ಹೊಸನಗರ : ಸ್ಥಳೀಯ ರೈತರು, ವರ್ತಕರು, ಹಾಗೂ ವಿವಿಧ ಸಹಕಾರ ಸಂಘಗಳ ಸಹಯೋಗದಲ್ಲಿ ಹೊಸನಗರದಲ್ಲಿ ಜುಲೈ 3, 4 ಮತ್ತು 5 ರಂದು ಬೃಹತ್ ಹಲಸು ಮತ್ತು ಆಹಾರ ಮೇಳವನ್ನು ಕಳೂರು ಶ್ರೀರಾಮೇಶ್ವರ ಪಿ.ಎ.ಸಿ.ಎಸ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಆಯೋಜಕರಾದ ಪ್ರಭಾಕರ್ ಮಂದಾರ್ತಿ ತಿಳಿಸಿದ್ದಾರೆ.
ಇಲ್ಲಿನ ಕಳೂರು ಶ್ರೀರಾಮೇಶ್ವರ ಪಿ.ಎ.ಸಿ.ಎಸ್ ಸಭಾಂಗಣದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜರತ್ನ ಇವೆಂಟ್ಸ್ ಮತ್ತು ಜನ ಸ್ನೇಹಿ ಇವೆಂಟ್ಸ್ ಜೊತೆಗೆ ಹೊಸನಗರದ ಪ್ರತಿಷ್ಠಿತ ಸಂಸ್ಥೆಗಳಾದ ಕಳೂರು ರಾಮೇಶ್ವರ ಪಿ.ಎ.ಸಿ.ಎಸ್, ಪಿಎಲ್‌ಡಿ ಬ್ಯಾಂಕ್, ಮಾಮ್‌ಕೋಸ್ ಹೊಸನಗರ ಶಾಖೆ, ಆಪ್‌ಕೋಸ್, ತುಂಗಾ ಅಡಿಕೆ ಸೌಹಾರ್ಧ, ಸುಮೇಧಾ ವಿವಿಧ್ಧೋದೇಶ ಸೌಹಾರ್ದ, ಕೊಡಚಾದ್ರಿ ಅಡಿಕೆ ಸೌಹಾರ್ದ ಸಹಕಾರಿ ಸಂಘ, ಕ್ಯಾಂಪ್ಕೋ, ಶಾರದಾ ವಿವಿಧ್ಧೋದೇಶ, ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಫಾದರ್ ಪ್ರೊಡ್ಯುಸರ್ ಕಂಪನಿ, ವರ್ತಕರ ಸಂಘ, ಜೆ.ಸಿಐ ಕೊಡಚಾದ್ರಿ, ಜೆ.ಸಿಐ ಡೈಮಂಡ್ ಇವರ ಸಂಯುಕ್ತಾಶ್ರಯದಲ್ಲಿ ಅದ್ದೂರಿ ಆಹಾರ ಮೇಳವನ್ನು ಆಯೋಜಿಸಲಾಗಿದೆ ಎಂದರು.

ಈ ಮೇಳವು ಸಾರ್ವಜನಿಕರಿಗೆ ಸ್ಥಳೀಯ ಉತ್ಪನ್ನಗಳನ್ನು ಮತ್ತು ವಿಶೇಷ ತಿನಿಸುಗಳನ್ನು ಪರಿಚಯಿಸುವ ಗುರಿಯನ್ನು ರಾಜರತ್ನ ಇವೆಂಟ್ಸ್ ಮತ್ತು ಜನ ಸ್ನೇಹಿ ಇವೆಂಟ್ಸ್ಗಳು ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಈಗಾಗಲೇ ಆಹಾರ ಮೇಳ ನಡೆಸಿ ಯಶಸ್ವಿಯಾಗಿವೆ. ಈ ಅಹಾರ ಮೇಳ ಪ್ರತಿದಿನ ಬೆಳಿಗ್ಗೆ 9:30 ರಿಂದ ರಾತ್ರಿ 9:30 ರವರೆಗೆ ನಡೆಯಲಿದೆ.
ಮೇಳದ ಪ್ರಮುಖ ಆಕರ್ಷಣೆಗಳು :
ಹಲಸಿನಪುಡಿ, ಹಲಸಿನ ಕಡಬು, ಹಲಸಿನ ಕಟ್ಲೆಟ್, ಕಬಾಬ್, ಚಿಲ್ಲಿ, ಬಿರಿಯಾನಿ, ಮಂಜೂರಿ, ಪತ್ರೋಡೆ ಪಾಯಸ, ಜಿಲಾಬಿ, ಹೋಳಿಗೆ, ಮುಳ್ಕ, ಶಿರಾ, ಕಟ್ಲೇಟ್, ಐಸ್‌ಕ್ರೀಮ್ ತಿನಿಸುಗಳನ್ನು ಸವಿಯಬಹುದು ಎಂದರು.
ಕೃಷಿ ಮತ್ತು ಗೃಹಪಯೋಗ ಉತ್ಪನ್ನಗಳು:
ಈ ಮೇಳದಲ್ಲಿ ಖಾದಿ ಬಟ್ಟೆಗಳು ಅಲಂಕಾರಿಕ ವಸ್ತುಗಳು ಗೃಹಬಳಕೆಯ ವಸ್ತುಗಳು, ಗೋ ಉತ್ಪನ್ನಗಳು ವಿವಿಧ ಬಗೆಯ ಉಪ್ಪಿನಕಾಯಿಗಳು, ಸುಂದರ ಶಿಲಮೂರ್ತಿಗಳು, ಸೀರೆಗಳು ಹಪ್ಪಳ ಸಂಡಿಗೆಗಳು, ಮಸಾಲ ಉತ್ಪನ್ನಗಳು, ಅಡಿಕೆ ವಸ್ತುಗಳು, ಆದಿವಾಸಿ ಹೇರ್‌ಆಯಿಲ್, ಒಂದು ಗ್ರಾಂ ಚಿನ್ನ ಮಾರಾಟಕಿರುತ್ತದೆ ಎಂದರು.
ಗಿಡ ಮತ್ತು ಬೀಜಗಳ ಮಾರಾಟ :
ಮೇಳದಲ್ಲಿ ಹಲಸು, ಮಾವು, ಹೂವಿನ ಗಿಡಗಳು ಮತ್ತು ತರಕಾರಿ ಬೀಜಗಳು ದೊರೆಯಲಿದೆ ಎಂದರು.
ವಿಶೇಷ ಸೇವೆ:
ಹಳೆಯ ಜರಿ ರೇಷ್ಮೆ ಸೀರೆಗಳನ್ನು ನೀಡುವವರಿಗೆ ತಕ್ಷಣ ಹಣ ನೀಡುವ ಸೌಲಭ್ಯ ಆಯೋಜಿಸಲಾಗಿದ್ದು ಸಾರ್ವಜನಿಕರಿಗೆ ಮೇಳವು ಪ್ರವೇಶವು ಸಂಪೂರ್ಣವಾಗಿ ಉಚಿತವಾಗಿರುತ್ತದೆ ಎಂದರು.

ಹೊಸನಗರ ಪ್ರತಿಷ್ಠಿ ಸಹಕಾರಿ ಸಂಸ್ಥೆಗಳಲ್ಲಿ ಒಂದಾಗಿರುವ ಕಳೂರು ರಾಮೇಶ್ವರ ಸೊಸೈಟಿ ಅಧ್ಯಕ್ಷ ದುಮ್ಮ ವಿನಯ್‌ಕುಮಾರ್ ಮಾತನಾಡಿ, ಕೃಷಿ ಮತ್ತು ಸಣ್ಣ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಹಲಸು ಮತ್ತು ಆಹಾರ ಮೇಳ ಅತ್ಯಂತ ಸ್ವಾಗತಾರ್ಹ. ಹಲಸಿನ ಹಣ್ಣಿನ ಮೌಲ್ಯವರ್ಧನೆ ಮತ್ತು ಸ್ಥಳೀಯ ಕೌಶಲ್ಯವನ್ನು ಉತ್ತೇಜಿಸಲು ಇಂಥಹ ವೇದಿಕೆಗಳು ಅವಶ್ಯಕ. ಗ್ರಾಹಕರನ್ನು ಹಾಗೂ ರೈತರನ್ನು ನೇರವಾಗಿ ಬೆಳೆಸುವ ಈ ಪ್ರಯತ್ನ ಸ್ಥಳೀಯ ಆರ್ಥಿಕತೆಗೆ ಚೈತನ್ಯ ತುಂಬುವುದಲ್ಲದೆ ನಮ್ಮ ಸಾಂಪ್ರದಾಯಕ ಆಹಾರ ಪದ್ಧತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಹಕಾರಿಯಾಗುತ್ತದೆ. ಹೊಸನಗರದ ನಾಗರೀಕರು ಈ ಆಹಾರ ಮೇಳದಲ್ಲಿ ಭಾಗವಹಿಸಿ ಸ್ವದೇಶಿ ಉತ್ಪನ್ನಗಳಿಗೆ ಬೆಂಬಲ ನೀಡಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿಕೊಡಬೇಕೆಂದು ಕೇಳಿಕೊಂಡರು.
ಪತ್ರಿಕಾಘೋಷ್ಠಿಯಲ್ಲಿ ಶಾರದ ಬ್ಯಾಂಕ್ ಜಿಲ್ಲಾ ಉಪಾಧ್ಯಕ್ಷ ರಮಾಕಾಂತ್, ಸುಮೇಧಾ ಸಹಕಾರಿ ವಿವಿದ್ಧೋದೇಶ ಬ್ಯಾಂಕ್ ವ್ಯವಸ್ಥಾಪಕರಾದ ಪ್ರಕಾಶ್, ವಾಟಗೋಡ್ ಸುರೇಶ್, ವರ್ತಕರ ಸಂಘದ ಅಧ್ಯಕ್ಷ ಪೂರ್ಣೇಶ್, ಜೆ.ಸಿಐ ಡೈಮಂಡ್ ಅಧ್ಯಕ್ಷ ಸಂದೀಪ್, ಜೆ.ಸಿಐ ಕೊಡಚಾದ್ರಿ ಅಧ್ಯಕ್ಷ ಸಂತೋಷ್, ವಿನಾಯಕ ಚಕ್ಕಾರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





