ಜು. 22 ರಂದು ಹೊಸನಗರ ಶಾಖೆಯಲ್ಲಿ ಮಾಮ್‌ಕೋಸ್ ಸದಸ್ಯರ ಸಮಾಲೋಚನಾ ಸಭೆ ; ಶ್ರೀಕಾಂತ್ ಬರುವೆ

Written by Mahesha Hindlemane

Updated on:

ಹೊಸನಗರ ; ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ಅಡಿಕೆ ಸಂಸ್ಥೆಗಳಲ್ಲಿ ಒಂದಾಗಿರುವ ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿಯಮಿತ ಶಿವಮೊಗ್ಗ ಇವರು ತನ್ನ ವಿವಿಧ ಶಾಖಾ ಸದಸ್ಯರ ಸಮಾಲೋಚನಾ ಸಭೆಯನ್ನು ಬೇರೆ-ಬೇರೆ ತಾಲ್ಲೂಕು ಶಾಖೆಗಳಲ್ಲಿ ನಡೆಸುತ್ತಿದ್ದು ಅದರಂತೆ ಹೊಸನಗರದಲ್ಲಿ ಜುಲೈ 22ರ ಬುಧವಾರ ಸರ್ವ ಸದಸ್ಯರ ಸಮಾಲೋಚನಾ ಸಭೆಯನ್ನು ಬಸ್ ನಿಲ್ದಾಣದ ಹಿಂಭಾಗವಿರುವ ಚೌಡಮ್ಮ ರಸ್ತೆಯ ಸಂಘದ ಸ್ವಂತ ಕಟ್ಟಡದ ಆವರಣದಲ್ಲಿ ಮಧ್ಯಾಹ್ನ 3.30ಕ್ಕೆ ಏರ್ಪಡಿಸಲಾಗಿದೆ ನಿರ್ದೇಶಕ ಬರುವೆ ಶ್ರೀಕಾಂತ್ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಈ ಸಮಾಲೋಚನಾ ಸಭೆಯ ಅಧ್ಯಕ್ಷತೆಯನ್ನು ಮಾಮ್‌ಕೋಸ್ ಸಂಸ್ಥೆಯ ಉಪಾಧ್ಯಕ್ಷರಾದ ಎಚ್.ಎಸ್. ಮಹೇಶ್ ಹುಲ್ಕುಳಿ ವಹಿಸಲಿದ್ದು ಸಂಘದ ನಿರ್ದೇಶಕ ಕೆ.ವಿ. ಕೃಷ್ಣಮೂರ್ತಿ ಸಂಘದ ಎಲ್ಲ ನಿರ್ದೇಶಕರುಗಳು ಈ ಸಭೆಗೆ ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Leave a Comment