HOSANAGARA | ಪಟ್ಟಣಕ್ಕೆ ಹೊಂದಿಕೊಂಡಂತಿರುವ ಮಾವಿನಕೊಪ್ಪ ಸರ್ವೆ ನಂಬರ್ 16ರಲ್ಲಿ ರತ್ನಾಕರ ಬಿನ್ ಹಿರಿಯಣ್ಣನವರ ಅಡಿಕೆ, ಬಾಳೆತೋಟ ಮತ್ತು ಭತ್ತದ ಗದ್ದೆಯ ಮೇಲೆ ಧರೆ ಕುಸಿತವಾಗಿದ್ದು ಕಸಬಾ ಗ್ರಾಮ ಆಡಳಿತಾಧಿಕಾರಿ ಕೌಶಿಕ್ ಹಾಗೂ ರೆವಿನ್ಯೂ ಇನ್ಸ್‌ಪೆಕ್ಟರ್ ರೇಣುಕಯ್ಯನವರು ಸ್ಥಳ ತನಿಖೆ ಕಾರ್ಯ ಕೈಗೊಂಡಿದ್ದಾರೆ.

ಪಟ್ಟಣ ಪಂಚಾಯತಿಯ 10ನೇ ವಾರ್ಡ್‌ನ ಚರಂಡಿಯ ನೀರು, ಎಪಿಎಂಸಿ ಯಾರ್ಡ್ ನೀರು, ಇಂಡಸ್ಟ್ರಿಯಲ್ ಸಮೀಪದ ನೀರು, ಮಾವಿನಕೊಪ್ಪದ ಕೋಡಿ ನೀರು ಹಾಗೂ ಮಾವಿನಕೊಪ್ಪ ಕೆರೆಯ ನೀರು (ಕೆರೆ ದಂಡೆ ಸರಿಯಿಲ್ಲ) ಒಟ್ಟು ಸೇರಿ ಇವರ ಗದ್ದೆ, ತೋಟದ ಮಧ್ಯೆ ಹಾದು ಹೋಗುತ್ತಿರುವುದರಿಂದ ತೋಟದ ಧರೆ ಕುಸಿದಿದೆ ಎಂದು ಹೇಳಲಾಗಿದ್ದು ಮುಂದಿನ ದಿನದಲ್ಲಿ ಈ ನೀರು ಬೇರೆ ಮಾರ್ಗವಾಗಿ ಹೊಳೆಗೆ ತಲುಪಿಸದಿದ್ದರೆ ಹೋರಾಟ ಅನಿವಾರ್ಯ ಎಂದು ತೋಟದ ಮಾಲೀಕ ರತ್ನಾಕರ್ ತಿಳಿಸಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.