RIPPONPETE :; ನಾಡಿನಲ್ಲಿ ಕಾಣುವ ಶೈಕ್ಷಣಿಕ ಸಾಮಾಜಿಕ ಧಾಮಿಕ ಔದ್ಯೋಗಿಕ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಲಿಂ. ಹಾನಗಲ್ಲ ಕುಮಾರ ಮಹಾಸ್ವಾಮಿಗಳವರ ನಿಸ್ವಾರ್ಥ ಸೇವೆ ಒಂದಿಲ್ಲೊಂದು ಬಗೆಯಲ್ಲಿ ಸಮಾಜಕ್ಕೆ ದೊರಕಿದೆ. ಅವರು ಸಮಾಜಕ್ಕೆ ಸಲ್ಲಿಸಿದ ಅಪೂರ್ವ ಸೇವೆಯನ್ನು ಜನಮಾನಸಕ್ಕೆ ತಿಳಿಸಬೇಕಾದುದ್ದು ಅವರಿಂದ ಉಪಕೃತವಾದ ಸಮಾಜದ ಅಧ್ಯ ಕರ್ತವ್ಯವಾಗಿದೆ ಎಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮೀಜಿ ಹೇಳಿದರು.
ಸದಾನಂದ ಶಿವಯೋಗಾಶ್ರಮದ ಮೂಲೆಗದ್ದೆ ಮಠದಲ್ಲಿ ಆಯೋಜಿಸಲಾದ ಲಿಂ. ಹಾನಗಲ್ಲ
ಕುಮಾರ ಮಹಾಶಿವಯೋಗಿಗಳವರ 157ನೇ ಜಯಂತಿ ಮಹೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಲಿಂ. ಹಾನಗಲ್ಲ ಶ್ರೀ ಕುಮಾರಸ್ವಾಮಿಗಳು ಕನ್ನಡ ನಾಡು ಕಂಡ ಅಪೂರ್ವ ತ್ಯಾಗಯೋಗಿಗಳು. ಸಮಗ್ರ ಸಮಾಜವನ್ನು ಉದ್ದರಿಸಿದ ಯುಗವತಾರಿಗಳು. ಬಸವಾದಿ ಶಿವಶರಣರ ಸದಾಶಯದ ಜಾತಿ, ವರ್ಗ ವರ್ಣರಹಿತ ರಾಷ್ಟ್ರನಿರ್ಮಾಣಕ್ಕೆ ಅಹೋರಾತ್ರಿ ಪರಿಶ್ರಮಿಸಿದ ದಿವ್ಯ ಚೇತನರು. ಹಾನಗಲ್ಲ ಶಿವಯೋಗಿಗಳ ಜೀವನ ಮತ್ತು ಸಂದೇಶಗಳು ಇಂದಿಗೂ ತುಂಬ ಪ್ರಸ್ತುತವಾಗಿವೆ. ಇಂತಹವರ ಅದರ್ಶಗಳು ಇಂದಿನ ಯುವ ಜನಾಂಗಕ್ಕೆ ಅನರ್ಘ್ಯರನ್ನವಿದ್ದಂತೆ ಎಂದು ಹೇಳುವ ಮೂಲಕ ಆವರ ತತ್ವಾದರ್ಶಗಳನ್ನು ಮೈಗೊಡಿಸಿಕೊಳ್ಳುವಂತೆ ಯುವಜನಾಂಗಕ್ಕೆ ಕರೆ ನೀಡಿ, ಹಾನಗಲ್ಲ ಲಿಂ ಕುಮಾರ ಮಹಾಸ್ವಾಮೀಜಿಯವರು 1904 ಅಖಿಲಭಾರತ ವೀರಶೈವ ಮಹಾಸಭೆ ಸ್ಥಾಪನೆ ಮಾಡಿ 1909ರಲ್ಲಿ ಸ್ವಾಮಿಗಳನ್ನು ತಯಾರು ಮಾಡುವುದಾಗಿ ಶಿವಯೋಗ ಮಂದಿರವನ್ನು ಸ್ಥಾಪನೆಯನ್ನು ಮಾಡುದಂತಹ ಹೆಗ್ಗಳಿಕೆ ಮಹಾಸ್ವಾಮೀಜಿಯವರಿಗೆ ಸಲ್ಲುವುದೆಂದರು.
ಈ ಸಂದರ್ಭದಲ್ಲಿ ಪ್ರಭುಲಿಂಗದೇವರು, ಶಿವಬಸವ ದೇವರು, ಡಿ.ಈ.ಮಧುಸೂದನ್, ವಾಣಿ ಮಧುಸೂದನ್ ಇನ್ನಿತರರು ಹಾಜರಿದ್ದರು.