HOSANAGARA | ಸರ್ಕಾರದ ವಿಶೇಷ ಅನುದಾನದಲ್ಲಿ ಪಟ್ಟಣ ಪಂಚಾಯತಿಯ ನೂತನ ಕಟ್ಟಡ ನಿರ್ಮಿಸಿ ಅದನ್ನು ಬಿಟ್ಟು ಯಾವುದೇ ಕಾರಣಕ್ಕೂ ನಮ್ಮ ಪಟ್ಟಣ ಪಂಚಾಯತಿಯ ಅನುದಾನದಲ್ಲಿ ಕಟ್ಟಡ ನಿರ್ಮಿಸಲು ಸಾಧ್ಯವಿಲ್ಲ ಎಂದು ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಹಾಲಗದ್ದೆ ಉಮೇಶ್ ತಿಳಿಸಿದರು.
ಇಲ್ಲಿನ ಪಟ್ಟಣ ಪಂಚಾಯತಿ ಸಾಮಾನ್ಯ ಸಭೆಯನ್ನು ಪಟ್ಟಣ ಪಂಚಾಯತಿಯ ಆವರಣದಲ್ಲಿ ಶುಕ್ರವಾರ ನಡೆಸಲಾಗಿದ್ದು ಈ ಸಭೆಯು ಆಡಳಿತಾಧಿಕಾರಿ ತಹಶೀಲ್ದಾರ್ ರಶ್ಮಿ ಹಾಲೇಶ್ ಅಧ್ಯಕ್ಷತೆಯಲ್ಲಿ ನಡೆಸಲಾಗಿದ್ದು ಈ ಸಭೆಯ ಗಮನಕ್ಕೆ ತಂದರು.
ನೂತನ ಕಟ್ಟಡಕ್ಕೆ 2 ಕೋಟಿ ರೂ. ಬೇಕು :
ಪಟ್ಟಣ ಪಂಚಾಯತಿಯ ನೂತನ ಕಟ್ಟಡ ನಿರ್ಮಿಸಲು ಈಗಾಗಲೇ ಸರ್ಕಾರದ ಪ್ರಾಸ್ತಾವನೆಗೆ ಕಳುಹಿಸಲಾಗಿದ್ದು ನಮ್ಮ ಪಟ್ಟಣ ಪಂಚಾಯತಿಯಲ್ಲಿ ಕಟ್ಟಡಕ್ಕೆ ಬೇಕಾಗುವಷ್ಟು ಅನುದಾನವಿಲ್ಲ. ಕಟ್ಟಡಕ್ಕೆ ಅನುದಾನ ಬಳಸಿದರೆ ಹೊಸನಗರ ಪಟ್ಟಣ ಪಂಚಾಯತಿಯ ಅಭಿವೃದ್ಧಿಯಾಗುವುದಿಲ್ಲ. ಪಟ್ಟಣ ಪಂಚಾಯತಿಯ ನೂತನ ಕಟ್ಟಡ ಸರ್ಕಾರದ ವಿಶೇಷ ಅನುದಾನದಲ್ಲಿ ನಿರ್ಮಿಸಿದರೇ ಬೇಕಾಗುವಂಥಹ ಪೀಠೋಪಕರಣದ ವ್ಯವಸ್ಥೆ ಪಟ್ಟಣ ಪಂಚಾಯತಿಯಿಂದ ಮಾಡಬಹುದು ಎಂದು ಪಟ್ಟಣ ಪಂಚಾಯತಿ ಸದಸ್ಯ ಅಶ್ವಿನಿಕುಮಾರ್ ಸಭೆಯ ಗಮನಕ್ಕೆ ತಂದರು.
ವಿವಿಧ ಮಳಿಗೆಯಿಂದ 40,32,476 ರೂ. ಬಾಕಿ :
ಹೊಸನಗರ ಪಟ್ಟಣ ಪಂಚಾಯತಿಗೆ ಜೂನ್ ಅಂತ್ಯದವರೆಗೆ ವಿವಿಧ ಮಳಿಗೆ ಬಾಕಿ ಸುಮಾರು 40,32,476 ರೂಪಾಯಿ ಇದೆ ಎಂದು ಕಂದಾಯ ಇಲಾಖೆಯ ಪರಶುರಾಮ್ ಸಭೆಗೆ ತಿಳಿಸಿದ್ದು, ಇಷ್ಟು ಬಾಕಿಯಗುವವರೆಗೆ ಏಕೆ ಇಟ್ಟುಕೊಂಡಿದ್ದೀರಿ ? ತಕ್ಷಣ ಬಾಕಿ ವಸೂಲಿ ಮಾಡಿ ಇಲ್ಲವಾದರೇ ಮಳಿಗೆಗಳಿಗೆ ಬೀಗ ಹಾಕಿ ಕ್ರಮಕೈಗೊಳ್ಳಿ ಎಂದು ಸದಸ್ಯರು ಆಗ್ರಹಿಸಿದ್ದು, ನಾವು ವಸೂಲಿ ಮಾಡುತ್ತೇವೆ ಇಲ್ಲವಾದರೆ ಬಾಕಿದಾರರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಆದರೆ ಯಾವುದೇ ಸದಸ್ಯರು ಬಾಕಿದಾರರ ಪರ ಬರಬೇಡಿ ಫೋನ್ ಮಾಡಬಾರದು ಎಂದು ರೆವಿನ್ಯೂ ಇನ್ಸ್ಪೆಕ್ಟರ್ ಮಂಜುನಾಥ್ ಸಭೆಗೆ ತಿಳಿಸಿದರು. ನಾವೆಲ್ಲರೂ ಫೋನ್ ಮಾಡುವುದಿಲ್ಲ ಎಂದು ಎಲ್ಲ ಸದಸ್ಯರು ಒಕ್ಕೊರಲಿನಿಂದ ಒಪ್ಪಿಕೊಂಡರು.
ಮೇಲ್ಭಾಗದಲ್ಲಿ ಸಂತೆ ಮಾರ್ಕೆಟ್ :
ಹೊಸನಗರದ ಸಂತೆ ಮಾರ್ಕೆಟ್ ಇಷ್ಟು ದಿನದವರೆಗೆ ಬಿಲ್ಡಿಂಗ್ನ ಕೆಳ ಭಾಗದಲ್ಲಿ ಸಂತೆ ನಡೆಯುತ್ತಿದ್ದು ಕೆಳಭಾಗದಲ್ಲಿ ಸರಿಯಾಗಿ ಸಂತೆ ನಡೆಸಲು ಸಾಧ್ಯವಾಗುತ್ತಿಲ್ಲ. ಜಾಗ ಇಕ್ಕಟ್ಟಾಗುತ್ತಿರುವುದರಿಂದ ಮುಂದಿನ ದಿನದಲ್ಲಿ ಮೇಲ್ಭಾಗದಲ್ಲಿ ಮತ್ತು ಕೆಳ ಭಾಗದಲ್ಲಿ ಶನಿವಾರ ಸಂತೆ ಮಾಡಲಾಗುವುದು ಇದಕ್ಕೆ ಸಾರ್ವಜನಿಕರ ಒಪ್ಪಿಗೆ ಮುಖ್ಯವಾಗಿದ್ದು ಸಾರ್ವಜನಿಕರಿಗೆ ತಿಳುವಳಿಕೆ ಹೇಳಲಾಗುವುದು ಎಂದು ಸಭೆಯಲ್ಲಿ ಎಲ್ಲ ಸದಸ್ಯರು ತೀರ್ಮಾನಿಸಲಾಯಿತು.
ಇಂದಿನ ಸಭೆಯಲ್ಲಿ 26 ವಿಷಯಗಳು ಚರ್ಚೆಗೆ ಬಂದಿದ್ದು ಯಾವುದೇ ಗೊಂದಲಗಳಿಲ್ಲದೆ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ಮುಖ್ಯಾಧಿಕಾರಿ ಎಂ.ಕೆ. ಸುರೇಶ್, ಪಟ್ಟಣ ಪಂಚಾಯತಿ ಸದಸ್ಯರಾದ ಹಾಲಗದ್ದೆ ಉಮೇಶ್, ಅಶ್ವಿನಿಕುಮಾರ್, ಕೃಷ್ಣವೇಣಿ, ಗಾಯಿತ್ರಿ ನಾಗರಾಜ್, ಆರ್ ಗುರುರಾಜ್, ನಾಗಪ್ಪ, ಶಾಹಿನ ನಸೀರ್, ಆರ್ ಗುರುರಾಜ್, ಹೆಚ್.ಎಂ ನಿತ್ಯಾನಂದ, ಸಿಂಥಿಯಾ, ನೇತ್ರಾ ಸುಬ್ರಾಯಭಟ್, ಪಟ್ಟಣ ಪಂಚಾಯತಿಯ ನೌಕರರಾದ ನೇತ್ರಾ, ಗಿರೀಶ್, ಮಂಜುನಾಥ್, ಕಂದಾಯ ಇಲಾಖೆಯ ಪರಶುರಾಮ್ ಇಂಜಿನಿಯರ್ ವಿಠಲ್ ಹೆಗಡೆ, ಲಕ್ಷ್ಮಣ, ಉಮಾ ಶಂಕರ್, ಬಸವರಾಜ್, ಸುಮಿತ್ರಾ, ಚಂದ್ರಪ್ಪ, ಸರೋಜ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
Read more
ಅತಿವೃಷ್ಠಿಯಿಂದ ಹಾನಿ ಸಂತ್ರಸ್ಥರಿಗೆ ಪರಿಹಾರ ಒದಗಿಸಲು ಸರ್ಕಾರ ಬದ್ಧ ; ಕಲಗೋಡು ರತ್ನಾಕರ