ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ರೈತ ಆತ್ಮಹತ್ಯೆ !

Written by malnadtimes.com

Published on:

RIPPONPETE | ಸಾಲಬಾಧೆ ತಾಳಲಾರದೆ ರೈತನೋರ್ವ (Farmer) ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಕೆಂಚನಾಲ (Kenchanala) ಗ್ರಾಮದಲ್ಲಿ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಕೆಂಚನಾಲ ಗ್ರಾಮದ ಕೊಲ್ಲೂರಪ್ಪ (55) ಆತ್ಮಹತ್ಯೆಗೆ ಶರಣಾದ ರೈತ. ಈತ ಕಳೆದ ವರ್ಷದ ಮಳೆ ಸರಿಯಾಗಿ ಬಾರದೆ ಬೆಳೆ ನಷ್ಟವಾಗಿದ್ದು ಈ ಬಾರಿ ಮಳೆ ಹೆಚ್ಚಾಗಿ ಹಾಕಿದ ಶುಂಠಿ, ಅಡಿಕೆ ಬೆಳೆ ನಾಶವಾಗಿದ್ದು ಬೆಳೆಯ ಮೇಲೆ ಮಾಡಲಾದ ಸಾಲ ಬಾಧೆಯಿಂದ ಮನನೊಂದು ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಧರ್ಮಸ್ಥಳ ಸಂಘದಲ್ಲಿ ಬೆಳೆ ಅಭಿವೃದ್ದಿಗೆ 4 ಲಕ್ಷ ರೂ., ಚೈತನ್ಯ ಫೈನಾಸ್ಸ್ ನಲ್ಲಿ 76 ಸಾವಿರ ರೂ. ಹಾಗೂ ರಿಪ್ಪನ್‌ಪೇಟೆ ಕೆನರಾ ಬ್ಯಾಂಕ್‌ನಲ್ಲಿ 2 ಲಕ್ಷ ರೂ., ಬಂಗಾರ ಅಡವಿಟ್ಟ ಸಾಲ 3 ಲಕ್ಷ ರೂ. ಹಾಗೂ ಯೂನಿಯನ್ ಬ್ಯಾಂಕ್‌ನಲ್ಲಿ 1 ಲಕ್ಷ ರೂ. ಸಾಲ ಪಡೆದು ಬೆಳೆಗೆ ಖರ್ಚು ಮಾಡಿದ್ದರು‌. ಈಗ ಮಳೆ ಅತಿಯಾಗಿ ಬಂದಿದ್ದರಿಂದ ಶುಂಠಿ ಬೆಳೆಯು ಸರಿಯಾಗಿ ಬೆಳೆಯದೇ ಇರುವುದರಿಂದ ರೈತ ಕೊಲ್ಲೂರಪ್ಪ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕುಟುಂಬದವರು ನೀಡಲಾದ ದೂರಿನನ್ವಯ ರಿಪ್ಪನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Comment