Hosanagara | ಡೆಂಗ್ಯೂ ಆಮಂತ್ರಿಸುತ್ತಿರುವ ಖಾಲಿ ನಿವೇಶನಗಳ ಗಿಡ-ಗಂಟಿಗಳು, ರೋಗ ನಿಯಂತ್ರಣಕ್ಕೆ ಪ.ಪಂ. ನಿರ್ಲಕ್ಷ್ಯ

Written by Mahesha Hindlemane

Published on:

HOSANAGARA | ಇಲ್ಲಿನ ಪಟ್ಟಣ ಪಂಚಾಯತಿ ವ್ಯಾಪ್ತಿಯ ವಿವಿಧ ವಾರ್ಡ್‌ಗಳ ಹತ್ತಾರು ಖಾಲಿ ವಿವೇಶನಗಳಲ್ಲಿ ಹುಲುಸಾಗಿ ಬೆಳೆದು ನಿಂತಿರುವ ಗಿಡಗಂಟಿಗಳಿಂದ ಮಾರಕ ಡೆಂಗ್ಯೂ ರೋಗ ವ್ಯಾಪಕವಾಗಿ ಹರಡುವ ಭೀತಿಯಲ್ಲಿ ಪಟ್ಟಣದ ನಾಗರೀಕರು ದಿನದೂಡುವ ಸ್ಥಿತಿ ನಿರ್ಮಾಣವಾಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ಖಾಲಿ ನಿವೇಶನಗಳಲ್ಲಿ ಬೆಳೆದು ನಿಂತಿರುವ ಗಿಡಗಂಟಿಗಳು ಮಾರಕ ಡೆಂಗ್ಯೂ ರೋಗ ಹರಡುವ ಸೊಳ್ಳೆಗಳ ಆವಾಸ ಸ್ಥಾನವಾಗಿದೆ. ಕಳೆದು ಒಂದು ತಿಂಗಳಲ್ಲಿ ತಾಲೂಕಿನ ಒಟ್ಟು 45 ಡೆಂಗ್ಯೂ ಪ್ರಕರಣ ಪತ್ತೆಯಾಗಿದ್ದು ಓರ್ವ ಮಹಿಳೆ ಮೃತಪಟ್ಟಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.

ಜು.12ರವರೆಗೆ ಮುಂದುವರೆಯಲಿದೆ ಭಾರಿ ಮಳೆ, ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ

ಪಟ್ಟಣದಲ್ಲಿ ಒಮ್ಮೆಯೂ ಡೆಂಗ್ಯೂ ರೋಗ ನಿಯಂತ್ರಣಕ್ಕೆ ಫಾಗಿಂಗ್ ಮೂಲಕ ಔಷಧಿ ಸಿಂಪಡಣೆ ಕಾರ್ಯ ನಡೆಯದೇ ಇದ್ದರೂ ಇತ್ತೀಚಿಗೆ ಶಾಸಕದ್ವಯರಾದ ಬೇಳೂರು ಗೋಪಾಲಕೃಷ್ಣ ಹಾಗೂ ಆರಗ ಜ್ಞಾನೇಂದ್ರ ಅವರ ಸಮ್ಮುಖದಲ್ಲೇ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮ್ಯಾನ್ಮ್ಯಯಲ್ ಫಾಗಿಂಗ್ ಮಾಡಿರುವುದಾಗಿ ಸಭೆಗೆ ಹಾರಿಕೆ ಉತ್ತರ ನೀಡಿರುವುದು ನಾಗರೀಕರ ಅಸಮಾಧಾನಕ್ಕೆ ಕಾರಣವಾಗಿದೆ. ಕೇವಲ ಸುಳ್ಳು ಮಾಹಿತಿ ನೀಡುವ ಮೂಲಕ ಜನಪತ್ರಿನಿಧಿಗಳಿಂದ ಶಹಭಾಷ್‌ಗಿರಿ ಪಡೆಯಲು ಅಧಿಕಾರಿಗಳು ಯಾವ ಮಟ್ಟಕ್ಕೂ ಇಳಿಯತ್ತಾರೆ ಎಂಬುದನ್ನು ಈ ಘಟನೆ ಸಾಕ್ಷೀಕರಿಸಿದೆ. ರಾಜ್ಯವ್ಯಾಪ್ತಿ ದಿನದಿಂದ ದಿನಕ್ಕೆ ಭಾರೀ ಹೆಚ್ಚಳವಾಗುತ್ತಿರುವ ಡೆಂಗ್ಯೂ ರೋಗ ತಡೆಗೆ ರಾಜ್ಯ ಸರ್ಕಾರ ಇನ್ನಿಲ್ಲದಂತೆ ಕಸರತ್ತು ಮಾಡುತ್ತಿದ್ದರೆ, ಸ್ಥಳೀಯ ಆರೋಗ್ಯ ಇಲಾಖೆ ಹಾಗೂ ಪಟ್ಟಣ ಪಂಚಾಯತಿ ಸಿಬ್ಬಂದಿಗಳು ಮಾತ್ರವೇ ರೋಗ ನಿಯಂತ್ರರಣಕ್ಕೆ ಅಗತ್ಯ ಕ್ರಮಕೈಗೊಳ್ಳುತ್ತಿಲ್ಲ ಎಂಬ ದೂರು ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ.

ಪಟ್ಟಣ ಪಂಚಾಯತಿ ವಿವಿಧ ವಾರ್ಡ್‌ಗಳ ಖಾಲಿ ನಿವೇಶನಗಳಲ್ಲಿ ಬೆಳೆದು ನಿಂತಿರುವ ಗಿಡಗಂಟಿಗಳು

ಜಿಲ್ಲಾಡಳಿತ ಕೂಡಲೇ ಪಟ್ಟಣ ಪಂಚಾಯತಿಗೆ ಓರ್ವ ಖಾಯಂ ಮುಖ್ಯಾಧಿಕಾರಿ ನೇಮಕ ಮಾಡುವ ಮೂಲಕ ಸ್ಥಳೀಯ ಆಡಳಿತಕ್ಕೆ ಚುಟುಕು ಮುಟ್ಟಿಸಬೇಕು. ಖಾಲಿ ನಿವೇಶನಗಳ ಸ್ವಚ್ಛತೆಗೆ ನಿವೇಶನದ ಮಾಲೀಕರಿಗೆ, ವಾರಸುದಾರರಿಗೆ ನೋಟಿಸ್ ಜಾರಿಗೊಳಿಸುವ ಮೂಲಕ ಎಚ್ಚರಿಕೆ ನೀಡಬೇಕು ಎಂಬುದು ಪ್ರಜ್ಞಾವಂತರ ಬೇಡಿಕೆಯಾಗಿದೆ.

Leave a Comment