್ಡೇಟ್ ನಂತಹ ಮೂಲಭೂತ ಸೌಕರ್ಯ ಇಲ್ಲದ ಊರು ವಿಧಾನಸಭಾ ಕ್ಷೇತ್ರ ಮರು ಸ್ಥಾಪನೆಯಾಗುವ ಕನಸು ಕಾಣಬಹುದೇ ಎಂದು ಅನ್ನಿಸುತ್ತಿಲ್ಲವೇ?.

✍️ಪ್ರತಿಭಾ, ಸೊನಲೆ ನಿವಾಸಿ

Leave a Comment