49 ಲಕ್ಷ ರೂ. ಲಾಭದಲ್ಲಿ ಕೊಡಚಾದ್ರಿ ಅಡಿಕೆ ಸೌಹಾರ್ದ ಸಹಕಾರಿ ಸಂಘ

Written by Mahesha Hindlemane

Published on:

HOSANAGARA ; ಪ್ರಸಕ್ತ ಸಾಲಿನಲ್ಲಿ ಸಂಸ್ಥೆ 49,24,344 ರೂ‌. ನಿವ್ವಳ ಲಾಭಗಳಿಸಿದ್ದು, ಷೇರುದಾರರಿಗೆ ಶೇ. 8 ಲಾಭಾಂಶ ಘೋಷಿಸಿದೆ ಎಂದು ಕೊಡಚಾದ್ರಿ ಅಡಿಕೆ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಅವುಕ ಹೆಚ್.ಎಂ‌. ರಾಘವೇಂದ್ರ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಪಟ್ಟಣದ ಗಾಯತ್ರಿ ಮಂದಿರದಲ್ಲಿ ಶುಕ್ರವಾರ ನಡೆದ ಕೊಡಚಾದ್ರಿ ಅಡಿಕೆ ಸೌಹಾರ್ದ ಸಹಕಾರಿ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದುಡಿಯುವ ಬಂಡವಾಳ ಮೀರಿ ಸದಸ್ಯರಿಗೆ ಕೆಲವು ಪ್ರಕರಣಗಳಲ್ಲಿ ಸಾಲ ವಿತರಿಸಲಾಗಿದ್ದು, ಶೀಘ್ರದಲ್ಲಿಯೇ ಸದರಿ ಸಾಲಗಳ ಚುಕ್ತಕ್ಕೆ ಕ್ರಮ ಕೈಗೊಳ್ಳಲಾಗುವುದು. ಷೇರುದಾರರು ಈ ಕುರಿತು ಆತಂಕ ಪಡುವ ಅಗತ್ಯವಿಲ್ಲ ಎಂಬ ಭರವಸೆ ನೀಡಿದರು.

ಈ ಷೇರುದಾರರ ಸಂಖ್ಯೆಯನ್ನು 6 ಸಾವಿರಕ್ಕೆ ಏರಿಸಲಾಗುವುದು. ಸಹಕಾರಿ ವ್ಯವಹಾರಕ್ಕೆ 10 ಕೋಟಿ ರೂ. ಅಗತ್ಯ ಸಾಲವನ್ನು ಡಿಸಿಸಿ ಬ್ಯಾಂಕಿನಿಂದ ಪಡೆಯುವುದಾಗಿ ಸಭೆಗೆ ತಿಳಿಸಿದರು.

ಸಿಇಓ ಎನ್. ಬಿ. ಬಾಲಚಂದ್ರ ಮಾತನಾಡಿ, ಪಟ್ಟಣದ ನೆಹರು ರಸ್ತೆಯ ನೂತನ ಕಟ್ಟಡಕ್ಕೆ ಪ್ರಧಾನ ಕಚೇರಿಯನ್ನು ಸ್ಥಳಾಂತರ ಮಾಡಿ, ಎಪಿಎಂಸಿ ಪ್ರಾಂಗಣದ ಕಟ್ಟಡವನ್ನು ಅಡಿಕೆ ದಲ್ಲಾಳಿ ಮಂಡಿ ವ್ಯಾಪಾರಕ್ಕೆ ಮೀಸಲಿಡಲು ಆಡಳಿತ ಸಮಿತಿ ತೀರ್ಮಾನಿಸಿದೆ. ಆನಂದಪುರ ಎಪಿಎಂಸಿ ಪ್ರಾಂಗಣದಲ್ಲಿ ನೂತನ ಅಡಿಕೆ ದಲ್ಲಾಳಿ ಶಾಖೆ ತೆರೆಯುವುದು ಹಾಗು ಸಾಗರದ ವರದಾ ರಸ್ತೆಯ ಹೆಚ್ಡಿಕೆ ಕಟ್ಟಡದಲ್ಲಿ ತೋಟಗಾರಿಕಾ ಮತ್ತು ಅರಣ್ಯ ಉಪ ಉತ್ಪನ್ನ ನೇರ ಖರೀದಿ ಮತ್ತು ಮಾರಾಟ ಕೇಂದ್ರ ತೆರೆಯಲು ಚಿಂತನೆ ನಡೆದಿದೆ ಎಂದರು.

ಇದಕ್ಕೂ ಮೊದಲು ನಿಧನ ಹೊಂದಿದ ಸಹಕಾರಿ ಸದಸ್ಯ ರೈತರಿಗೆ ಶ್ರದ್ಧಾಂಜಲಿ, ಅವರ ಶೈಕ್ಷಣಿಕ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.

ಮಹಾಸಭೆಯ ತಿಳುವಳಿಕೆ ಪತ್ರ ಓದಿ,ಹಾಜರಾತಿ ದೃಢೀಕರಿಸಿದರು. 2023-24ನೇ ಸಾಲಿನ ಆಡಳಿತ – ಲೆಕ್ಕಪರಿಶೋಧನಾ ವರದಿ ಮಂಡನೆ, ಆಯವ್ಯಯ ಪತ್ರ ಅಂಗೀಕಾರ ನಡೆಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷ ವಸವೆ ಈಶ್ವರಪ್ಪ, ನಿರ್ದೇಶಕರಾದ ಹನಿಯ ರವಿ, ಕುಂಬತ್ತಿ ಕೃಷ್ಣಮೂರ್ತಿ, ಹುಲಗಾರು ಜಗದೀಶ್, ದುಮ್ಮ ಗಣಪತಿ, ಬಣ್ಣುಮನೆ ಆದಿತ್ಯ, ಭದ್ರಾಪುರ ರಾಜಶೇಖರ, ನಿವಣೆ ಪ್ರತಿಮಾ ಭಟ್, ವಿದ್ಯಾ ಸಂತೋಷ್ ಪೈ ಇದ್ದರು.

ಸಿಇಒ ಬಾಲಚಂದ್ರ ಸ್ವಾಗತಿಸಿ, ಮರುಡುಮನೆ ಎಂ.ಜಿ.ರಾಮಚಂದ್ರ ನಿರೂಪಿಸಿದರು.

Leave a Comment