Humcha | ಜೈನಾಗಮದ ಶಾಸ್ತ್ರದಲ್ಲಿ ಶ್ರೀ ಮಹಾವೀರ ತೀರ್ಥಂಕರರು ಸಮವಸರಣದಲ್ಲಿ ವಿರಾಜಮಾನರಾಗಿದ್ದಾಗ ಅವರು ಸಮಸ್ತರಿಗೂ ‘ಗುರು’ ಆಗಿದ್ದರೆಂಬುದು ಉಲ್ಲೇಖವಿದೆ. ಉತ್ಕೃಷ್ಟ ಮೌಲ್ಯಗಳ ಪರಿಪಾಲನೆಗೆ ಶ್ರೀ ಮಹಾವೀರರ ಉಪದೇಶಗಳು ಗುರುಸ್ಥಾನದಲ್ಲಿ ತಿಳಿಸಿದ ಮುಕ್ತಿ ಪಥದಲ್ಲಿ ಆಚರಿಸಲ್ಪಡುವ ನಿಯಮಗಳಷ್ಟೇ ಅಲ್ಲದೇ ಶಾಂತಿ ನೆಮ್ಮದಿಯ ಆರೋಗ್ಯಪೂರ್ಣ ಜೀವನ ನಿರ್ವಹಣೆಗೆ ನೀಡಿದ ಧರ್ಮಸಂದೇಶವಾಗಿದೆ.
SHIVAMOGGA | ಮಳೆಯಿಂದ ಜಿಲ್ಲೆಯಲ್ಲಿ ಈವರೆಗೆ ಏನೆಲ್ಲ ಹಾನಿ ಸಂಭವಿಸಿದೆ ?
ಆಷಾಢ ಶುದ್ಧ ಪೂರ್ಣಿಮೆಯಂದು ಗುರುಪೂರ್ಣಿಮಾ ಎಂದು ಆಚರಿಸುವುದು ಅಂದಿನಿಂದ ಆರಂಭವಾಯಿತು. ನೋಂಪಿ ಆಚರಣೆಯ ಪದ್ಧತಿಯು ಮಾನವ ಕಲ್ಯಾಣದ ಸಂಕೇತವಾಗಿದ್ದು, ತ್ರಿಕರಣಪೂರ್ವಕ ಪೂಜಾವಿಧಿ, ಶಾಸ್ತ್ರ ಪಠಣದಿಂದ ಕಾಯಾ-ವಾಚಾ-ಮನಸಾ ನಿರ್ಮಲವಾಗುವ ಮರ್ಮವಿದೆ ಎಂದು ಹೊಂಬುಜ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಜುಲೈ 21ರ ಭಾನುವಾರದಂದು ಗುರುಪೂರ್ಣಿಮೆಯ ವಿಶೇಷ ಪೂಜೆ ನೆರವೇರಿದ ಬಳಿಕ ಭಕ್ತವೃಂದದವರನ್ನು ಆಶೀರ್ವದಿಸಿ ಪ್ರವಚನದಲ್ಲಿ ತಿಳಿಸಿ, ಗುರು ಎಂದರೆ ಭಗವಂತ ಎಂದು ತಿಳಿಸಿದರು.
ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿವೃಂದ, ಹೊಂಬುಜ ಜೈನ ಸಮಾಜ ಬಾಂಧವರು, ಶ್ರೀ ಪದ್ಮಾಂಬ ಜೈನ ಮಹಿಳಾ ಮಂಡಲದ ಶ್ರಾವಿಕೆಯರು, ಪರವೂರ ಭಕ್ತರು ಪೂಜಾ ವಿಧಿ-ವಿಧಾನಗಳಲ್ಲಿ ಭಾಗವಹಿಸಿದ್ದರು.

ಪೂಜ್ಯ ಶ್ರೀಗಳವರಿಗೆ ಭಕ್ತಿಪೂರ್ವಕ ನಮನಗಳನ್ನು ಸಮರ್ಪಿಸಿದರು. ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀಮಹಾವೀರ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಪರಂಪರಾಗತ ಪೂಜಾ ವಿಧಾನಗಳು ನೆರವೇರಿದವು.
ಗ್ರಾ.ಪಂ. ಅಧ್ಯಕ್ಷನ ಮನೆಯಲ್ಲಿ ಸಿಗ್ತು ಕಂತೆ ಕಂತೆ ಹಣ, ಚಿನ್ನಾಭರಣ !

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.