SHIVAMOGGA | ಗಾಂಜಾ ಮಾರಾಟ ಮಾಡುತ್ತಿದ್ದರುವುದರ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾನೆಂದು ವ್ಯಕ್ತಿಯನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ 8 ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ (Life Imprisonment) ವಿಧಿಸಿ ಶಿವಮೊಗ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (Court) ತೀರ್ಪು ಪ್ರಕಟಿಸಿದೆ.
Gruha Lakshmi DBT Status : ಸೇವಾ ಸಿಂಧುವಿನಲ್ಲಿ ಗೃಹಲಕ್ಷ್ಮಿ ಡಿಬಿಟಿ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ ?
ಅಪರಾಧಿಗಳನ್ನು ಲತೀಫ್ (20), ಪರ್ವೇಜ್ (23), ಸೈಯದ್ ಜಿಲಾನ್ (19), ಜಾಫರ್ ಸಾದಿಕ್ (20), ಸೈಯದ್ ರಾಜೀಕ್ (28), ಮಹಮ್ಮದ್ ಶಾಬಾಜ್ (19), ಸಾಬಿರ್ (24) ಮತ್ತು ಮಹಮ್ಮದ್ ಯೂಸುಫ್ (26) ಎಂದು ಗುರುತಿಸಲಾಗಿದೆ.
ಈ ಅಪರಾಧಿಗಳು 2021ರ ಸೆ.18ರಂದು, ಗಾಂಜಾ ಮಾರಾಟದ ಕುರಿತು ಪೊಲೀಸರಿಗೆ ಮಾಹಿತಿ ಕೊಡುತ್ತಾನೆಂಬ ಕಾರಣಕ್ಕೆ ಇರ್ಫಾನ್ (36) ಎಂಬ ವ್ಯಕ್ತಿಯನ್ನು ಚಿಪ್ಪುನಗರದಲ್ಲಿ ಕೊಲೆ ಮಾಡಿದ್ದರು. ಮೃತನ ಸಹೋದರ ನೀಡಿದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ತುಂಗಾನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಅಲ್ಲದೇ ಈ ಆರೋಪಿಗಳಿಗೆ ಜಾಮೀನು ನೀಡಬಾರದು. ಜಾಮೀನು ನೀಡಿದರೆ ಮೃತ ಇರ್ಫಾನ್ ಕುಟುಂಬಕ್ಕೆ ತೊಂದರೆ ನೀಡುತ್ತಾರೆ ಎಂದು ಪೊಲೀಸರು ಹಾಗೂ ಸರ್ಕಾರಿ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
5ನೇ ಆರೋಪಿ ಸೈಯದ್ ರಾಜೀಕ್ ಈತನು ಮೃತಪಟ್ಟಿದ್ದು, ವಾದ-ವಿವಾದ ಆಲಿಸಿದ ನ್ಯಾಯಾಲಯ 7 ಜನ ಆರೋಪಿಗಳಿಗೆ ತಲಾ 5 ಸಾವಿರ ರೂ. ದಂಡ ಹಾಗೂ ಜೀವಾವಧಿ ಶಿಕ್ಷೆ ವಿಧಿಸಿ ಆ.09 ರಂದು ತೀರ್ಪು ಪ್ರಕಟಿಸಿದೆ. ಮೃತ ಇರ್ಫಾನ್ ಪತ್ನಿಗೆ ದಂಡದ ಮೊತ್ತದಲ್ಲಿ 30 ಸಾವಿರ ರೂ. ಗಳನ್ನು ನೀಡಲು ಆದೇಶಿಸಲಾಗಿದೆ.
ನಾಗರ ಪಂಚಮಿ ಹೆಣ್ಣು ಮಕ್ಕಳ ದೊಡ್ಡ ಹಬ್ಬ ; ರಂಭಾಪುರಿ ಶ್ರೀಗಳು
ಶಿವಮೊಗ್ಗ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಪಿ.ಓ. ಪುಷ್ಪ ಪ್ರಕರಣದ ವಾದ ಮಂಡಿಸಿದ್ದಾರೆ.