ಸೊಳ್ಳೆಗಳ ಉತ್ಪಾದನಾ ಕೇಂದ್ರವಾದ ರಿಪ್ಪನ್‌ಪೇಟೆ !

Written by Mahesha Hindlemane

Updated on:

RIPPONPETE | ಇಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾಮ ಪಂಚಾಯತಿ, ನಾಡಕಛೇರಿ, ಕೆನರಾ ಬ್ಯಾಂಕ್, ಸರ್ಕಾರಿ ಹಿರಿಯ ಮಾದರಿ ಪಾಠಶಾಲೆ, ಪೊಲೀಸ್ ಠಾಣೆಯ ಮುಂಭಾಗದಲ್ಲಿ ಚರಂಡಿಯಲ್ಲಿ ಕಲುಷಿತ ನೀರು ಹರಿದು ಹೋಗದೆ ಗಿಡ-ಗಂಟಿಗಳು ಮತ್ತು ವಾಟರ್ ಬಾಟಲ್ ಬಿದ್ದು ಕೊಳಚೆ ನೀರು ನಿಂತಲೇ ನಿಂತು ಸೊಳ್ಳೆಗಳ ಉತ್ಪಾದನಾ ತಾಣವಾಗಿ ಸಾಕಷ್ಟು ಜನರಲ್ಲಿ ಜ್ವರದ ಲಕ್ಷಣ ಕಾಣಿಸಿಕೊಂಡಿದ್ದು ಅಲ್ಲದೆ ಡೆಂಘೀ ಮತ್ತು ಮಲೇರಿಯಾದ ಆತಂಕದಲ್ಲಿ ಸಾರ್ವಜನಿಕರಲ್ಲಿ ಮೂಡಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

Read More:ನಿಮ್ಮ ಆಧಾರ್ ಕಾರ್ಡ್ ನಲ್ಲಿ ಎಷ್ಟು ಸಿಮ್ ರಿಜಿಸ್ಟರ್ ಆಗಿದೆ? ಈ ರೀತಿ ಚೆಕ್ ಮಾಡಿ, ಅಪಾಯದಿಂದ ಪಾರಾಗಿ!

ಮಳೆಗಾಲದ ನೀರು ಸರಾಗವಾಗಿ ಹರಿದು ಹೋಗುವಂತಹ ಚರಂಡಿಗಳಿಲ್ಲ. ಮಣ್ಣು ಮತ್ತು ಕಸ-ಕಡ್ಡಿ, ಗಿಡ-ಗಂಟಿಗಳು ಬೆಳೆದು ಕಲುಷಿತ ನೀರು ಸಂಗ್ರಹಗೊಂಡು ಸೊಳ್ಳೆಗಳ ಉತ್ಪಾದನಾ ಕೇಂದ್ರದಂತಾಗಿದ್ದರೂ ಕೂಡಾ ಇಲ್ಲಿನ ನಾಡಕಛೇರಿಗೆ ಮತ್ತು ಗ್ರಾಮ ಪಂಚಾಯಿತಿಗೆ ಮತ್ತು ಬ್ಯಾಂಕ್‌ಗೆ ನಿತ್ಯ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಬಂದು ಹೋಗುತ್ತಿದ್ದು ಇದರಿಂದಾಗಿ ಇಲ್ಲಿನ ಕಲುಷಿತ ನೀರಿನಲ್ಲಿ ಉತ್ಪಾದನೆಯಾಗಿರುವ ಸೊಳ್ಳೆಗಳ ಕಾಟ ಕಡಿತದಿಂದಾಗಿ ಜನರಲ್ಲಿ ಜ್ವರ ಕಾಣಿಸಿಕೊಂಡು ಡೆಂಘೀ ಮತ್ತು ಮಲೇರಿಯಾ ರೋಗಕ್ಕೆ ಒಳಗಾಗಿರುವ ಬಗ್ಗೆ ವರದಿಯಾಗಿದೆ.

ರಿಪ್ಪನ್‌ಪೇಟೆಯ ನಿವಾಸಿಯೊಬ್ಬರಿಗೆ ಡೆಂಘೀ ಜ್ವರ ಕಾಣಿಸಿಕೊಂಡು ಶಿವಮೊಗ್ಗದ ಖಾಸಗಿ ಅಸ್ಪತ್ರೆಯಲ್ಲಿ ಐಸಿಯುನಲ್ಲಿಡಲಾಗಿದ್ದು ಇನ್ನೂ ಅರೆ ಪ್ರಜ್ಞಾವಸ್ಥೆಯಲ್ಲಿದ್ದು ಡೆಂಘೀ ಜ್ವರ ಎಂದು ದೃಢಪಟ್ಟಿರುತ್ತದೆ. ಆದರೆ ಇಲ್ಲಿನ ಸರ್ಕಾರಿ ಆಸ್ಪತ್ರೆಯವರು ಹೇಳುವಂತೆ ನಮ್ಮಲ್ಲಿ ಇಂತಹ ಪ್ರಕರಣಗಳು ಯಾವುದು ಬಂದಿಲ್ಲ ಎಂದು ಅಲ್ಲಗಳೆಯುತ್ತಿದ್ದಾರೆ.

ಬೆಳಗ್ಗೆ ಸಂಜೆಯಾಗುತ್ತಲೇ ಸೊಳ್ಳೆಗಳ ಕಾಟ. ಸೊಳ್ಳೆ ಬತ್ತಿ ಹಚ್ಚದೆ ಮಲಗುವಂತಿಲ್ಲ. ಚರಂಡಿಗಳು ದುರ್ನಾಥ ಬೀರುವಂತಾಗಿ ಗಿಡ ಗಂಟಿಗಳು ಬೆಳೆದು ಚರಂಡಿ ತುಂಬೆಲ್ಲಾ ಖಾಲಿ ವಾಟರ್‌ಬಾಟಲ್ ತುಂಬಿಕೊಂಡಿವೆ. ಇನ್ನೂ ಗ್ರಾಮ ಪಂಚಾಯ್ತಿಗೆ ಸ್ವಚ್ಚ ಗ್ರಾಮ ಯೋಜನೆಯಡಿ ಪ್ರಶಸ್ತಿ ಪುರಸ್ಕಾರಗಳನ್ನು ಪಡೆಯಲಾಗಿರುವ ಈ ಗ್ರಾಮ ಪಂಚಾಯತ್ ಮುಂಭಾಗದಲ್ಲಿಯೇ ಸ್ವಚ್ಚತೆಯಿಲ್ಲದೆ ಇರುವುದು ಮಾತ್ರ ಕಣ್ಣಿದು ಕುರುಡರಂತಾಗಿದ್ದಾರೆಂಬುದಕ್ಕೆ ಸಾಕ್ಷಿಯಾಗಿದೆ.

ನಾಡಕಛೇರಿಯ ಹಿಂಭಾದಲ್ಲಿನ ಶೌಚಾಲಯ ಮತ್ತು ಮುಂಭಾಗದ ಚರಂಡಿ ಸುತ್ತಮುತ್ತ ಗಿಡಗಂಟಿಗಳು ಬೆಳೆದು ಕಛೇರಿಯೇ ಕಾಣದಂತಾಗಿದ್ದರೂ ಕೂಡಾ ಸ್ವಚ್ಚತೆಯೊಂದಿಗೆ ಪರಿಸರ ರಕ್ಷಣೆ ಮಾಡಿ ಎಂದು ಗಂಟೆಗಟ್ಟಲೇ ಭಾಷಣ ಬಿಗಿಯುವ ಜನಪ್ರತಿನಿಧಿಗಳಿಗೆ ಅಧಿಕಾರಿ ವರ್ಗಕ್ಕೆ ಮಾತ್ರ ಅವರ ಕಾಲು ಬುಡದಲ್ಲಿನ ಚರಂಡಿಯಲ್ಲಿ ಹರಿಯದೆ ನಿಂತಿರುವ ಕಲುಷಿತ ನೀರಿನಿಂದ ಝೇಂಕಾರ ಮಾಡುವ ಸೊಳ್ಳೆಗಳ ಶಬ್ದ ಮಾತ್ರ ಕೇಳಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ.

ಇನ್ನಾದರೂ ಸಂಬಂಧಪಟ್ಟ ಸ್ಥಳೀಯಾಡಳಿ ಮತ್ತು ಅಧಿಕಾರಿ ವರ್ಗ ಜಾಗೃತಗೊಳ್ಳುವುದೇ ಕಾದುನೋಡಬೇಕಾಗಿದೆ.

Read More:ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಸಭೆ | ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಜಾರಿ ಮತ್ತು ಯಶಸ್ಸಿಗೆ ಸಹಕರಿಸಿ

Leave a Comment