ಗೋಡೌನ್‌ನಿಂದ 720 ಕೆ.ಜಿ ಕಾಳುಮೆಣಸು ಕಳವು ಮಾಡಿದ್ದ ಆರೋಪಿ ಬಂಧನ

Written by Mahesha Hindlemane

Published on:

CHIKKAMAGALURU | ಕಾಫಿ ಗೋಡೌನ್‌ನಿಂದ 720 ಕೆ.ಜಿ ಕಾಳುಮೆಣಸು (Black Pepper) ಕಳವು (Theft) ಮಾಡಿದ್ದ ಆರೋಪಿಯನ್ನು ಪೊಲೀಸರು (Police) ಬಂಧಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಮಲ್ಲಂದೂರು ಠಾಣಾ ವ್ಯಾಪ್ತಿಯ ಮಸಗಲಿ ಗ್ರಾಮದ ದೇವರಾಜ್ ಗೌಡ ಅವರ ಗೋಡೌನ್‌ನಲ್ಲಿ ದಾಸ್ತಾನು ಮಾಡಿದ್ದ ಕಾಳುಮೆಣಸು ಕಳುವಾಗಿರುವ ಬಗ್ಗೆ ದೇವರಾಜ್ ಅವರು ಮಲ್ಲಂದೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು.

Malenadu Rain | ಕಳೆದ 24 ಗಂಟೆಗಳಲ್ಲಿ ಹೊಸನಗರದ ಈ ಪ್ರದೇಶದಲ್ಲಿ ರಾಜ್ಯದಲ್ಲೇ ಅತ್ಯಧಿಕ ವರ್ಷಧಾರೆ, ಮಲೆನಾಡಿನ ಮತ್ತೆಲ್ಲೆಲ್ಲಿ ಎಷ್ಟು ಮಳೆಯಾಗಿದೆ ?

ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಚಿಕ್ಕಮಗಳೂರು ಇಂದಿರಾಗಾಂಧಿ ಬಡಾವಣೆ ನಿವಾಸಿ ಲೋಹಿತ್ ಎಂಬಾತನನ್ನು ಬಂಧಿಸಿ ಒಟ್ಟು 4,26,820 ರೂ. ಮೌಲ್ಯದ 646 ಕೆಜಿ ಕಾಳುಮೆಣಸು ವಶಪಡಿಸಿಕೊಂಡಿದ್ದಾರೆ.

ಆರೋಪಿ ಬಳಿ ಇದ್ದ ಕಾರು ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ. ವೃತ್ತ ನಿರೀಕ್ಷಕ ಸತ್ಯನಾರಾಯಣ, ಪಿಎಸ್‌ಐ ಗುರು ಎ.ಸಜ್ಜನ್, ಸಿಬ್ಬಂದಿ ಭರತ್ ಭೂಷಣ್, ಕುದರಾಳ್ ಕರಿಯಪ್ಪ, ಚಿದಾನಂದ, ನವೀನ್ ಮಂಡೆಗಾರ್, ನಿಂಗರಾಜ್, ದರ್ಶನ್, ಸಾಗರ್, ನವೀನ್, ತೀರ್ಥೇಶ್, ಅಶೋಕ್ ಮತ್ತು ನಟರಾಜ್ ಭಾಗವಹಿಸಿದ್ದರು.

ಕಾರ್ಯಾಚರಣೆಯಲ್ಲಿ ಪಾಲ್ಗೊಂಡವನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಅಭಿನಂದಿಸಿದ್ದಾರೆ.

80 ಕೋಟಿ ರೂ. ವೆಚ್ಚದ ಸುಸಜ್ಜಿತ ವಸತಿ ಗೃಹ ಸಮುಚ್ಚಯ ಲೋಕಾರ್ಪಣೆ ; ಮಧು ಬಂಗಾರಪ್ಪ

Leave a Comment