RIPPONPETE ; ಇಲ್ಲಿನ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದ ತಿಲಕ್ ಮಂಟಪದಲ್ಲಿ 11 ದಿನ ಪ್ರತಿಷ್ಟಾಪಿಸಲಾಗಿರುವ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇವಾ ಸಮಿತಿಯ 57ನೇ ಗಣೇಶೋತ್ಸವ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವಕ್ಕೆ ಹೆಸರಾಂತ ಜಾನಪದ ಕಲಾತಂಡಗಳ ಮೆರಗಿನೊಂದಿಗೆ ಗಣಪತಿ ಉತ್ಸವ ಸಾಗುವ ಮಾರ್ಗದಲ್ಲಿ ತಳಿರು ತೋರಣ ಮತ್ತು ರಂಗೋಲಿಯೊಂದಿಗೆ ಉತ್ಸವವನ್ನು ಸ್ವಾಗತಿಸುವ ಮೂಲಕ ಭರಮಾಡಿಕೊಳ್ಳುತ್ತಿದ್ದಾರೆ.
ಇದರೊಂದಿಗೆ ಡಿ.ಜೆ.ಸೌಂಡ್‌ಗೆ ಕುಣಿದು ಕುಪ್ಪಳಿಸುತ್ತಿದ್ದು ಯುವಕ-ಯುವತಿಯರ ನೃತ್ಯ ಜನಾಕರ್ಷಣೆಗೊಳಿಸಿದೆ. ಮಧ್ಯಾಹ್ನ 12.30ಕ್ಕೆ ವಿಸರ್ಜನಾ ಪೂಜೆಯು 57ನೇ ವರ್ಷದ ಸೇವಾ ಸಮಿತಿಯವರ ಮತ್ತು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಆರ್ಚಕ ವೇ.ವಿ.ರವಿಭಟ್ (ರಘುನಾಥಭಟ್) ಇತರ ಪುರೋಹಿತ ಬಳಗದವರಿಂದ ಜರುಗಿತು. ನಂತರ ಸಂಜೆ 5.30 ಗಂಟೆಗೆ ಗಣಪತಿಯನ್ನು ವಿದ್ಯುತ್ ದೀಪಾಲಂಕೃತ ತೆರೆದ ವಾಹನದಲ್ಲಿ ಕುಳ್ಳಿರಿಸಲಾಗಿದ್ದು ಗಣಪತಿ ರಾಜಬೀದಿ ಉತ್ಸವಕ್ಕೆ ನಿಟ್ಟೂರು ನಾರಾಯಣಗುರು ಸಂಸ್ಥಾನಮಠದ ಶ್ರೀರೇಣುಕಾನಂದ ಸ್ವಾಮೀಜಿ ಚಾಲನೆ ನೀಡಿದರು.
ರಾಜಬೀದಿ ಉತ್ಸವ ಹೊರಡುತ್ತಿದ್ದಂತೆ ಭದ್ರಾವತಿ ಅರಕೆರೆಯ ವೀರಗಾಸೆ, ಶಿಗ್ಗಾಂವ್‌ನ ಜಾಂಜಾ ಪಥಾಕ್, ಚನ್ನಪಟ್ಟಣದ ಕೀಲು ಕುದುರೆ, ಗೊಂಬೆ ಕುಣಿತ, ನಗಾರಿ ಹಾಗೂ ಸುತ್ತಮುತ್ತಲಿನ ಹೆಸರಾಂತ ಡೊಳ್ಳು ತಂಡ ಮತ್ತು ತಟ್ಟಿರಾಯ ತಂಡಗಳಿಂದ ಮನರಂಜನಾ ಕಾರ್ಯಕ್ರಮದೊಂದಿಗೆ ಡಿಜೆ ಸೌಂಡ್‌ನ ಸದ್ದಿಗೆ ಯುವಕ-ಯುವತಿಯರು ಕುಣಿದು ಕುಪ್ಪಳಿಸುತ್ತಿದ್ದ ದೃಶ್ಯ ಭಕ್ತ ಸಮೂಹವನ್ನು ಆಕರ್ಷಿಸುತ್ತಿದೆ.
ಉತ್ಸವ ವಿನಾಯಕ ವೃತ್ತಕ್ಕೆ ಬರುತ್ತಿದ್ದಂತೆ ಮುಸ್ಲಿಂ ಮುಖಂಡರು ಗಣಪತಿಗೆ ಹಾರಹಾಕಿ ಸಂಭ್ರಮಿಸಿದರು. ಶಾಸಕ ಗೋಪಾಲಕೃಷ್ಣ ಬೇಳೂರು ಮತ್ತು ಶಾಸಕ ಆರಗ ಜ್ಞಾನೆಂದ್ರ ಮಾಜಿ ಸಚಿವ ಹರತಾಳು ಹಾಲಪ್ಪ ತಮ್ಮ ಬೆಂಬಲಿಗರೊಂದಿಗೆ ಬಂದು ಗಣಪತಿ ಮೂರ್ತಿಗೆ ಹಾರಹಾಕಿ ವಿಘ್ನನಿವಾರಕನ ದರ್ಶನಶೀರ್ವಾದ ಪಡೆದರು.
ರಾತ್ರಿ 10-30 ಕ್ಕೆ ವಿನಾಯಕ ವೃತ್ತದಲ್ಲಿ ಎನ್.ಆರ್.ಪುರ ಅಭಿನವ ಮ್ಯೂಜಿಕಲ್ ಇವೆಂಟ್ಸ್ ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಬುಧವಾರ ಮಧ್ಯಾಹ್ನ ವೇಳೆ ಹೊಸನಗರ ರಸ್ತೆ ತಾವರೆಕೆರೆಯಲ್ಲಿ ಗಣೇಶ ಮೂರ್ತಿಯ ವಿಸರ್ಜನೆ ನಡೆಯಲಿದೆ.
ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ ಅಧ್ಯಕ್ಷ ರಾಮಚಂದ್ರ ಬಳೆಗಾರ, ಗ್ರಾಮ ಪಂಚಾಯತ್ ಅಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಬಳ್ಳಾರಿ, ವರಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಆರ್.ಈ ಈಶ್ವರಶೆಟ್ಟಿ, ಎಂ.ಬಿ.ಮಂಜುನಾಥ, ಉಪಾಧ್ಯಕ್ಷ ಆರ್.ರಾಘವೇಂದ್ರ, ಎಂ.ಸುರೇಶ್‌ಸಿಂಗ್, ವೈ.ಜೆ.ಕೃಷ್ಣ, ಎನ್.ಸತೀಶ್, ನಾಗರಾಜ ಪವಾರ್, ಪಿ.ಸುದೀರ್, ಹೆಚ್.ಆರ್.ಆಶೋಕ್, ವೀರಭದ್ರಪ್ಪಗೌಡ, ಡಿ.ಈ.ರವಿಭೂಷಣ, ಸಂದೀಪ್‌ಶೆಟ್ಟಿ, ಹೆಚ್. ಎನ್.ಚೂಳರಾಜ್, ತೀರ್ಥೇಶ್ ಅಡಿಕಟ್ಟು, ಆರ್.ರಂಜನ್, ಆಟೋ ಲಕ್ಷ್ಮಣ, ಆರ್.ಹೆಚ್.ಶ್ರೀನಿವಾಸ್ ಆಚಾರ್, ಕೆ.ಎ.ನಾರಾಯಣ, ಭಾಸ್ಕರ್ ಆಚಾರ್, ಹೆಚ್.ಎನ್.ಉಮೇಶ್, ಬಿ.ಎಸ್.ಎನ್.ಎಲ್. ಶ್ರೀಧರ, ಮಳಕೊಪ್ಪ ಈಶ್ವರ, ಕಗ್ಗಲಿ ಲಿಂಗಪ್ಪ, ಶಾಂತಕುಮಾರ್, ಆರ್.ಎಂ. ನಿರಂಜನ್, ಶ್ರೀನಿವಾಸ್ ಆಚಾರ್, ದೇವರಾಜ್, ಇನ್ನಿತರ ಪದಾಧಿಕಾರಿಗಳು ಹಾಜರಿದ್ದರು.